ರೈತನ ಬೆಳೆದಂತಹ ಬೆಳೆಗೆ ಪೂರಕವಾದಂಥ ಬೆಲೆ ಸಿಕ್ಕರೆ ರೈತರ ಬದುಕು ಹಸನು: ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಚಳ್ಳಕೆರೆ:  ರೈತನ ಬೆಳೆದಂತಹ ಬೆಳೆಗೆ ಪೂರಕವಾದಂಥ ಬೆಲೆ ಸಿಕ್ಕಲಿ ರೈತನ ಬದುಕು ಹಸನಾಗುತ್ತದೆ ಎಂದು ಬೆಳಕೆರೆ ತಹಶೀಲ್ದಾರ್  ಎನ್. ರಘುಮೂರ್ತಿ ಹೇಳಿದರು.

ಚಳ್ಳಕೆರೆ ತಾಲೂಕಿನ ಚಿಕ್ಕಮ್ಮನಹಳ್ಳಿ ಹಾಗೂ ಬುಡ್ನಹಟ್ಟಿ ಮಧ್ಯೆ ರಾಷ್ಟ್ರೀಯ ಹೇದ್ದಾರಿ ಸಮೀಪ ನೂತನವಾಗಿ ಟೊಮೊಟೊ ಮಾರುಕಟ್ಟೆ ಪ್ರಾರಂಭವಾಗಿದೆ . ಲಕ್ಷ್ಮಿ ವೆಜಿಟೇಬಲ್ ಅಂಡ್ ಫ್ರೂಟ್ಸ್ ಸಂಸ್ಥೆಯವರು ಪ್ರಾರಂಭ ಮಾಡಿರುವಂತಹ ಟೊಮೆಟೊ ಖರೀದಿ ಮಾರುಕಟ್ಟೆಯನ್ನು ಉದ್ಘಾಟಿಸಿದ ಮಾತನಾಡಿದರು.

 

 

ಈ ಭಾಗಕ್ಕೆ ಮತ್ತೊಂದು  ಟಮೋಟೊ ಮಾರುಕಟ್ಟೆ ಉದ್ಘಾಟನೆ ಆಗಿರುವುದು ಈ ಭಾಗದ ರೈತರಿಗೆ ವರದಾನವಾಗಲಿದೆ. ಈ ಸಂಸ್ಥೆಯವರು ರೈತರ ಹಿತವನ್ನು ಕಾಳಜಿಯಾಗಿತ್ತುಕೊಂಡು ಈ ಸಂಸ್ಥೆಯನ್ನು ನಿರ್ವಹಣೆ ಮಾಡಬೇಕು. ಯಾವುದೇ ಸಂದರ್ಭದಲ್ಲೂ ಖರೀದಿಯಲ್ಲಿ ರೈತರಿಗೆ ಅನ್ಯಾಯವಾಗದ ಹಾಗೆ ನಡೆದುಕೊಳ್ಳಬೇಕು. ವೈಜ್ಞಾನಿಕವಾಗಿ ರೈತರ ಬೆಳೆಯುವಂತಹ ಹಣ್ಣು ಮತ್ತು ತರಕಾರಿಗಳನ್ನು ಸಂರಕ್ಷಣೆ ಮಾಡಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು. ರೈತರುಗಳು ಕೂಡ ಗುಣಮಟ್ಟದ ಹಣ್ಣುಗಳನ್ನು ಮಾರುಕಟ್ಟೆಗೆ ಪೂರೈಸಬೇಕು. ಈ ಮೂಲಕ ಸ್ವಾವಲಂಬಿಗಳಾಗಿ ಸ್ವಾಭಿಮಾನದ ಬದುಕನ್ನು ಇವಾಗ ರೈತರು ಕಟ್ಟಿ ಕೊಳ್ಳಬೇಕೆಂದು ಮನವಿ ಮಾಡಿದರು .

ರೈತ ಸಂಘದ ಅಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ ಕುವೆಂಪುರವರು ನೇಗಿಲ ಮೇಲಿದೆ ಧರ್ಮ ಎನ್ನುವ ಮಾತನಾಡಿದ್ದು ರೈತನ ಮತ್ತು ಧರ್ಮದ ಸಂರಕ್ಷಣೆ ಮಾಡುವ ಕೆಲಸವನ್ನು ಸರ್ಕಾರ ಹಾಗೂ ಇಂಥ ಸಂಸ್ಥೆಗಳು ಮಾಡಬೇಕೆಂದು ಹೇಳಿದರು. ಸಂಸ್ಥೆಯ ಪಾಲುದಾರರಾದ ನೆರ್ಲಕುಂಟೆ ಚಂದ್ರ ಣ್ಣ ವೀರಶೈವ ಸಮಾಜದ ಅಧ್ಯಕ್ಷರಾದ ನಾಗರಾಜು ಕುರುಬರ ಸಮಾಜದ ಅಧ್ಯಕ್ಷರಾದ ಮಲ್ಲೇಶಪ್ಪ ಮತ್ತಿತರು ಸಮಾರಂಭದಲ್ಲಿ ಉಪಸ್ಥಿತರಿದ್ದರು

[t4b-ticker]

You May Also Like

More From Author

+ There are no comments

Add yours