ವೈಯಕ್ತಿಕ ಗೃಹ ಶೌಚಾಲಯ ನಿರ್ಮಾಣಕ್ಕೆ ಅರ್ಜಿ

 

 

 

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಜುಲೈ 21:
ಸ್ವಚ್ಛ ಭಾರತ್  ಮಿಷನ್ (ಗ್ರಾ) ಯೋಜನೆಯಡಿ ಹೊಸ ಕುಟುಂಬ ಅಥವಾ ಸರ್ವೆಯಿಂದ ಹೊರಗುಳಿದ  ಅರ್ಹ ಫಲಾನುಭವಿಗಳಿಗೆ ವೈಯಕ್ತಿಕ ಗೃಹ ಶೌಚಾಲಯ ನಿರ್ಮಾಣ ಮಾಡಲು ಆನ್‍ಲೈನ್ ಮೂಲಕ ನೇರವಾಗಿ ಅರ್ಜಿಯನ್ನು ಸಲ್ಲಿಸಲು ಎಂಐಎಸ್ ಪೋರ್ಟಲ್‍ನಲ್ಲಿ ಅವಕಾಶ ಕಲ್ಪಿಸಲಾಗಿದೆ.
ಸ್ವಚ್ಛ ಭಾರತ್  ಮಿಷನ್ (ಗ್ರಾ) ಯೋಜನೆಯಡಿ ಪೇಸ್-2 ಅಡಿಯಲ್ಲಿ ಹೊಸ ಕುಟುಂಬ  ಅಥವಾ ಸರ್ವೆಯಿಂದ ಹೊರಗುಳಿದಿರುವ ಅರ್ಹ ಫಲಾನುಭವಿಗಳಿಗೆ ವೈಯಕ್ತಿಕ ಗೃಹ ಶೌಚಾಲಯ ನಿರ್ಮಾಣ ಮಾಡಲು ಕೇಂದ್ರ ಜಲ ಶಕ್ತಿ ಮಂತ್ರಾಲಯವು ನಿರ್ದೇಶಿಸಿದ್ದು, ಫಲಾನುಭವಿಗಳ ಆರ್ಜಿ ಪ್ರಕ್ರಿಯೆಯನ್ನು ಡಿಜಿಟಲೀಕರಣ ಮಾಡಲಾಗಿದೆ.
ಪ್ರಸ್ತುತ ಸ್ವಚ್ಛ ಭಾರತ್  ಮಿಷನ್ (ಗ್ರಾ) ಹಂತ-2 ರ ಮಾರ್ಗಸೂಚಿ ಪ್ರಕಾರ ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿ ಹೊಂದಿರಬೇಕು.
ಈಗಾಗಲೇ ಯೋಜನೆಯಡಿ ಶೌಚಾಲಯ ನೀಡಿದಲ್ಲಿ ಅವಕಾಶ ಇರುವುದಿಲ್ಲ.  ಒಮ್ಮೆ ದಾಖಲಿಸಿದ ಫಲಾನುಭವಿಗಳು ಹೊರತುಪಡಿಸಿ ಕುಟುಂಬದ ಇತರ ಸದಸ್ಯರಿಗೆ ಶೌಚಾಲಯ ನೀಡಿದ್ದಲ್ಲಿ ತಿರಸ್ಕರಿಸಲಾಗುವುದು. ಮನೆ ನಂಬರ್ ಹೊಂದಿದ್ದು, ಶೌಚಾಲಯ ರಹಿತ ಫಲಾನುಭವಿಗಳಿದ್ದಲ್ಲಿ ಮಾಹಿತಿಯನ್ನು ಆಧಾರ್ ಕಾರ್ಡ್, ಪಡಿತರ ಚೀಟಿ, ಪ.ಜಾ, ಪ.ಪಂ ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಬುಕ್ ಪ್ರತಿ, ಮೂಲ ಪ್ರತಿಯೊಂದಿಗೆ ಎಂಐಎಸ್‍ನಲ್ಲಿ https://swachhbharatmissiongov.in/sbmcms/index.htm ನ ಸಿಟಿಜನ್ ಪೋರ್ಟಲ್‍ನಲ್ಲಿ ದಾಖಲಿಸಬಹುದು ಎಂದು ಸ್ವಚ್ಛ ಭಾರತ್ ಮಿಷನ್ (ಗ್ರಾ) ಜಿಲ್ಲಾ ಐಇಸಿ ಸಮಾಲೋಚಕ ಬಿ.ಸಿ.ನಾಗರಾಜು ತಿಳಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours