ಚುನಾವಣೆ ಸುಸೂತ್ರವಾಗಿ ನಡೆಯಲು ಮತದಾರರ ಪಟ್ಟಿ ಪಾರದರ್ಶಕವಾಗಿರಬೇಕು:ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಚಳ್ಳಕೆರೆ: ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಚುನಾವಣಾ ಪ್ರಕ್ರಿಯೆಗೆ ವಿಶಿಷ್ಟವಾದ ಸ್ಥಾನವಿದೆ ಎಂದು ತಹಶೀಲ್ದಾರ್ ಎನ್. ರಘುಮೂರ್ತಿ ಹೇಳಿದರು.

ಇಂದು  ತುರುವನೂರು ಹೋಬಳಿಯ ಮತಗಟ್ಟೆ  ಅಧಿಕಾರಿಗಳಿಗೆ ತುರುವನೂರು ಗ್ರಾಮದಲ್ಲಿ ತರಬೇತಿ ನೀಡಿ ಮಾತನಾಡಿದರು.

 

 

ಎಲ್ಲಾ  ಚುನಾವಣೆ ಸುಸೂತ್ರವಾಗಿ ನಡೆಯಬೇಕೆಂದರೆ ಮತದಾರರ ಪಟ್ಟಿ ಪಾರದರ್ಶಕವಾಗಿರಬೇಕು ಮತ್ತು    ಪರಿಶುದ್ಧವಾಗಿರಬೇಕು ಎಂದರು. ಈ ಮತದಾರ ಪಟ್ಟಿ ಪರಿಶುದ್ಧವಾದರೆ ಚುನಾವಣಾ ಪೂರ್ವದ ಶೇಕಡ 75ರಷ್ಟು ಕೆಲಸ ಕಾರ್ಯಗಳು ಪೂರ್ಣಗೊಳ್ಳತ್ತದೆ.  ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರ ಪಟ್ಟಿಯಲ್ಲಿ ನಕಲಿ ಮತದಾರರ ಕಡಿವಾಣಕ್ಕೆ ಗರುಡ ಮೊಬೈಲ್ ಆಪ್ ನಲ್ಲಿ ಪ್ರತಿ ಮತದಾರರ ಆಧಾರ್ ಮತ್ತು ಗುರುತಿನ ಚೀಟಿಯ ಜೋಡಣೆ ಕಾರ್ಯ ಇಂದಿನಿಂದ  ಆರಂಭವಾಗಿದ್ದು ಇದಕ್ಕೆ ಅಯಾ ಮತಗಟ್ಟೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮತಗಟ್ಟೆ ಅಧಿಕಾರಿಗಳನ್ನು ನಿಯೋಜನೆಗೊಳಿಸಿದ್ದು  ಈ ಮತಗಟ್ಟೆ ಅಧಿಕಾರಿಗಳಿಗೆ ಇಂದು ಅಮೂಲ್ಯ ವಾಂತಹ  ತರಬೇತಿಯನ್ನು ಆಯೋಜಿಸಲಾಗಿದೆ.

ಈ ತರಬೇತಿಯಲ್ಲಿ ನೀಡುವಂತಹ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಈ ಒಂದು ಕಾರ್ಯವನ್ನು  ಪೂರ್ಣಗೊಳಿಸಬೇಕು.  ಶಿಕ್ಷಕರುಗಳ ಮೇಲೆ ಸರ್ಕಾರಕ್ಕೆ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ಅಪಾರವಾದ ನಂಬಿಕೆ ಇದೆ. ಮತದಾರರ ಪಟ್ಟಿಯನ್ನು ಶಿಕ್ಷಕರು ನಿರ್ವಹಿಸುತ್ತಾರೆ ಎಂಬ ನಂಬಿಕೆಯಿಂದ ಮಹತ್ವದ  ಜವಾಬ್ದಾರಿಯನ್ನು ನಿಮಗೆ ವಹಿಸಲಾಗಿದೆ.  ಮಕ್ಕಳ ಪಠ್ಯದ ಕಲಿಕೆಗೆ ತಾವು ಎಷ್ಟು ಗಮನ ನೀಡುತ್ತಿರೋ ಅಷ್ಟೇ ಗಮನವನ್ನು ಈ ಮತದಾರ ಪಟ್ಟಿಯ ಪರಿಷ್ಕರಣಿಯ ಕಾರ್ಯಕ್ಕೆ ಶಿಕ್ಷಕರುಗಳು ನೀಡಬೇಕು. ಚುನಾವಣಾ ಕೆಲಸದ ನಿಮಿತ್ತ ತಮಗೆ ಸರ್ಕಾರದಿಂದ ಬರಬೇಕಾಗಿರುವಂತ ಎಲ್ಲಾ ಆರ್ಥಿಕ ಮತ್ತು ಸೇವಾ ಭದ್ರತೆಯ ಸೌಲಭ್ಯಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದರು.

ತುರುವನೂರು ಹೋಬಳಿ ಶಿಕ್ಷಕರ ಸಂಘದ ಅಧ್ಯಕ್ಷ ರಂಗೇಶ ಮಾಸ್ಟರ್ ಡ್ರೈನರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಸತೀಶ್ ಕುಮಾರ್,  ಚುನಾವಣಾ ಶಾಖೆಯ  ಶಕುಂತಲಾ , ತುರುವನೂರ್ ರಾಜಸ್ವ ನಿರೀಕ್ಷಕ ಎಂ.ಎನ್. ಸ್ವಾಮಿ ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours