ಸರ್ಕಾರಿ ಶಾಲೆ ಗೋಡೆ ಕುಸಿದು ಎಂಟು ತಿಂಗಳು, ಇತ್ತ ತಿರುಗಿ‌ ನೋಡದ ಅಧಿಕಾರಿಗಳ ವಿರುದ್ದ ಗ್ರಾಮಸ್ಥರ ಅಕ್ರೋಶ

 

 

 

 

ಚಳ್ಳಕೆರೆ-18 ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯ ಮಲ್ಲೋರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಡೆ ಕುಸಿದು ಎಂಟು ತಿಂಗಳು ಕಳೆದರೂ ಇತ್ತ ಕಡೆ ಗಮನಹರಿಸದ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಅಸಮಧಾನಗೊಂಡಿದ್ದಾರೆ.

 

 

ಮರದ ನೆರಳಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ.
ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಗೋಡೆ ಕುಸಿತದಿಂದ ಕೆಂಪಂಚಿನ ಗೋಡೆ ಕುಸಿದಿತ್ತು ಎಷ್ಟು ಬಾರಿ ಕ್ಷೇತ್ರ ಶಿಕ್ಷಣ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಇದರ ಬಗ್ಗೆ ಗಮನಹರಿಸಲಿಲ್ಲ
ಪ್ರಯೋಜನವಾಗಿಲ್ಲ ಮಲ್ಲೋರ ಹಟ್ಟಿ  ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 109 ಹೊಂದಿದ್ದ ಎರಡು ಕೊಠಡಿಗಳು ಮಾತ್ರ ಇದ್ದು ಉಳಿದ ವಿದ್ಯಾರ್ಥಿಗಳು ಮರದ ನೆರಳಿನಲ್ಲಿ ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದ್ದು ಹೀಗಾಗಲೇ ಮುಖ್ಯೋಪಾಧ್ಯಾಯರ ಕೊಠಡಿ ಬೀಳುವ ಹಂತದಲ್ಲಿದೆ 109 ವಿದ್ಯಾರ್ಥಿಗಳಿಗೆ ಕೇವಲ ಎರಡು ಕೊಠಡಿಗಳು ಮಾತ್ರ ಇವೆ ಕಠಿಣ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು .
ಈ ವೇಳೆ ಗೌಡಗೆರೆ ಗ್ರಾಮ ಪಂಚಾಯತಿ ಸದಸ್ಯ ಕೇಂಗುರುದ್ರಪ್ಪ ಮಾತನಾಡಿ ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ಗೋಡೆ ಕುಸಿದಿತ್ತು ಹಲೋ ಗ್ರಾಮ ಪಂಚಾಯತಿ ಮತ್ತು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು ಕೂಡ ಪ್ರಯೋಜನವಾಗಿಲ್ಲ ಇನ್ನಾದರೂ ಎಚ್ಚೆತ್ತುಕೊಂಡು ಅಧಿಕಾರಿಗಳು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿದ ಆದಷ್ಟು ಬೇಗ ಇತ್ತ ಕಡೆ ಗಮನಹರಿಸಿ ವ್ಯವಸ್ಥೆ ಕಲ್ಪಿಸಬೇಕೆಂದು ಮನವಿ ಮಾಡಿಕೊಂಡರು.


ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮಣ್, ಸಹ ಶಿಕ್ಷಕರಾದ ಆರ್ ಬೋರಣ್ಣ, ಜೆ ಎಂ ಮಲ್ಲಿಕಾರ್ಜುನಪ್ಪ, ಗ್ರಾಮಸ್ಥರಾದ ಜೆ ಆರ್ ನಾಗರಾಜ್, ಎಂ ಎಸ್ ವಸಂತ, ಎಸ್ ತಿಪ್ಪೇಸ್ವಾಮಿ, ಡಿ ಶಂಕ್ರಪ್ಪ, ಶಿವಣ್ಣ ,ಓಬಳೇಶ,ಟಿ ಪ್ರಕಾಶ್, ಸಂತೋಷ್ ನಾಗೇಂದ್ರಪ್ಪ ಮುಸ್ಠೂರಪ್ಪ, ನಿಂಗರಾಜ್, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours