ಎಸ್ ಜೆಎಂ ದಂತ ಮಹಾವಿದ್ಯಾಲಯದ ನೂತನ ಸಂಜೆ ವಿಶೇಷ ದಂತ ಚಿಕಿತ್ಸಾಲಯ ಉದ್ಘಾಟಿಸಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ.

 

 

 

 

ಚಿತ್ರದುರ್ಗನಗರದ ಎಸ್ ಜೆಎಂ ದಂತ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ ಆವರಣದಲ್ಲಿ ವಿಶೇಷ ಸಂಜೆ ದಂತ ಚಿಕಿತ್ಸೆ ಕೊಠಡಿಯನ್ನು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಉದ್ಘಾಟಿಸಿದರು.

 

 

ಈ‌ಸಂದರ್ಭದ ದಂತ ವಿಶ್ವ ವಿದ್ಯಾಲಯದ ಪ್ರಾಂಶುಪಾಲರಾದ ಆರ್. ಗೌರಮ್ಮ ಮಾತನಾಡಿ ಸಂಜೆ ವಿಶೇಷ ಚಿಕಿತ್ಸಾಲಯ ತುಂಬ ಜನರಿಗೆ ಅನುಕೂಲವಾಗಲಿದೆ. ಇದರ ವಿಶೇಷತೆಗಳೆಂದರೆ ನುರಿತ ದಂತ ವೈದ್ಯರ ಚಿಕಿತ್ಸೆ, ಗುಣಮಟ್ಟ ಮತ್ತು ಆತ್ಯಧುನಿಕ ಸಲಕರಣಸ ಸೌಲಭ್ಯ, ಎಲ್ಲಾ ರೀತಿಯ ಎಕ್ಸ್ ರೇ ಸೌಲಭ್ಯಗಳು ಇದೆ.  ದಂತ ಚಿಕಿತ್ಸೆಗಳಾದ ಹುಳುಕು ಹಲ್ಲಿನ ಚಿಕಿತ್ಸೆ, ರೂಟ್ ಕೆನಾಲ್ ಚಿಕಿತ್ಸೆ, ಕೃತಕ‌ದಂತ ಚಿಕಿತ್ಸೆ, ವಕ್ರ ದಂತ ಚಿಕಿತ್ಸೆ, ವಸಡು ರೋಗ ಚಿಕಿತ್ಸೆ, ಹಲ್ಲಿನ ಶಸ್ತ್ರ ಚಿಕಿತ್ಸೆ, ಇಂಪ್ಲಾಂಟ್ ದಂತ ಚಿಕಿತ್ಸೆ, ಲೆಸರ್ ದಂತ ಚಿಕಿತ್ಸೆ, ದಂತ ಬ್ಲಿಚಿಂಗ್ ಚಿಕಿತ್ಸೆ, ಮಕ್ಕಳ ದಂತ ಚಿಕಿತ್ಸೆ ಸೇರಿ ಎಲ್ಲಾ ಚಿಕಿತ್ಸೆಗಳು ಒಂದೇ ಕಡೆ ದೊರೆಯುವಂತೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
 ಎಸ್ ಜೆಎಂ ಕಾಲೇಜಿನ ಉಪ ಕುಲಪತಿಗಳಾದ ಡಾ.ಮೋಹನಗ ಮಾತನಾಡಿ ಸಂಜೆ ಸಮಯದಲ್ಲಿ ದಂತ ವೈದ್ಯರು ಸಿಗುವುದರಿಂದ ನೌಕರಿ ಮಾಡುವ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಅಲೆದಾಟ ಹೆಚ್ಚು ಆಗುವುದರಿಂದ ಅದೆಷೋ ಜನರು ಹಲ್ಲಿನ ಬಗ್ಗೆ ಹೆಚ್ಚು ಗಮನ ಹರಿಸುತ್ತಿಲ್ಲ ಹಾಗಾಗಿ ಸಂಜೆ ಸಮಯ ಆದ್ದರಿಂದ ಹೆಚ್ಚು ಜನರಿಗೆ ಅನುಕೂಲವಾಗಲಿದೆ. ಒಬ್ಬ ರೋಗಿ ಒಳಗಡೆ ಬಂದರೆ ಎಲ್ಲಾ ಒಂದೇ ಕಡೆ ದೊರೆತು ಬಿಳಿ ಹಲ್ಲಿನ ಮೂಲಕ ಹೊರ ಹೋಗುವಂತೆ ಆಗಲಿ ಎಂದರು‌.
ಕಾರ್ಯಕ್ರಮದಲ್ಲಿ   ಗೌರವ ಕುಲಪತಿಗಳಾದ ಶ್ರೀಶಿವಮೂರ್ತಿ ಮುರುಘಾ ಶರಣರು, ಎ‌‌ಸ್ ಜೆಎಂ ವಿದ್ಯಾಪೀಠದ ಸಹ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಎಸ್ ಜೆಎಂ ಯುನಿವರ್ಸಿಟಿ ಕುಲಪತಿ ಜಿತೇಂದ್ರ ಸಿಂಗ್ ಶೇಖವತ್, ,ಕಾರ್ಯಕಾರಣಿ ಸದಸ್ಯರಾದ ಪಟೀಲ್ ಶಿವಕುಮಾರ್, ಮಲ್ಲಿಕಾರ್ಜುನ ಸ್ವಾಮಿ, ಕೆಇಬಿ ಷಣ್ಮುಖಪ್ಪ ಮತ್ತು ಬಸವೇಶ್ವರ ವೈದ್ಯಕೀಯ ಕಾಲೇಜಿನ ಡಿನ್ ಪ್ರಶಾಂತ್ ಮತ್ತು ಗಾಯಿತ್ರಿ ಶಿವರಾಮ್ ಇದ್ದರು.
[t4b-ticker]

You May Also Like

More From Author

+ There are no comments

Add yours