ಮಳೆ ವರದಿ : ರಾಮಗಿರಿಯಲ್ಲಿ 24.4 ಮಿ.ಮೀ ಮಳೆ

 

 

 

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಜುಲೈ 7:
ಜಿಲ್ಲೆಯಲ್ಲಿ ಜುಲೈ 06 ರಂದು ಸುರಿದ ಮಳೆ ವಿವರದನ್ವಯ ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿಯಲ್ಲಿ 24.4 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.
ಉಳಿದಂತೆ, ಹೊಳಲ್ಕೆರೆಯಲ್ಲಿ 18.6 ಮಿ.ಮೀ, ಚಿಕ್ಕಜಾಜೂರು 13.6 ಮಿ.ಮೀ, ಬಿ.ದುರ್ಗ 19.2 ಮಿ.ಮೀ, ಹೆಚ್.ಡಿ.ಪುರ 6 ಮಿ.ಮೀ, ತಾಳ್ಯ 6.4 ಮಿ.ಮೀ ಮಳೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ -1ರಲ್ಲಿ 16.4 ಮಿ.ಮೀ, ಚಿತ್ರದುರ್ಗ -2ರಲ್ಲಿ 9.9 ಮಿ.ಮೀ, ಐನಳ್ಳಿ 11.8 ಮಿ.ಮೀ, ಭರಮಸಾಗರ 15.4 ಮಿ.ಮೀ, ಸಿರಿಗೆರೆ 20.4 ಮಿ.ಮೀ, ಹಿರೇಗುಂಟನೂರು 3.3 ಮಿ.ಮೀ, ತುರುವನೂರು 6.2 ಮಿ.ಮೀ ಮಳೆಯಾಗಿದೆ. ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 10.4 ಮಿ.ಮೀ,  ಬಬ್ಬೂರಿನಲ್ಲಿ 9.6 ಮಿ.ಮೀ, ಇಕ್ಕನೂರಿನಲ್ಲಿ 10.4 ಮಿ,ಮೀ. ಈಶ್ವರಗೆರೆ 4.2 ಮಿ.ಮೀ, ಸೂಗೂರು 5.2 ಮಿ.ಮೀ ಮಳೆಯಾಗಿದೆ.  ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 7.4 ಮಿ.ಮೀ, ಬಾಗೂರು 10.1 ಮಿ.ಮೀ, ಮತ್ತೋಡು 2.2 ಮಿ.ಮೀ, ಶ್ರೀರಾಂಪುರ 8 ಮಿ.ಮೀ, ಮಾಡದಕೆರೆ 15 ಮಿ.ಮೀ ಮಳೆಯಾಗಿದೆ. ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 4.2 ಮಿ.ಮೀ, ಪರಶುರಾಮಪುರ 6.2 ಮಿ.ಮೀ, ನಾಯಕನಹಟ್ಟಿ 3.2 ಮಿ.ಮೀ, ಡಿ.ಮರಿಕುಂಟೆ 7.3 ಮಿ.ಮೀ, ತಳುಕು 3.2 ಮಿ.ಮೀ ಮಳೆಯಾಗಿದೆ. ಮೊಳಕಾಲ್ಮೂರಿನ ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 2.2 ಮಿ.ಮೀ, ರಾಮಪುರ 4 ಮಿ.ಮೀ,  ರಾಮಪುರ 4 ಮಿ.ಮೀ, ದೇವಸಮುದ್ರ 5.1 ಮಿ.ಮೀ, ರಾಯಪುರ 2.2 ಮಿ.ಮೀ ಮಳೆಯಾಗಿದೆ.
ಬುಧವಾರ ಸುರಿದ ಮಳೆಗೆ ಚಿತ್ರದುರ್ಗ ಜಿಲ್ಲೆಯಾದ್ಯಂತ ಒಟ್ಟು 14 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಚಿತ್ರದುರ್ಗದಲ್ಲಿ 7 ಮನೆಗಳು, ಚಳ್ಳಕೆರೆಯಲ್ಲಿ-01 ಹೊಳಲ್ಕೆರೆಯಲ್ಲಿ-04, ಹಿರಿಯೂರಿನಲ್ಲಿ-02 ಮನೆ ಭಾಗಶಃ ಹಾನಿಗೊಳಗಾಗಿವೆ. ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಯಾವುದೇ ರೀತಿಯ ಹಾನಿ ವರದಿಯಾಗಿಲ್ಲ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

 

 

[t4b-ticker]

You May Also Like

More From Author

+ There are no comments

Add yours