ತಹಶೀಲ್ದಾರ್ ಎನ್.ರಘುಮೂರ್ತಿ ದಿಟ್ಟ ನಿರ್ಧಾರಕ್ಕೆ ಸಮಸ್ಯೆಯಿಂದ ಸ್ಥಗಿತಗೊಂಡಿದ್ದ ಕಾಮಗಾರಿಗೆ ಚಾಲನೆ.

 

 

 

 

ಚಳ್ಳಕೆರೆ:  ತಾಲೂಕು ಕಸಬಾ ಹೋಬಳಿ ಬುಡ್ನಹಟ್ಟಿ ಗ್ರಾಮದ ಸರ್ವೇ ನಂಬರ್ 73 ರಲ್ಲಿ ಒಂದೆಕರೆ 24 ಗುಂಟೆ ಸರ್ಕಾರಿ ಜಮೀನು ತೆರವು ಗೊಳಿಸಲಾಗಿದ ಅಲ್ಪಸಂಖ್ಯಾತರ ಮುರಾರ್ಜಿ ಶಾಲೆಗೆ ಒಂಬತ್ತು ಎಕರೆ ಸರ್ಕಾರಿ ಜಮೀನು ಅಗತ್ಯವಿದ್ದು ಈ ಶಾಲೆಗೆ ಜಮೀನನ್ನು ಮೀಸಲಿಡಬೇಕೆಂದು ಸರ್ಕಾರದಿಂದ ನಿರ್ದೇಶನವಿರುತ್ತದೆ.  ಪ್ರಸ್ತಾವಿತ ಜಮೀನನ್ನು ಸದರಿ ಶಾಲೆಗೆ ಮೀಸಲಿರಿಸುವಂತೆ ಚಳ್ಳಕೆರೆ ತಹಶೀಲ್ದಾರ್ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕೂಡ ಸಲ್ಲಿಸಲಾಗಿದೆ. ಆದರೆ ಗ್ರಾಮದ ಚಂದ್ರಶೇಖರ್ ನಾಯಕ ಇವರು ಮೇಲ್ಕಂಡ 9 ಎಕರೆ ಜಮೀನಿನಲ್ಲಿ 1ಎಕರೆ 24 ಗುಂಟೆ ಪ್ರದೇಶವನ್ನು ಅತಿಕ್ರಮಿಸಿಕೊಂಡು ಸದರಿ ಶಾಲೆಯ ಕಾಮಗಾರಿಯ ಕೆಲಸಕ್ಕೆ ಅಡ್ಡಿಪಡಿಸಿದ್ದು ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿಗಳಿಗೆ ತಲೆನೋವಾಗಿ ಸಂಭವಿಸಿದ್ದು ಆರು ತಿಂಗಳುಗಳಿಂದ ಈ ಕಾಮಗಾರಿ ಪ್ರಾರಂಭಿಸಲು ಅಡ್ಡಿಯಾಗಿತ್ತು ಇದನ್ನರಿತ ಚಳ್ಳಕೆರೆ ತಹಶೀಲ್ದಾರ್  ಎನ್. ರಘುಮೂರ್ತಿ ಇವತ್ತು ಸರ್ವೆ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿಗಳೊಂದಿಗೆ ಸದರಿ ಜಾಗದಲ್ಲಿ ಮೊಕ್ಕಾಂ ಹೂಡಿ ಒತ್ತುವರಿದಾರರಿಗೆ ಬಿಸಿ ಮುಟ್ಟಿಸಿ ಒತ್ತುವರಿಯಾಗಿರುವ ಪ್ರದೇಶವನ್ನು ಸರ್ಕಾರದ ವಶಕ್ಕೆ ಪಡೆದು ಸಂಖ್ಯಾತರ ಇಲಾಖೆಯ ಅಧಿಕಾರಿಗಳ ವಶಕ್ಕೆ ನೀಡಿ ಅಲ್ಲಿ ಟ್ರೆಂಚ್ ಹೊಡಿಸುವ ಮುಖಾಂತರ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದರು. ಇದರಿಂದ ಸುಮಾರು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಅಂತ ಶಾಲೆಯ ಕಾಮಗಾರಿ ಆರಂಭವಾದಂತಾಗಿದೆ. ಈ ಸಂದರ್ಭದಲ್ಲಿ ರಾಜಸ್ವ ನಿರೀಕ್ಷಕ ಲಿಂಗೇಗೌಡ ತಾಲೂಕು ಸರ್ವೆ ಪ್ರಸನ್ನಕುಮಾರ್ ಅಲ್ಪಸಂಖ್ಯಾತರ ಇಲಾಖೆಯ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು

 

 

[t4b-ticker]

You May Also Like

More From Author

+ There are no comments

Add yours