ಟೊಮೋಟೊ ಬೆಲೆಯಲ್ಲಿ ದಾಖಲೆ ಏರಿಕೆ , ಇನ್ನು ದುಬಾರಿ ಸಾಧ್ಯತೆ.

 

 

 

 

ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು 19,930 ಹೆಕ್ಟೇರ್‌ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗುತ್ತದೆ. ಸದ್ಯ ಹೊರ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಿರುವುದರಿಂದ ಟೊಮೆಟೊ ಬೆಳೆ ನಾಶವಾಗಿದ್ದು, ಮಾರುಕಟ್ಟೆಗಳಲ್ಲಿ ಟೊಮೆಟೊ ಆವಕ ಕುಸಿದಿದೆ.

 

 

ಇದರಿಂದ ಟೊಮೆಟೊ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. 15 ದಿನಗಳ ಹಿಂದೆ ಮೇ 1ರಂದು ಸ್ಥಳೀಯ ಮಾರುಕಟ್ಟೆಯಲ್ಲಿ ಟೊಮೆಟೊ ಸಗಟು ಬೆಲೆ ಕ್ವಿಂಟಾಲ್‌ಗೆ ಕನಿಷ್ಠ 670 ಮತ್ತು ಗರಿಷ್ಠ 3,470 ಇತ್ತು. ಭಾನುವಾರ ಟೊಮೆಟೊ ಬೆಲೆ ಕನಿಷ್ಠ 2,670 ಹಾಗೂ ಗರಿಷ್ಠ 5,330ಕ್ಕೆ ಜಿಗಿದಿದೆ. ಸಗಟು ದರಕ್ಕೆ ಅನುಗುಣವಾಗಿ ಚಿಲ್ಲರೆ ಮಾರಾಟ ದರವೂ ಏರಿಕೆಯಾಗಿದೆ. ನಿತ್ಯ ಜಿಗಿತ ಕಾಣುತ್ತಿದ್ದು 100ರೂ ಗಟಿ ದಾಟಿದ್ದು  ಜನರು ಚಿಂತೆಗೆ ಬಿದ್ದಿದ್ದಾರೆ. ಮುಂದೆ ಇನ್ನು ಹೆಚ್ಚುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ವ್ಯಾಪಾರಸ್ಥರಲ್ಲಿದೆ.

[t4b-ticker]

You May Also Like

More From Author

+ There are no comments

Add yours