ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ತಹಶೀಲ್ದಾರ್ ಎನ್.ರಘುಮೂರ್ತಿ ಭೇಟಿ

 

 

 

 

ಚಳ್ಳಕೆರೆ;  ತಾಲೂಕಿನಲ್ಲಿ ನಿನ್ನೆ ಸುರಿದ  ಮಳೆ ಗಾಳಿಯಿಂದ ರೈತರ ತೋಟಗಾರಿಕೆ ಬೆಳೆಗಳಾದ ಪಪ್ಪಾಯಿ ಬಾಳೆ ,ತೆಂಗು ,ಅಡಿಕೆ ಮುಂತಾದ ಬೆಳೆಗಳು ಬಹುತೇಕ ನೆಲಕಚ್ಚಿವೆ ಪರಿಪೂರ್ಣವಾದ ತೋಟಗಾರಿಕೆ ಹಾಗೂ ಕೃಷಿ ಅಧಿಕಾರಿಗಳು ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ಮಾಡುವ ಕಾರ್ಯವನ್ನು ಕೈಗೊಂಡಿದ್ದು ಅದರಂತೆ ನೇರಲಗುಂಟೆ, ಮನಮೈನಹಟ್ಟಿ, ಇನ್ನು ಇತರ ಗ್ರಾಮದಲ್ಲಿ ಪರಿಶೀಲನೆ ನಡೆಸಲಾಗಿದೆ ಎಂದು ತಹಶೀಲ್ದಾರ್ ಎನ್‌ ರಘುಮೂರ್ತಿ ಹೇಳಿದರು.

 

 

ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳು ರಂಗಮಂದಿರಗಳು ವಿದ್ಯುತ್ ಕಂಬಗಳು ಬಿದ್ದಿವೆ. ಹಾಗೂ  ಶಾಲಾ  ಕೊಠಡಿಯ ಮೇಲ್ಛಾವಣಿಗಳು ಗಳು ಹಾರಿ ಹೋಗಿದ್ದು ಎಲ್ಲಾ ಸ್ಥಳಕ್ಕೆ ಇಂದು ಭೇಟಿ ನೀಡಲಾಗಿದ್ದು ಇದರ ಸಂಪೂರ್ಣ ಮಾಹಿತಿಯನ್ನು ಪಡೆದು ನಂತರ ಜಿಲ್ಲಾಧಿಕಾರಿಗೆ  ಮಾಹಿತಿ ಒದಗಿಸಲಾಗುವುದು ಸಾರ್ವಜನಿಕರು ಮಳೆ ಗಾಳಿ ಮುಗಿಯುವವರೆಗೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಮರಗಳ ಹಳೆ ಗೋಡೆಗಳ ಹಾಗೂ ವಿದ್ಯುತ್ ಪರಿವರ್ತಕಗಳ ಹತ್ತಿರ ನಿಲ್ಲುವುದು ಮುಂತಾದ ಕಾರ್ಯಗಳನ್ನು ಮಾಡಕೂಡದು ಹಾಗೂ ಈ ಸಂಬಂಧ ಪ್ರತಿ ಪಂಚಾಯಿತಿಯಲ್ಲಿ ತಿಳುವಳಿಕೆಯನ್ನು ಸಾರ್ವಜನಿಕರಿಗೆ ಮೂಡಿಸಲಾಗುವುದು ಹಾಗೂ ಕುರಿಗಾಯಿಗಳು ಕುರಿ ಮೇಸು ದಕ್ಕೆ ಅಡುಗೆಗೆ ಹೋದಾಗ ಮಳೆ ಬಂದಾಗ ಮರದಡಿ ನಿಲ್ಲಬೇಡಿ ಮನೆಯಿಂದ ಹೋಗುವಾಗಲೇ ಕೊಡೆ ಸೂಪರ್ ತಾಡಪಲ್ಲು ಇತರೆ ವಸ್ತುಗಳನ್ನು ತೆಗೆದುಕೊಂಡು ಹೋಗಿ ಮಳೆಬಂದಾಗ ಬಯಲ ಪ್ರದೇಶದಲ್ಲಿ ನಿಂತುಕೊಳ್ಳಿ ಇದರಿಂದ ಆಗುವಂತಹ ನವು ತಪ್ಪುತ್ತದೆ. ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಚಳ್ಳಕೆರೆ ತಾಲ್ಲೂಕು ತೋಟಗಾರಿಕೆ ಸಹಾಯಕ ನಿರ್ದೇಶಕರು ವಿರುಪಾಕ್ಷಪ್ಪ ಉಪ ತಾಸಿಲ್ದಾರ ಚೇತನ್ ಕುಮಾರ್ ಹಾಗೂ ಕೃಷಿ ಅಧಿಕಾರಿಗಳು ರೈತರು ಇದ್ದರು

[t4b-ticker]

You May Also Like

More From Author

+ There are no comments

Add yours