ಪ್ರತಿ ದಿನ ಉತ್ಸಾಹದಿಂದ ಕಾಯಕದಲ್ಲಿ ತೊಡಗಿ : ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ

 

 

 

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಏ.29 : ಪ್ರತಿದಿನವು ಕೆಲಸ ಒತ್ತಡವಿರುತ್ತದೆ. ಆದರೆ ಉತ್ಸಾಹದಿಂದ ಕಾಯಕದಲ್ಲಿ ತೊಡಗಿಕೊಂಡರೆ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ.  ಪಶು ವೈದ್ಯರು ಜಾನುವಾರುಗಳ ಉಪಚಾರ ಮಾಡುವುದರೊಂದಿಗೆ ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ಸಹ ನೀಡಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಸಲಹೆ ಹೇಳಿದರು.
ನಗರದ ಎ.ಪಿ.ಎಂ.ಸಿ ಆವರಣದಲ್ಲಿನ ಕೃಷಿ ತಂತ್ರಜ್ಞರ ಸಂಸ್ಥೆಯ ಸಭಾಂಗಣದಲ್ಲಿ ಶುಕ್ರವಾರ, 75ನೇ ಸ್ವಾತಂತ್ರ್ಯ ಅಮೃತಮಹೋತ್ಸವ ಮತ್ತು ವಿಶ್ವ ಪಶು ವೈದ್ಯರ ದಿನಾಚರಣೆಯ ಅಂಗವಾಗಿ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ ಅಡಿ ಪಶು ವೈದ್ಯಾಧಿಕಾರಿಗಳಿಗೆ ಆಡಳಿತ ತಾಂತ್ರಿಕ ತರಬೇತಿ ಹಾಗೂ ಮಾನವ, ಪ್ರಾಣಿ, ಮತ್ತು ಪರಿಸರಕ್ಕೆ ಪಶು ವೈದ್ಯರ ಕೊಡುಗೆ ಕುರಿತು, ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಆಯೋಜಿಸಿದ್ದ ವಿಚಾರ ಸಂಕೀರ್ಣದಲ್ಲಿ ಮಾತನಾಡಿದರು.
ವೃತ್ತಿಗೆ ತಕ್ಕಂತೆ  ಸಾಂಕೇತಿಕವಾಗಿ ದಿನಾಚರಣೆಗಳನ್ನು ಆಚರಣೆ ಮಾಡಲಾಗುತ್ತದೆ. ಈ ವಿಚಾರ ಸಂಕೀರ್ಣದಲ್ಲಿ ಬಂದಿರುವ ಸಂಪನ್ಮೂಲ ವ್ಯಕ್ತಿಗಳು ನೀಡುವಂತಹ ಮಾಹಿತಿಯನ್ನು ಪಶುವೈದ್ಯಾಧಿಕಾರಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ ಮಾತನಾಡಿ ಪಶುವೈದ್ಯರ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಜಿಲ್ಲಾಡಳಿತ ಜೊತೆಯಲ್ಲಿರುತ್ತದೆ. ಗ್ರಾಮೀಣ ಪ್ರದೇಶದಲ್ಲಿ ರೈತರು ಜೀವನೋಪಾಯಕ್ಕೆ ಅನೇಕ ರೀತಿಯಾದ ಪ್ರಾಣಿ- ಪಕ್ಷಿಗಳನ್ನು ಸಾಕಿರುತ್ತಾರೆ. ಅವುಗಳ ರಕ್ಷಣೆಗೆ ಶ್ರಮ ವಹಿಸಿ ಸೇವೆ ಮಾಡುತ್ತಿದ್ದೀರಿ. ರೈತರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ರೈತರಿಗೆ ಯೋಜನೆಗಳ ಬಗ್ಗೆ ಅರಿವು ಮೂಡಿಸಿ ತಿಳುವಳಿಗೆ ನೀಡುವಂತೆ ಸಲಹೆ ನೀಡಿದರು.
ಪಶು ಇಲಾಖೆಯ ಉಪನಿರ್ದೇಶಕ ಡಾ.ಕಲ್ಲಪ್ಪ ಮಾತನಾಡಿ ಜಿಲ್ಲೆಯಲ್ಲಿ 165 ಪಶು ಆಸ್ಪತ್ರೆಗಳು ಕಾರ್ಯ ನಿರ್ವಹಿಸುತ್ತಿವೆ. ಪಶು ವೈದ್ಯಾಧಿಕಾರಿಗಳು ಮನೆ ಮನೆಗೆ ಬಾಗಿಲಿಗೆ ತೆರಳಿ ಪಶುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ವಿಜ್ಞಾನ- ತಂತ್ರಜ್ಞಾನಗಳು ಬೆಳೆದಂತೆ ಹೊಸ-ಹೊಸ ಆವಿಷ್ಕಾರಗಳ ಬಗ್ಗೆ ವೈದ್ಯರಿಗೆ ಮಾಹಿತಿ ನೀಡಬೇಕಾಗುತ್ತದೆ. ಈ ದೃಷ್ಠಿಯಲ್ಲಿ ವಿಚಾರ ಸಂಕೀರ್ಣವನ್ನು ಉಪಯುಕ್ತವಾಗಿದೆ ಎಂದರು.
2021-22ನೇ ಸಾಲಿನ ಸರ್ವೋತ್ತಮ ಪ್ರಶಸ್ತಿಗೆ ಆಯ್ಕೆಯಾದ ಪಶುವೈದ್ಯಾಧಿಕಾರಿಗಳಾದ ಡಾ. ಪ್ರಸನ್ನ, ಡಾ.ಮುರುಗೇಶ್ ಅವರಿಗೆ ಸನ್ಮಾನಿಸಲಾಯಿತು.
ವಿಚಾರ ಸಂಕೀರ್ಣದಲ್ಲಿ ಪಶು ವೈದ್ಯರ ಆಡಳಿತ ತಾಂತ್ರಿಕತೆ ಮತ್ತು ಮಾನವ, ಪ್ರಾಣಿ, ಪರಿಸರಕ್ಕೆ ಪರಿಸರಕ್ಕೆ ಪಶುವೈದ್ಯರ ಕೊಡುಗೆ ಮತ್ತು ಗೋಹತ್ಯೆ ನಿಷೇಧದ ತೊಡಕುಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ನೀಡುವ ಮಾಹಿತಿಯನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಶುವೈದ್ಯ ಡಾ.ರಂಗನಾಥ್, ಸಂಪನ್ಮೂಲ ವ್ಯಕ್ತಿಗಳಾದ ಡಾ.ನಾಗರಾಜ್, ಶ್ರೀಧರ್ ಪ್ರಸಾದ್, ಪಶುವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು.

 

 

[t4b-ticker]

You May Also Like

More From Author

+ There are no comments

Add yours