ಹಿರಿಯೂರಿನಲ್ಲಿ ಬೆಳ್ಳಂಬೆಳಗ್ಗೆ ನಾಯಿಗಳ ಕಾಟ .
ಹಿರಿಯೂರುಮೇ 12- ನಗರದ ವಲ್ಲಭಭಾಯಿ ಪಟೇಲ್ ರಸ್ತೆ, ತೇರು ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ರಸ್ತೆಯ ಸುತ್ತಮುತ್ತಲಿನಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಬೆಳಿಗ್ಗೆಯಿಂದ ರಾತ್ರಿವರೆಗೂ ನಾಯಿಗಳು ಬೌ ಬೌ ಎಂದು ಕೂಗುತ್ತಾ ಓಡಾಡುವ ಜನರಿಗೆ ಬೊಗಳುತ್ತವೆ ಬೈಕ್ ಗಳ ಹಿಂದೆ ಓಡಿ ಹೋಗುತ್ತವೆ ಮನೆಗಳ ಬಳಿ ಬಿಟ್ಟ ಚಪ್ಪಲಿಗಳನ್ನು ಬಾಯಿಂದ ಕಚ್ಚಿಕೊಂಡು ಓಡಿ ಹೋಗುತ್ತವೆ, ಮಕ್ಕಳು ತರುವ ತಿಂಡಿಗಳನ್ನು ಕಿತ್ತುಕೊಳ್ಳುತ್ತವೆ, ಈ ನಾಯಿಗಳ ಹಾವಳಿಗೆ ಜನ ಬೇಸತ್ತು ಹೋಗಿದ್ದಾರೆ. ನಗರಸಭೆಯವರು ಇತ್ತ ಗಮನ ಹರಿಸಿ ತಕ್ಷಣ ಇಲ್ಲಿ ನಾಯಿಗಳ ಹಾವಳಿಯನ್ನು ತಪ್ಪಿಸಬೇಕು ಎಂದು ಹಿರಿಯ ಪತ್ರಕರ್ತರಾದ ಎಂ ರವೀಂದ್ರನಾಥ್ ನಗರಸಭೆಗೆ ಮನವಿ ಮಾಡಿದ್ದಾರೆ.
[t4b-ticker]
+ There are no comments
Add yours