ನಡು ರಸ್ತೆಯಲ್ಲಿ ಕಾರು ಬೆಂಕಿಯಿಂದ ಭಸ್ಮವಾಗಿದ್ದು ಏಕೆ? ಇಡೀ ಕುಟುಂಬ ಪವಾಡದ ರೀತಿ ಪಾರಗಿದ್ದು ಹೇಗೆ?

 

 

 

 

 

ಬೆಂಗಳೂರು:  ಹೊಸ  ಕಾರನ್ನು  ಹಲವು ಕನಿಸಿನಿಂದ ಖರೀದಿಸಲಾಗಿತ್ತು. ಅಷ್ಟೇ ಕಾಳಜಿಯಿಂದ ಸರ್ವಿಸ್ ಸೆಂಟರ್ ನಲ್ಲಿಯೇ ಸರ್ವಿಸ್ ಕೂಡ ಮಾಡಿಸಲಾಗಿತ್ತು. ಆದ್ರೇ.. ನಿನ್ನೆ ದಿಢೀರ್  ತಮ್ಮೂರಿಗೆ ದಂಪತಿ ಸಹಿತ ಮಕ್ಕಳೊಂದಿಗೆ ತೆರಳುವಾಗ ನಡು ರಸ್ತೆಯಲ್ಲೇ  ಕಾರು ಆಫ್ ಆಗಿದೆ.

ಮುಂದಿನ ಡೋರ್ ಓಪನ್ ಮಾಡೋದಕ್ಕೆ ಕೂಡ ಆಗದ ಕಾರಣ, ಹಿಂಬದಿಯ ಡೋರ್ ಓಪನ್ ಆದಾಗ, ಅದರಿಂದ ಪತಿ, ಪತಿ ಪತ್ನಿ, ಮಕ್ಕಳು ಹೊರಬಂದು ಏನ್ ಆಗಿ ಎಂದು ನೋಡುವಷ್ಟರಲ್ಲಿ ಎಂಜಿನ್ ನಲ್ಲಿ ಹೊಗೆ ಬಂದು ಬೆಂಕಿಯೇ ಹೊತ್ತಿಕೊಂಡಿದೆ. ಕಾಲ ಕಾಲಕ್ಕೆ ಸರ್ವಿಸ್ ಕೂಡ ಮಾಡಿದ್ರು.. ನಡು ರಸ್ತೆಯಲ್ಲೇ ಕಾರ್ ಹೀಗೆ ಹೊತ್ತಿ ಕೊಂಡು ಉರಿದ್ರೇ.. ಇದಕ್ಕೆ ಹೊಣೆಯಾರು ಎಂಬುದೇ ನೊಂದವರ  ಪ್ರಶ್ನೆಯಾಗಿದೆ.

ಈ ಬಗ್ಗೆ ಹಿರಿಯ ಪತ್ರಕರ್ತರಾದಂತ ಸತೀಶ್ ಆಂಜಿನಪ್ಪ ಹೊಸಕೋಟೆಯವರು ತಮಗಾದದ್ಧನ್ನು ತಮ್ಮ ಫೇಸ್ ಬುಕ್ ಮುಖಪುಟದಲ್ಲಿ ಬರೆದುಕೊಂಡಿದ್ದಾರೆ. ಅದರ ಸಂಪೂರ್ಣ ಸಾರಾಂಶ ಈ ಕೆಳಗಿನಂತಿದೆ.

ಕನಸಿನ ಕಾರು ಕಣ್ಮುಂದೆ ಭಸ್ಮ..

ಕಾರಿಗೆ ಆಕಸ್ಮಿಕ ಬೆಂಕಿ.. ಸುಟ್ಟು ಕರಕಲಾದ ಕಾರು..! ಅದೃಷ್ಟವಶಾತ್ ಪವಾಡ ರೀತಿಯಲ್ಲಿ ಕಾರಲ್ಲಿ ಇದ್ದವರು ಬಚಾವ್..

ಈ ರೀತಿ ತುಂಬಾ ಸಲ ಸುದ್ದಿ ನೋಡಿದ್ದೀವಿ, ಸುದ್ದಿ ಮಾಡಿದ್ದೀವಿ.. ಆದ್ರೆ, ಸ್ವತಃ ಅನಿಭವಿಸೋದು ಇದೆಯಲ್ಲ.. ಅಬ್ಬಾ.. Its really scared & Pain. ನಂಗೂ ಹೀಗೆ ಆಯ್ತು.. ಶುಕ್ರವಾರ (ಜುಲೈ 15, 2022) ಬೇಗ ಕೆಲಸ ಮುಗಿಸಿ, ಊರಿಗೆ ಹೋಗ್ತಿದ್ದೆ. ಕುರುಬರಹಳ್ಳಿಯಿಂದ ಹೆಬ್ಬಾಳ ಮಾರ್ಗವಾಗಿ ಹೊಸಕೋಟೆಗೆ ಹೋಗೋದು ನಂಗೆ ರೂಢಿ. ಅದರಂತೆ ಹೊರಟೆ. ಶುಕ್ರವಾರ ರಾತ್ರಿ 8.25ರ ಸುಮಾರಿಗೆ ನಾಗವಾರ ಸಮೀಪ ಹೋಗ್ತಿದ್ದಂತೆ ಶಾಕ್..

 

 

ಇದ್ದಕ್ಕಿದ್ದಂತೆ ನನ್ನ NEXA Suzuki Motorcycle India #Baleno ರೋಡ್ ಮಧ್ಯದಲ್ಲೇ ಸ್ಟಾಪ್ ಆಯ್ತು. ಏನ್ ಆಯ್ತು ಅಂತ ನೋಡುವಷ್ಟರಲ್ಲಿ ಮುಂದೆ ಬಾನೆಟ್ ಮೇಲೆ ದಟ್ಟ ಹೊಗೆ. ತಕ್ಷಣ ಡೋರ್ ತೆಗೆಯಲು ಹೋದೆ, ಮುಂದಿನ ಡೋರ್ ಓಪನ್ ಆಗಲಿಲ್ಲ. ಹಿಂದಿನ ಸೀಟಲ್ಲಿದ್ದ ಪತ್ನಿ ಪ್ರಿಯಾ, ಹಿಂದಿನ ಡೋರ್ ಓಪನ್ ಮಾಡಿದ್ರು. ಅಬ್ಬಾ.. ಕಡೇ ಪಕ್ಷ ಹಿಂದಿನ ಡೋರ್ ಓಪನ್ ಆಯ್ತು. ಪತ್ನಿ, ಮಗ, ಮಗಳು ಬೇಗ ಕಾರಿಂದ ಹೊರಗೆ ನಡೆದ್ರು. ನಾನು ಕೂಡ ಮರು ಯೋಚಿಸದೆ ಹಿಂದಿನ ಡೋರ್ ನಿಂದ ಹೊರ ಬಂದೆ.

ಹೊರ ಬಂದಾಕ್ಷಣ ಆ ಭೀಕರ ದೃಶ್ಯ ನೋಡಿ, ಕಂಗಾಲಾದೆ. ಕಾರು ಧಗ ಧಗನೇ ಹೊತ್ತಿ ಉರಿಯುತ್ತಿತ್ತು. ಪತ್ನಿ, ಮಕ್ಕಳನ್ನ ರಸ್ತೆ ಬದಿ ನಿಲ್ಲಿಸಿ, ಕಾರ್ ಬಳಿ ಬಂದೆ.. ಸ್ಥಳೀಯರು ಜೊತೆಯಾಗಿ ಬೆಂಕಿ ನಂದಿಸಲು ಯತ್ನಿಸಿದ್ರು.. But no way.. ಬೆಂಕಿ ಧಗ ಧಗ ಅಂತ ಕಾರನ್ನ ಭಸ್ಮಾ ಮಾಡ್ತು. ಸುಮಾರು 20 ನಿಮಿಷ ಉರಿಯುತ್ತಲೇ ಇತ್ತು.. ಬೆಂಕಿ ನಂದಿಸಲು ಎಷ್ಟೇ ಪ್ರಯತ್ನ ಪಟ್ರು ಆಗಲಿಲ್ಲ. ಕೊನೆಗೆ ಅಗ್ನಿ ಶಾಮಕ ದಳದವರು ಬಂದು ಬೆಂಕಿ ನಂದಿಸಿದ್ರು..

ಇತ್ತ, ಮಗ, ಮಗಳು, ಪತ್ನಿ ಬೆಚ್ಚಿ ಬಿದ್ದಿದ್ರು.. ಕಣ್ಣೀರಾಕಿದ್ರು.. ನಂಗೆ, ನಮಗೇನೂ ಆಗಲಿಲ್ಲ, ಸದ್ಯ ಪ್ರಾಣ ಉಳಿತೂ ಅನ್ನೋ ಸಮಾಧಾನ, ನೆಮ್ಮದಿ. ಆದ್ರೆ, 16-06-2017 ರಲ್ಲಿ ಕಷ್ಟವಾದ್ರೂ ಇಷ್ಟಪಟ್ಟು ತಗೊಂಡ #Baleno ಕಾರು ಕಣ್ಮುಂದೆಯೇ ಭಸ್ಮವಾಯ್ತು..

ಐದೇ ವರ್ಷಕ್ಕೆ ಕಾರೊಂದು ಹೀಗೆ ಸುಟ್ಟು ಹೋದ್ರೆ ಹೇಗೆ..? #insurance ಕಂಪನಿಯವರು ಕೇವಲ IDV ವ್ಯಾಲೂವ್ ಮೇಲೆ ಹಣ ಕೊಡ್ತಾರಂತೆ ಅದಕ್ಕೂ ನೂರೆಂಟು ಪ್ರಶ್ನೆ, ಸರ್ವೇ, ತನಿಖೆ..

ಹೀಗೆ ರನ್ನಿಂಗ್ ನಲ್ಲಿ ಇರುವಾಗಲೇ ಕಾರಿಗೆ ಬೆಂಕಿ ಬಿದ್ರೆ ಹೊಣೆ ಯಾರು.? ಪ್ರಶ್ನೆಗಳು ಮಾತ್ರ ಉಳಿದಿವೆ.. ಉತ್ತರ ಸಿಕ್ತಿಲ್ಲ..

ಸದ್ಯ, ಜೀವ ಉಳಿದಿದೆ.. ಅದೇ ಪುಣ್ಯ ಎಂದಿದ್ದಾರೆ.

ಹಾಗಾದ್ರೇ.. ಇದಕ್ಕೆ ಹೊಣೆಯಾರು..? ಹೀಗೆ ನಡು ರಸ್ತೆಯಲ್ಲಿ ಹೊತ್ತಿ ಕಾರು ಉರಿದ್ರೇ ಹೇಗೆ..? ಪ್ರಾಣ ಹಾನಿಯಾದ್ರೇ ಅದಕ್ಕೆ ಹೊಣೆಯಾರು ಎಂಬುದು ಹಲವು ಸಾರ್ವಜನಿಕರ ಪ್ರಶ್ನೆಯಾಗಿದೆ. ಈ ಬಗ್ಗೆ ಮಾರುತಿ ಸುಜುಕಿ ಕಂಪನಿ ಉತ್ತರಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.

[t4b-ticker]

You May Also Like

More From Author

+ There are no comments

Add yours