ಕೇಂದ್ರದ ಜನಪ್ರಿಯ ಯೋಜನೆಗಳು ಪ್ರತಿ ಮನೆ ಮುಟ್ಟಿಸಬೇಕು: ಜೆ.ಪಿ.ನಡ್ಡಾ

 

 

 

 

ಚಿತ್ರದುರ್ಗ: ನಗರದಲ್ಲಿ ನಡೆದ ಜನಪ್ರತಿನಿಧಿಗಳ ಸಮಾವೇಶದಲ್ಲಿ  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮಾತನಾಡಿ ಕರ್ನಾಟಕದಲ್ಲಿ ಗರೀಬ ಕಲ್ಯಾಣ ಯೋಜನೆಯಲ್ಲಿ ಉಚಿತವಾಗಿ ಅಕ್ಕಿ, ದವಸ ದಾನ್ಯ  ನೀಡಿದೆ. ಪ್ರದಾನಿ ನರೇಂದ್ರ ಮೋದಿ ಅವರ ಕೆಲಸವನ್ನು ನೋಡಿ ಜನರು ತೀರ್ಮಾನಿಸುತ್ತಾರೆ. ಹಳ್ಳಿಗಳಲ್ಲಿ ಜಮೀನು ಮಾಲಿಕತ್ವದ  ಸಮಸ್ಯೆ ಆಗಿತ್ತು ಅದನ್ನು ನಮ್ಮ ಸರ್ಕಾರ ಪ್ರಾಪರ್ಟಿ ಕಾರ್ಡ್  ಯೋಜನೆ ಮೂಲಕ ಬಗೆಹರಿಸಲಾಗಿದೆ. ಪ್ರತಿ ಗ್ರಾಮ ಪಂಚಾಯತಿಯಲ್ಲಿ ಇಂಟರ್ನೆಟ್ ವ್ಯವಸ್ಥೆ ಮಾಡಲಾಗಿದೆ.  ಜಲಜೀವನ್ ಯೋಜನೆ ಮೂಲಕ ಎಲ್ಲಾ ಗ್ರಾಮಗಳಿಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಹಿಂದೆ ಪಂಚಾಯತಿಗಳಿಗೆ ಬರುವ ಹಣ ದುರ್ಬಳಕೆ ಆಗುತ್ತಿತ್ತು ಈಗ ಅದು ನೇರವಾಗಿ ಜನರಿಗೆ ಹಣ  ತಲುಪುತ್ತಿದೆ. ರೈತರ ಎಲ್ಲಾ ಬೆಳೆಗಳಿಗೆ   ಅಟಲ್ ಪೆಕ್ಷನ್ ಯೋಜನೆ ಎಲ್ಲಾರಿಗೂ ಅನುಕೂಲವಾಗಿದೆ. ಆಯುಷ್ಮಾನ್ ಕಾರ್ಡನ್ನು ನಮ್ಮ ಕಾರ್ಯಕರ್ತರು , ಗ್ರಾಮ ಪಂಚಾಯತಿ ಸದಸ್ಯರು ಎಲ್ಲಾ ಜನರಿಗೆ ತಲುಪಿಸಬೇಕಾಗಿದೆ. ಪ್ರಧಾನಿ  ಅವಾಸ್ ಯೋಜನೆ ಯಶಸ್ವಿಯಾಗಿದೆ.  ಅಮೃತ ಯೋಜನೆ ಮೂಲಕ ಗ್ರಾಮದ ಅಭಿವೃದ್ಧಿ ಮಾಡಲಾಗಿದೆ. ಅಗ್ನಿ ಪಥ್ ಕ್ರಾಂತಿಕಾರಿ ಯೋಜನೆಯಾಗಿದೆ, ಅಪಪ್ರಚಾರದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ  ಎಂದರು.

 

 

[t4b-ticker]

You May Also Like

More From Author

+ There are no comments

Add yours