ಮಾಧ್ಯಮ ಮಿತ್ರರು ಆತ್ಮವಿಮರ್ಶೆ ಮಾಡಿಕೊಂಡು ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳ ಬಗ್ಗೆ ವಿಮರ್ಶೆ ಮಾಡಬೇಕು: ಶಾಸಕ ಟಿ.ರಘುಮೂರ್ತಿ

 

 

 

 

ಚಳ್ಳಕೆರೆ: ಕಳೆದ 9 ವರ್ಷದಿಂದ ಯಾವುದೇ ದೌರ್ಜನ್ಯ ದ್ವೇಷ ಮತ್ತು ಅಸೂಯೆಗೆ ದಾರಿ ಮಾಡಿಕೊಡದೆ ಸಾರ್ವಜನಿಕ ಜನಜೀವನವನ್ನು ಸುಸ್ಥಿತಿಯಲ್ಲಿಟ್ಟು ಸಮಾಜದಲ್ಲಿರುವ ಎಲ್ಲರಿಗೂ ಸಮಾನ ಅವಕಾಶವನ್ನು ಕಲ್ಪಿಸಿಕೊಟ್ಟು ಯಾವುದೇ ಅಧಿಕಾರಿಗಳಿಗೆ ನಿರ್ದಿಷ್ಟವಾದ ಒತ್ತಡ ಏರದೇ ಯಾವುದೇ ದೂರುಗಳು ಮತ್ತು ಲೋಪವಿಲ್ಲದ ಹಾಗೆ ಆಡಳಿತ ಯಂತ್ರ ನಡೆಸಲು ದಾರಿ ಮಾಡಿ ಕೊಟ್ಟಿದ್ದೇನೆಂದು ಚಳ್ಳಕೆರೆ ಕ್ಷೇತ್ರದ ಶಾಸಕ ಟಿ ರಘುಮೂರ್ತಿ ಹೇಳಿದರು.

ಅವರು ಚಳ್ಳಕೆರೆ ನಗರದ ರೋಟರಿ ಸಭಾಂಗಣದಲ್ಲಿ  ಚಳ್ಳಕೆರೆ ಕಾರ್ಯನಿರತ ಪತ್ರಕರ್ತರ ಸಂಘದ ದಿನಾಚರಣೆಯನ್ನು ಉದ್ಘಾಟಿಸಿ ಪತ್ರಕರ್ತರ ಲೇಖನ ಖಡ್ಗಕ್ಕಿಂತಲೂ ಅರಿತವಾಗಿದ್ದು ಸಂತೋಷ್ ಕುಮಾರ್ ಗುಲ್ವಾಡಿ ಮತ್ತು ಖಾದ್ರಿ ಶಾಮಣ್ಣನವರು ಈ ಪತ್ರಿಕಾರಂಗಕ್ಕೆ ಒಂದು ಹೊಸ ಆಯಾಮವನ್ನು ಬರೆದಿದ್ದಾರೆ. ಮಾಧ್ಯಮದವರು ಆತ್ಮವಿಮರ್ಶೆ ಮಾಡಿಕೊಂಡು ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ
ಬಗ್ಗೆ ಬರೆಯುವಾಗ ನೈಜ ಸಂಗತಿಯನ್ನು ವಿಮರ್ಶೆ ಮಾಡಿ ಬರೆಯುವುದು ಪೂರ್ಣವಾದದ್ದು ಹಾಗಾಗಿ ಸಮಾಜಮುಖಿ ದಿಕ್ಕಿನಲ್ಲಿ ತಮ್ಮಗಳ ಬರವಣಿಗೆ ಇರಲಿ ಎಂದರು.

 

 

ತಹಶೀಲ್ದಾರ್ ಏನ್. ರಘುಮೂರ್ತಿ ಮಾತನಾಡಿ  ಮಾಧ್ಯಮ ಮಿತ್ರರ ಬರವಣಿಗೆ ದೀನ ದಲಿತರ ಮತ್ತು ಬಡವರ ಧ್ವನಿಯಾಗಿರಬೇಕು ಸಮಾಜದಲ್ಲಿರುವಂತಹ ಪ್ರತಿ ಮನೆ ಮತ್ತು ಮನ ಮುಟ್ಟುವ ಹಾಗೆ ಮನಸ್ಸು ಮತ್ತು ಹೃದಯಗಳನ್ನು ಬೆಸೆಯುವಂತಿರಬೇಕು.  ವಾಸ್ತವದ ಸಂಗತಿಗಳನ್ನು ಬರವಣಿಗೆಯಲ್ಲಿ ಪ್ರತಿಬಿಂಬಿಸಬೇಕು.  ಒಬ್ಬ ವ್ಯಕ್ತಿಯ ತೇಜವದೆ ಸಲ್ಲದು ಅಂಬೇಡ್ಕರ್ ಅವರು ತಮ್ಮ ಬರವಣಿಗೆಯಲ್ಲಿ ಉಲ್ಲೇಖಿಸಿದ್ದ ಹಾಗೆ ಸ್ವಾರ್ಥ ಮತ್ತು ವೈಯಕ್ತಿಕ ಅಭಿಲಾಷೆಗೆ ಒಳಗಾಗುವಂತಹ ಪತ್ರಕರ್ತ ಸಮಾಜಕ್ಕೆ ಕಂಟಕ ಎಂದಿದ್ದಾರೆ ಕಣ್ಣಂಚಿಗೆ ಕಾಣುವ ಘಟನೆಗಳು ಪ್ರಸಂಗಗಳೆಲ್ಲವೂ ಸತ್ಯವಾಗಿರುವುದಿಲ್ಲ.  ಚಳ್ಳಕೆರೆ ತಾಲೂಕಿನ ಪತ್ರಕರ್ತರ ಬಹು ದಿನಗಳ ಬೇಡಿಕೆ ನಿವೇಶನದ ಸಮಸ್ಯೆ ಶಾಸಕರ ಇಚ್ಛೆಯಂತೆ ಈಗಾಗಲೇ ಇದರ ಪ್ರಸ್ತಾವನೆಯನ್ನು  ಜಿಲ್ಲಾಧಿಕಾರಿಗಳಿಗೆ   ಸಲ್ಲಿಸಲಾಗಿದೆ.ಎಲ್ಲಾ ಪತ್ರಕರ್ತರಿಗೂ ಶಾಸಕರು ತಮ್ಮ ಇತಿಮಿತಿಯಲ್ಲಿ ಊರು ಕೊಡುವ ವ್ಯವಸ್ಥೆಯನ್ನು ಮಾಡಿದಲ್ಲಿ ಪತ್ರಕರ್ತರಿಗೆ ಇರುವಂತಹ ಆರ್ಥಿಕ ಸಂಕಷ್ಟ ದೂರವಾಗಲಿದೆ  ಎಂದು ಹೇಳಿದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ ಮಾತನಾಡಿ ಕ್ಷೇತ್ರದ ಶಾಸಕರು ಹಾಗೂ ತಹಶೀಲ್ದಾರ್ ಒಂದು ಕಡೆ ಅಭಿವೃದ್ಧಿಯ ಕೆಲಸಗಳು ಇನ್ನೊಂದು ಕಡೆ ಸಾಮಾಜಿಕ ಕಳಕಳಿಯ ಕೆಲಸಗಳು ಇವರುಗಳಿಂದ ಆಗಿದ್ದು ಸಾಧ್ಯವಾದಷ್ಟು ಪತ್ರಕರ್ತರ ಮನವಿಗಳಿಗೆ ಸ್ಪಂದಿಸಿದ್ದಾರೆ ಪತ್ರಕರ್ತರ ಭವನಕ್ಕೆ ಸಹಾಯ ಮಾಡುವುದರ ಮುಖಾಂತರ ಇವರುಗಳು ತಮ್ಮ ಹೆಜ್ಜೆ ಗುರುತನ್ನು ಉಳಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ರೈತ ಸಂಘದ ಅಧ್ಯಕ್ಷ ಸೋಮಗುದ್ದು ರಂಗಸ್ವಾಮಿ,  ಚಿದಾನಂದಮೂರ್ತಿ,   ತಾಲೂಕ ಪತ್ರಕರ್ತರ ಸಂಘದ ಅಧ್ಯಕ್ಷ ಟಿ ಜೆ ತಿಪ್ಪೇಸ್ವಾಮಿ,  ಈಶ್ವರಪ್ಪ ಜಿಲ್ಲಾ ಪತ್ರಕರ್ತರ ಸಂಘದ ಕುಮಾರಸ್ವಾಮಿ ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours