ರೈತರ ಶ್ರೇಯೋಭಿವೃದ್ಧಿ ಹಾಗೂ ಸ್ವಾವಲಂಬಿ ಬದುಕಿಗೆ ಕೃಷಿ ಅಧಿಕಾರಿಗಳು ಶ್ರಮಿಸಬೇಕು: ಕೆ.ಬಿ.ಚಂದ್ರಶೇಖರಪ್ಪ

 

 

 

 

ಚಿತ್ರದುರ್ಗ(ಕರ್ನಾಟಕ ವಾರ್ತೆ)ಜೂನ್.7: ರೈತರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಬೆಳೆಗೆ ಸೂಕ್ತವಾದ ಬೆಲೆ ಸಿಗುತ್ತಿಲ್ಲ, ಗ್ರಾಮೀಣ ಭಾಗದ ರೈತರಿಗೆ ಸರ್ಕಾರ ಸೌಲಭ್ಯಗಳು ದೊರಕಬೇಕು. ರಸಗೊಬ್ಬರ ಹಾಗೂ ಬಿತ್ತನೆ ಬೀಜ ಸಬ್ಸಿಡಿ, ಕೃಷಿ ಹೊಂಡ, ಮಿಶ್ರ ಬೇಸಾಯ ಪದ್ಧತಿ, ಸರ್ಕಾರದ ಯೋಜನೆಗಳು ಬಗ್ಗೆ ಸರಿಯಾದ ಮಾಹಿತಿ ನೀಡುವುದರೊಂದಿಗೆ ಕೃಷಿ ಇಲಾಖೆ ಹಾಗೂ ಕೃಷಿ ಅಧಿಕಾರಿಗಳು ರೈತರ ಶ್ರೇಯೋಭಿವೃದ್ಧಿ ಹಾಗೂ ಸ್ವಾವಲಂಬಿ ಬದುಕಿಗೆ ಶ್ರಮಿಸಬೇಕು ಎಂದು ಕೃಷಿಕ ಸಮಾಜದ ಅಧ್ಯಕ್ಷ  ಕೆ.ಬಿ ಚಂದ್ರಶೇಖರಪ್ಪ ಹೇಳಿದರು.
ನಗರದ ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೃಷಿ ಮಾರುಕಟ್ಟೆಗಳಲ್ಲಿ ರೈತರಿಗೆ ದರಗಳ ಬಗ್ಗೆ ಮಾಹಿತಿ ಒದಗಿಸಬೇಕು. ಕೃಷಿ ವಿಜ್ಞಾನಿಗಳಿಂದ ಮಣ್ಣು ಪರೀಕ್ಷೆ ನಡೆಸಿ ಬೇಸಾಯಕ್ಕೆ ತಾಂತ್ರಿಕ ಮಾಹಿತಿಯನ್ನು ನೀಡಬೇಕು. ಅನುದಾನಿತ ಶಾಲೆಗಳಲ್ಲಿ ಹೆಚ್ಚಿ ಶುಲ್ಕವನ್ನು ವಸೂಲಿ ಮಾಡಲಾಗುತ್ತದೆ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೃಷಿಕ ಸಮಾಜದ ಅಧ್ಯಕ್ಷ ಕೆ.ಬಿ.ಚಂದ್ರಶೇಖರಪ್ಪ ತಿಳಿಸಿದರು.
ಮೀನುಗಾರಿಕೆಗೆ ಇಲಾಖೆಯಿಂದ ಬಲೆ, ಹರಿಕೋಲುಗಳನ್ನು ನೀಡಲಾಗುತ್ತಿದೆ. ಮೀನು ಮಾರಾಟಗಾರರಿಗೆ ಮೋಟಾರ್ ಬೈಕ್ ಮತ್ತು ಐಸ್ ಬಾಕ್ಸ್‍ಗಳನ್ನು ನೀಡಲಾಗುತ್ತಿದೆ. ರೈತರ ಜಮೀನಿನಲ್ಲಿ ಮೀನು ಸಾಕಾಣೆಗೆ ರೈತರಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿ ಅಣ್ಣಪ್ಪಸ್ವಾಮಿ ಸಭೆಯಲ್ಲಿ ಮಾಹಿತಿ ನೀಡಿದರು.
ಜಿಲ್ಲೆಯ ಶಾಲೆಯಲ್ಲಿ ದಾಖಲಾತಿ ಪ್ರಾರಂಭವಾಗಿದೆ. ಶೇಕಡ 60 ರಷ್ಟು ಪಠ್ಯಪುಸ್ತಕಗಳು ಶಾಲೆಗೆ ಬಂದಿವೆ. ಬ್ಯಾಗ್, ಶೂ, ಸಮವಸ್ತ್ರ ಸರ್ಕಾರದಿಂದ ಬರಬೇಕಾಗಿದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಚಿತ್ರದುರ್ಗ 4ನೇ ಸ್ಥಾನದಲ್ಲಿದೆ. ಕರ್ನಾಟಕ ಪಬ್ಲಿಕ್ ಸ್ಕೂಲ್ ಮಾದರಿ ಶಾಲೆಗಳನ್ನು ತೆರೆಯಲಾಗಿದೆ ಎಂದು ಶಿಕ್ಷಣ ಇಲಾಖೆ ಬಸವರಾಜು ತಿಳಿಸಿದರು.
ರಾಷ್ಟ್ರೀಯ ಜಾನುವಾರು ಯೋಜನೆಯಡಿಯಲ್ಲಿ ಕಾಲುಬಾಯಿ ರೋಗ, ಕುರಿ ಮತ್ತು ಮೇಕೆಗಳಿಗೆ ಕರುಳುಬೇನೆ ಹಾಗೂ ಕಳಲೆ ರೋಗ ಲಸಿಕೆಗಳನ್ನು ನೀಡಲಾಗುತ್ತಿದೆ. ಹಸುಗಳಿಗೆ ವಿಮೆ ಯೋಜನೆ ಜಾರಿಗೆ ತರಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದನದ ಕೊಟ್ಟಿಗೆ ನಿರ್ಮಾಣ ಮಾಡಿಕೊಡಲಾಗುವುದು. ಅಮೃತ ಜೀವ ಯೋಜನೆ ಅಡಿಯಲ್ಲಿ ಮಿಶ್ರತಳಿ ಘಟಕ ನಿರ್ಮಾಣಕ್ಕೆ 62 ಸಾವಿರ ರೂಪಾಯಿ ನೀಡಲಾಗುತ್ತದೆ. ಒಟ್ಟು  69 ಘಟಗಳಲ್ಲಿ 60 ಪೂರ್ಣಗೊಂಡು 9 ಘಟಕಗಳು ಪ್ರಗತಿಯಲ್ಲಿವೆ ಪಶು ಇಲಾಖೆ ಅಧಿಕಾರಿ ಡಾ.ರಾಘವೇಂದ್ರ ಎಂದು ತಿಳಿಸಿದರು.
ಜೇನು ಸಾಕಾಣಿಕೆ, ಅಣಬೆ,ತೆಂಗು ಬೆಳೆ ಅಭಿವೃದ್ಧಿ ಶ್ರಮಿಸಲಾಗುತ್ತಿದೆ.  ಹೊಸದುರ್ಗ ಹಾಗೂ ಹೊಳಲ್ಕೆರೆ ವ್ಯಾಪ್ತಿಯಲ್ಲಿ ಹೊಸದಾಗಿ ಕೋಕ್ ಬೆಳೆ ಬೆಳೆಯಲು ರೈತರಿಗೆ ಉತ್ತೇಜನ ನೀಡಲಾಗಿದೆ. ಅಡಿಕೆ ಬೆಳೆಯ ಮಧ್ಯಭಾಗದಲ್ಲಿ ಕಾಳುಮೆಣಸು ಬೆಳೆಯಲು ರೈತರಿಗೆ ತಿಳುವಳಿಕೆ ನೀಡಲಾಗಿದೆ ಎಂದು ತೋಟಗಾರಿಕೆ ಅಧಿಕಾರಿ ಶ್ರೀನಿವಾಸ್ ಸಭೆಯಲ್ಲಿ ಮಾಹಿತಿ ನೀಡಿದರು.
ರೈತ ಸಂಪರ್ಕ ಕೇಂದ್ರದಲ್ಲಿ ಬೀಜ, ಗೊಬ್ಬರಗಳು ಶೇಖರಿಸಿ ರೈತರಿಗೆ ನೀಡಲಾಗಿದೆ. ಜಿಲ್ಲೆಯಲ್ಲಿ ಬೀಜಗಳು ಹಾಗೂ ಗೊಬ್ಬರಗಳು ಕೊರತೆಯಿಲ್ಲ. ಸರ್ಕಾರದ ರೈತ ವಿದ್ಯಾನಿಧಿಯಡಿ ರೈತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ನಟರಾಜ್ ತಿಳಿಸಿದರು.
ರೇಷ್ಮೆ ಇಲಾಖೆಯಿಂದ ರೇμÉ್ಮ ಮನೆ ನಿರ್ಮಾಣಕ್ಕೆ 3 ಲಕ್ಷ ಅನುದಾನವನ್ನು ನೀಡಲಾಗುತ್ತದೆ. ಮೊಳಕಾಲ್ಮೂರು ಭಾಗದಲ್ಲಿ ರೇμÉ್ಮ ಬೆಳೆಯನ್ನು ಹೆಚ್ಚು ಬೆಳೆಯುವುದರಿಂದ ರೇμÉ್ಮ ಪಾರ್ಕ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕು.
ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಟಿ.ರೇವಣ್ಣ, ನಿರ್ದೇಶಕರಾದ ಹೆಚ್.ಆರ್.ತಿಮ್ಮಯ್ಯ, ಎಸ್ ರಮೇಶಪ್ಪ, ಹನ್ನಿ ಹನುಮಂತಪ್ಪ ರೆಡ್ಡಿ, ಎಂ.ಎಸ್.ನವೀನ್, ಬಿ.ಕೃಷ್ಣಮೂರ್ತಿ, ವಿಶ್ವನಾಥ್, ಜಿ.ಎಸ್.ರವಿಕುಮಾರ್ ಜಂಟಿ ಕೃಷಿ ನಿರ್ದೇಶಕ ರಮೇಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.

 

 

[t4b-ticker]

You May Also Like

More From Author

+ There are no comments

Add yours