ಗ್ರಾಮೀಣ ಪರಿವರ್ತನೆಗೆ ಹೊಸ ಭಾಷ್ಯ ಬರೆದಿದ್ದು ಧರ್ಮಸ್ಥಳ ಸಂಸ್ಥೆ: ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಚಳ್ಳಕೆರೆ: ಕರ್ನಾಟಕದ ಹಳ್ಳಿಹಳ್ಳಿಯಲ್ಲೂ ತಲೆಯೆತ್ತಿದೆ ಗ್ರಾಮೀಣ ಯೋಜನೆ ಗ್ರಾಮೀಣ ಪರಿವರ್ತನೆಗೆ ಹೊಸ ಭಾಷ್ಯ ಬರೆದಿದ್ದು ಹಲವು ದೇವಸ್ಥಾನಗಳ ಜೀರ್ಣೋದ್ಧಾರ ಪುಣ್ಯ ಕಾರ್ಯಗಳನ್ನು ಕೈಗೊಂಡಿದೆ ಎಂದು ತಾಹಸಿಲ್ದಾರ್ ಎನ್.ರಘುಮೂರ್ತಿ ಹೇಳಿದರು.

ಚಳ್ಳಕೆರೆ ತಾಲೂಕಿನ ಬೆಳಗೆರೆ ಗ್ರಾಮದ ಹೊರವಲಯದಲ್ಲಿರುವ ಐತಿಹಾಸಿಕ ಹಿನ್ನೆಲೆ ಹೊಂದಿರುವ ಲಕ್ಷ್ಮಿ ಶ್ರೀ ರಂಗನಾಥಸ್ವಾಮಿ ವಿಗ್ರಹ ಪುನರ್ ಪ್ರತಿಷ್ಠಾಪನಾ ಮತ್ತು ನೂತನ ದೇವಸ್ಥಾನದ ಲೋಕರ್ಪಣೆ ಮಹೋತ್ಸವ ರಾಜಗೋಪುರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ನ ಸಭೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.

 

 

ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾಕ್ಟರ್ ಡಿ ವೀರೇಂದ್ರ ಹೆಗ್ಗಡೆಯವರು ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ಸ್ವಸ್ಥ ಸಮಾಜ ಸಮಾಜದ ಅಭಿವೃದ್ಧಿ ಕಾರ್ಯಕ್ರಮಗಳಾದ ದೇವಸ್ಥಾನ ಪುನರ್ನಿರ್ಮಾಣ ಕೆರೆ ಹೂಳು ತೆಗೆಯುವುದು ಹಿಂದೂ ರುದ್ರಭೂಮಿ ಅಭಿವೃದ್ಧಿ ದೇವಸ್ಥಾನದ ಅಭಿವೃದ್ಧಿ ಸಮುದಾಯಭವನ ಹಾಲು ಉತ್ಪಾದಕರ ಕಟ್ಟಡ ನಿರ್ಗತಿಕರ ಮಾಸಾಸನ ಸುಗ್ನನನಿಧಿ ಗೋಶಾಲೆ ಸಾರ್ವಜನಿಕ ಶೌಚಾಲಯ ಶುದ್ಧ ಕುಡಿಯುವ ನೀರಿನ ಘಟಕ ಮುಂತಾದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.ಇಂತಹ ಕೊಡಗಿನಲ್ಲಿ ಬೆಳಗೆರೆ ಗ್ರಾಮದಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಲಕ್ಷ್ಮಿ ರಂಗನಾಥಸ್ವಾಮಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿರುವುದು ಶ್ಲಾಘನೀಯ ಎಂದರು.

ಮುಖಂಡರಾದ ಕೆ.ಟಿ. ಕುಮಾರಸ್ವಾಮಿ ಜೆಡಿಎಸ್ ಮುಖಂಡರಾದ ಎಂ ರವೀಶ್ ಕುಮಾರ್ ಹಾಗೂ ದೇವಸ್ಥಾನದ ಟ್ರಸ್ಟ್ ನ ಅಧ್ಯಕ್ಷ ಕೆ ಟಿ. ನಿಜಲಿಂಗಪ್ಪಜಿ. ರಾಜಶೇಖರಯ್ಯ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಬೆಳಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರವಿ ಉಪಾಧ್ಯಕ್ಷರಾದ ರೂಪ ಕೃಷ್ಣಮೂರ್ತಿ ಹಾಗೂ ಸದಸ್ಯರು ಕೆಎಂಎಫ್ ನಿರ್ದೇಶಕರು ವೀರಭದ್ರ ಬಾಬು ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಸಮರ್ಥ ರಾಯ್ ದೇವಸ್ಥಾನದ ಟ್ರಸ್ಟ್ ನ ಪದಾಧಿಕಾರಿಗಳು ನಿವೃತ್ತ ಮುಖ್ಯಶಿಕ್ಷಕ ರಾಜಣ್ಣ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರವಿಕುಮಾರ್ ವೀರಪ್ಪ ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮದ ಮುಖಂಡರು ಸಾವಿರಾರು ಭಕ್ತರು ಆಗಮಿಸಿದ್ದರು.

[t4b-ticker]

You May Also Like

More From Author

+ There are no comments

Add yours