ಚಿಕನ್ ಮಟನ್ ಅಂಗಡಿಗಳ ಸುತ್ತಲೂ ವಾತವರಣ ಕಲುಷಿತಗೊಳಿಸಿದರೆ ಅಂಗಡಿಗಳಿಗೆ ಬೀಗ: ತಹಶೀಲ್ದಾರ್ ಎನ್.ರಘುಮೂರ್ತಿ ಎಚ್ಚರಿಕೆ

 

 

 

 

ಚಳ್ಳಕೆರೆ:  ಬೆಳ್ಳಂಬೆಳಗ್ಗೆ  ನಗರದ  ಚಿಕನ್‌  ಹಾಗೂ ಮಟನ್ ಅಂಗಡಿ ಮಾಲೀಕರಿಗೆ  ತಹಶೀಲ್ದಾರ ಎನ್.ರಘುಮೂರ್ತಿ ಶಾಕ್ ನೀಡಿದ್ದಾರೆ

 

 

ಚಳ್ಳಕೆರೆ ನಗರದ ಅಜ್ಜನ ಗುಡಿ ರಸ್ತೆಯ ಎರಡು ಬದಿಗಳಲ್ಲಿ ಇರುವಂತಹ ಚಿಕನ್ ಹಾಗೂ ಮಟನ್ ಅಂಗಡಿಗಳಿಂದ ತ್ಯಾಜ್ಯ ಇತರೆ ವಸ್ತುಗಳನ್ನು ಸುತ್ತಮುತ್ತ ಹಾಕಿ ನಗರವನ್ನು ಅಶುದ್ಧ ಗೊಳಿಸುತ್ತಾರೆ ಎನ್ನುವ ಸಾರ್ವಜನಿಕರ ದೂರಿನ ಮೇರೆಗೆ ಇಂದು ನಗರಸಭೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ತಹಶೀಲ್ದಾರ್ ಅವರು ಭೇಟಿ‌ ನೀಡಿ ಮಟನ್ ಹಾಗೂ ಚಿಕನ್ ಸುತ್ತಮುತ್ತಲಿನ ಪ್ರದೇಶ ವಿಕ್ಷಣೆ ಮಾಡಿದ್ದಾರೆ. ಅನಧಿಕೃತವಾಗಿ ಇರುವಂತಹ ಅಂಗಡಿಗಳನ್ನು ತೆರವು ಮಾಡಿ ಹಾಗೆ ಕೋಳಿ ಇತರ ವಸ್ತುಗಳಿಂದ ಬಂದಂತಹ ತ್ಯಾಜ್ಯವನ್ನು ಹಾಕುವುದರಿಂದ ನಗರ ತ್ಯಾಜ್ಯದಿಂದ ಕಲುಷಿತವಾಗುತ್ತದೆ. ಇದರಿಂದ ತ್ಯಾಜ್ಯವನ್ನ ದೂರ ಹಾಕಿ ಇಲ್ಲೆ ಸಮಸ್ಯೆಗೆ ದಾರಿ ಮಾಡಿಕೊಡಬೇಡಿ.ಇದರಿಂದ ಸಮಸ್ಯೆ ಉದ್ಭವಿಸುತ್ತದೆ ಹಾಗೂ ಮಟನ್ ಚಿಕನ್ ಮಾರುವ ಅಂಗಡಿಗಳು ಶುದ್ಧವಾಗಿರಬೇಕು .ಇಲ್ಲಿ ಯಾವ ಅಂಗಡಿ ನೋಡಿದರು ತ್ಯಾಜ್ಯದಿಂದ ಕೂಡಿದ್ದು ಇಲ್ಲಿ ಮಾರುವಂತಹ ಎಲ್ಲ ವಸ್ತುಗಳು ಅಶುದ್ಧವಾಗಿವೆ. ಹೀಗೆ ಮಾಡುವುದರಿಂದ ಸಾರ್ವಜನಿಕರ ಆರೋಗ್ಯ ಮೇಲೆ ದುಷ್ಪರಿಣಾಮ ಬೀರುತ್ತದೆ ಈಗಾಗಲೇ ಈ ನಗರದಲ್ಲಿ ಕೋವಿಡ್ ನಿಂದ ಹಲವರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇಂತಹ ಸಮಯದಲ್ಲಿ   ಅಂಗಡಿಗಳ ಸುತ್ತಮುತ್ತ ಕಸ   ಹಾಕುವುದರಿಂದ ಇದರ ನಿರ್ವಹಣೆಯ ಸಹ ನೀವು ಮಾಡಬೇಕಾಗುತ್ತದೆ. ಕಸ ತ್ಯಾಜ್ಯ ರಾಶಿ ಆಗುವುದರಿಂದ ನಾಗರಿಕರು ಓಡಾಡುವುದು ಸಹ ಕಷ್ಟವಾಗುತ್ತದೆ ಅಂಗಡಿಯ ಮಾಲೀಕರು ಜವಾಬ್ದಾರಿ ವಹಿಸಬೇಕಾಗುತ್ತದೆ. ಇಲ್ಲವಾದಲ್ಲಿ ಜನ ಆರೋಗ್ಯದ ಜೀವನದ ಜತೆ ಚಲ್ಲಾಟವಾಡಿದಂತ್ತಾಗುತ್ತದೆ. ಇಲ್ಲವಾದರೆ ಎಲ್ಲಾ ಅಂಗಡಿಗಳನ್ನು ಮುಚ್ಚಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಚಿಕ್ಕನ್ ಹಾಗೂ ಮಟನ್ ಅಂಗಡಿಗೆ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ.

ಈ ಸಮಯದಲ್ಲಿ ಪಿಎಸ್ ಐ ಕೆ.ಸತೀಶ್ ನಾಯ್ಕ್ ,ನಗರಸಭೆ ಅರೋಗ್ಯ ಅಧಿಕಾರಿಗಳಾದ ಮಹಲಿಂಗಪ್ಪ,ದಾದಾಪೀರ್,ಹಾಗೂ ನಗರಸಭೆ ಅಧಿಕಾರಿಗಳು ಪೋಲೀಸ್ ಸಿಬ್ಬಂದಿ ಇದ್ದರು.

[t4b-ticker]

You May Also Like

More From Author

+ There are no comments

Add yours