ದೇಶ ಓಗ್ಗೂಡಿರಲು ಅಂಬೇಡ್ಕರ್ ರಚಿಸಿದ ಸಂವಿಧಾನ ಕಾರಣ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ(ಕರ್ನಾಟಕ ವಾರ್ತೆ). ಏ.14:
140 ಕೋಟಿ ಜನಸಂಖ್ಯೆ ಹೊಂದಿರುವ ದೇಶ ಓಗ್ಗೂಡಿರಲು ಹಾಗೂ ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ನೆಲೆ ಹೊಂದಲು ಡಾ.ಬಿ.ಆರ್. ಅಂಬೇಡ್ಕರ್ ರಚಿಸದ ಸಂವಿಧಾನ ಕಾರಣವಾಗಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ತರಾಸು ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರ 131ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಎರೆಡು ವರ್ಷಗಳಿಂದ ಕೋವಿಡ್ ಹಿನ್ನಲೆಯಲ್ಲಿ ಅಂಬೇಡ್ಕರ್ ಜಯಂತಿ ಸಾಂಕೇತಿಕವಾಗಿ ಆಚರಣೆ ಮಾಡಲಾಗಿತ್ತು. ಈ ಬಾರಿ ವಿಶೇಷವಾಗಿ ಉತ್ಸಾಹದಿಂದ ಜಯಂತಿಯನ್ನು ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿ ಹಳ್ಳಿಗಳಲ್ಲೂ ಸಡಗರದಿಂದ ಜಯಂತಿ ಆಚರಿಸಲಾಗುತ್ತಿದೆ ಎಂದರು.
ಅಂಬೇಡ್ಕರ್ ಕೇವಲ ದಲಿತ ಸಮುದಾಯ ವಿಮೋಚಕರಲ್ಲ. ಎಲ್ಲಾ ಸಮುದಾಯಗಳ ಏಳಿಗೆ ಶ್ರಮಿಸಿದವರು. ದೇಶದಲ್ಲಿ ರಾಜಕೀಯ ಸಮಾನತೆ ಮೂಡಿಬರಲು ಅಂಬೇಡ್ಕರ್ ಕಾರಣಿ ಪುರುಷರಾಗಿದ್ದಾರೆ. ಬಾಲ್ಯದಲ್ಲಿ ಅನುಭವಿಸಿದ ಕಷ್ಟಗಳು ಅವರನ್ನು ತುಳಿತಕ್ಕೆ ಒಳಗಾದವರ ಬಗ್ಗೆ ಹೋರಾಟಕ್ಕೆ ಪ್ರೇರೆಪಿಸಿದವು. ವಿದ್ಯಾರ್ಥಿ ದೆಸೆಯಿಂದಲೂ ಅಂಬೇಡ್ಕರ್ ಹೋರಾಟದ ಮನೋಭಾವ ಹೊಂದಿದ್ದರು. ಸ್ವಾತಂತ್ರ್ಯ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂದ ಸರ್ಕಾರದಲ್ಲಿ ಕಾರ್ಮಿಕ ಹಾಗೂ ಕಾನೂನು ಸಚಿವರಾಗಿ ಹಲವು ಪ್ರಗತಿಪರ ಯೋಜನೆಗಳನ್ನು ಜಾರಿಗೆ ತಂದರು. ಅಂಬೇಡ್ಕರ್ ದಣಿವರಿಯದೆ, ವಿಶ್ರಾಂತಿ ಬಯಸದೆ ಸದಾ ದಲಿತರ ಏಳಿಗೆ ಬಗ್ಗೆ ಚಿಂತಿಸಿದರು. ಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಂಬೇಡ್ಕರ್ ಹಾಗೂ ಪ್ರಧಾನಿ ನೆಹರು ನಡುವೆ ಹಲವು ಭಿನ್ನಾಭಿಪ್ರಾಯಗಳಿದ್ದವು. ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅಂಬೇಡ್ಕರ್ 1952ರಲ್ಲಿ ಹೊಸ ರಾಜಕೀಯ ಪಕ್ಷ ಕಟ್ಟಿದರು. ಅವರ ಮಾರ್ಗದರ್ಶನ ಅಗತ್ಯವಿದ್ದ ಸಂದರ್ಭದಲ್ಲಿ ಅವರು ನಮ್ಮನ್ನು ಅಗಲಿದರು. ಇಂದಿಗೂ ದೇಶದಲ್ಲಿ ಅಸ್ಪøಶ್ಯತೆ ಹಾಗೂ ಮಲಹೊರುವ ಪದ್ದತಿ ಜಾರಿಯಲ್ಲಿರುವುದು ಶೋಚನೀಯ. ದಕ್ಷಿಣ ಆಫ್ರೀಕಾದ ನೆಲ್ಸನ್ ಮಂಡೇಲಾ, ಉತ್ತರ ಅಮೇರಿಕಾದ ಮಾರ್ಟಿನ್ ಲೂಥರ್ ಹೀಗೆ ನಾನಾ ಹೋರಾಟಗಾರಿಗೆ ಅಂಬೇಡ್ಕರ್ ಸ್ಪೂರ್ತಿಯಾಗಿದ್ದರು. ಸರ್ಕಾರ ಅಂಬೇಡ್ಕರ್ ಸಂಬಂಧಿಸಿದ ಸ್ಮಾರಕಗಳನ್ನು ಅಭಿವೃದ್ಧಿ ಪಡಿಸುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ದೇಶದ ಮುಂದಿನ 500 ವರ್ಷಗಳ ಭವಿಷ್ಯವನ್ನು ದೃಷ್ಟಿಯಲ್ಲಿರಿಸಿಕೊಂಡು ಅಂಬೇಡ್ಕರ್ ಸಂವಿಧಾನ ರಚನೆ ಮಾಡಿದ್ದಾರೆ. ಸರ್ಕಾರದ ಸವಲತ್ತುಗಳು ಗ್ರಾಮದ ಬಡವರಿಗೆ ತಲುಪಿಸಲು ಅಧಿಕಾರಿಗಳು ಪ್ರಯತ್ನಿಸಬೇಕು. ಸಾಮಾಜಿಕ ನ್ಯಾಯಕ್ಕಾಗಿ ವಿದ್ಯಾರ್ಥಿಗಳು ಹೋರಾಟ ನಡೆಸಬೇಕು. ವಿದ್ಯಾಭ್ಯಾಸದ ತರುವಾಯ ಗ್ರಾಮಗಳಿಗೆ ತೆರಳಿ ಜನರನ್ನು ಜಾಗೃತಗೊಳಿಸಬೇಕು ಎಂದು ಸಲಹೆ ನೀಡಿದರು.
ಅಸ್ಪøಶ್ಯತೆ ತೊಡೆದು ಹಾಕಲು ಸರ್ಕಾರ ವಿನಯ್ ಸಾಮರಸ್ಯ ಯೋಜನೆ ಜಾರಿಗೆ ತಂದಿದೆ. ಎಲ್ಲಾ ಸಮುದಾಯಗಳಿಗೆ ದೇವಸ್ಥಾನಗಳ ಪ್ರವೇಶ ಮುಕ್ತವಾಗಿಸಿದೆ ಎಂದರು.
ಅಂಬೇಡ್ಕರ್ ಜೀವನ ಸಾಧನೆ ಕುರಿತು ಉಪನ್ಯಾಸ ನೀಡಿದ ಬರಹಗಾರ ಎಂ.ವೇದಾಂತ್ ಏಳಂಚಿ, ಅಂಬೇಡ್ಕರ್ ಭಾರತದ ಜ್ಞಾನದ ಸಂಕೇತವಾಗಿದ್ದಾರೆ. ಬಾಲ್ಯದಲ್ಲಿ ಬುದ್ದನ ಸಮಾನತೆ ವಿಚಾರಗಳಿಂದ ಅಂಬೇಡ್ಕರ್ ಪ್ರಭಾವಿತರಾಗಿದ್ದರು. ಅವರಲ್ಲಿ ವಿದ್ಯಾರ್ಥಿ ದೆಸೆಯಲ್ಲಿಯೇ ಸಾಮಾಜಿಕ ಕಳಕಳಿ ಹಾಗೂ ಬದ್ದತೆ ಇತ್ತು. ಅರ್ಥಶಾಸ್ತ್ರ, ರಾಜಕೀಯ, ಮಾನವಶಾಸ್ತ್ರಗಳಲ್ಲಿ ಅಪಾರ ಜ್ಞಾನ ಗಳಿಸಿದ್ದರು. ಇದರ ಜೊತೆಗೆ ಶ್ರೇಷ್ಠ ಕಾನೂನು ತಜ್ಞರೂ ಆಗಿದ್ದರು. ಬಹಿಷ್ಕøತ ಸಮಾಜ, ಮೂಕನಾಯಕ ಅವರು ಹೊರತಂದ ಪತ್ರಿಕೆಗಳಾಗಿವೆ. ಭಾರತದಲ್ಲಿ ಮೊದಲ ಬಾರಿ ಕಾನೂನಿನ ಮೂಲಕ ಸ್ತ್ರೀ ಸ್ವಾತಂತ್ರ್ಯ ಚಿಂತನೆಯನ್ನು ಜಾರಿಗೆ ತರಲು ಪ್ರಯತ್ನಿಸಿದರು. ಸಾಮಾಜಿಕ ನ್ಯಾಯದ ಹಿನ್ನಲೆಯಲ್ಲಿ ಅಂಬೇಡ್ಕರ್ ಕೊಡುಗೆಯನ್ನು ನಾವು ಗ್ರಹಿಸಬೇಕು. ಇಂದಿನ ಪಠ್ಯ ಪುಸ್ತಕಗಳಲ್ಲಿ ಅಂಬೇಡ್ಕರ್ ಬಗೆಗಿನ ಪಠ್ಯಗಳು ಮಾಯವಾಗಿವೆ. ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕು ಎಂದರು.
ಈ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಆದಿ ಜಾಂಭವ ಅಭಿವೃದ್ಧಿ ನಿಗಮದಿಂದ ಕಿರು ಸಾಲದ ಚಕ್‍ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ನಂದಿನಿದೇವಿ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಮತಾ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಓ.ಪರಮೇಶ್ವರಪ್ಪ ಸೇರಿದಂತೆ ಮತ್ತಿತರರು ಇದ್ದರು.

 

 

[t4b-ticker]

You May Also Like

More From Author

+ There are no comments

Add yours