ಆಗಸ್ಟ್ 1 ರಿಂದ 9 ತಾರೀಖಿನವರೆಗೂ ವಿದ್ಯುತ್ ವ್ಯತ್ಯಯ

 

 

 

 

ಚಿತ್ರದುರ್ಗ, ಜುಲೈ30:
ಏತನೀರಾವವರಿ ಯೋಜನೆಗೆ 6000 ಕೆವಿಎ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಗೋಪುರಗಳನ್ನು ನಿರ್ಮಾಣ ಮಾಡಡಲು 66/11 ಕೆವಿ ಭರಮಸಾಗರ ವಿದ್ಯುತ್ ವಿತರಣಾ ಕೇಂದ್ರಕ್ಕೆ ಸರಬರಾಜು ಮಾಡುವ 66 ಕೆವಿ ಮಾರ್ಗ ಮುಕ್ತತೆಯನ್ನು ನೀಡಬೇಕಾಗಿರುವುದರಿಂದ ಆಗಸ್ಟ್ 01, 03, 5, 7 ಹಾಗೂ 9 ರಂದು ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಭರಮಸಾಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ಆಡಚಣೆಯಾಗುವ ಪ್ರದೇಶಗಳು: ಹೆಗ್ಗೆರೆ, ಎಮ್ಮೆಹಟ್ಟಿ, ನಲ್ಲಿಕಟ್ಟೆ, ಕೋಳಾಳ್, ಎನ್.ಜೆ.ವೈ, ಹೆಗ್ಗಡೆಹಾಳ್, ವಿಜಾಪುರ, ಶಿವನಕೆರೆ, ನಂದಿಹಳ್ಳಿ, ಬಹದ್ದೂರ್ ಘಟ್ಟ, ಅಡವಿಗೊಲ್ಲರಹಟ್ಟಿ, ಭರಮಸಾಗರ, ಪಮೇರಹಳ್ಳಿ, ಕೋಗುಂಡೆ, ಎಸ್.ಕೆ.ಎಂ ಕೈಗಾರಿಕಾ ಪ್ರದೇಶ, ಕೋಡಿಹಳ್ಳಿ, ಅರಳಕಟ್ಟೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours