ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಚಿತ್ರದುರ್ಗ ಜಿಲ್ಲಾ ಶಾಖೆಯಲ್ಲಿ ಅಂಬೇಡ್ಕರ್ ಜಯಂತಿ.

 

 

 

 

 

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ವತಿಯಿಂದ ಇಂದು ಅಂಬೇಡ್ಕರ್ ಅವರ 131ನೇ ಜಯಂತಿಯನ್ನು ಸಂಘದ ಪದಾಧಿಕಾರಿಗಳು ಕಾರ್ಯಕಾರಿ ಸಮಿತಿ ಸದಸ್ಯರು ನಾಮನಿರ್ದೇಶಿತ ಸದಸ್ಯರು ಹಾಗೂ ನೌಕರರೊಂದಿಗೆ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು.

 

 

ಸಂವಿಧಾನ ಶಿಲ್ಪಿ ಭಾರತರತ್ನ ಮಹಾಮಾನವತಾವಾದಿ ದಮನಿತರ ದೀನದಲಿತರ ಸಮಾಜದಲ್ಲಿ ತುಳಿತಕ್ಕೊಳಗಾದವರ ಪರವಾಗಿ ಹೋರಾಟ ಮಾಡಿದ ಮಹಾಚೇತನ ಡಾಕ್ಟರ್ ಬಿಆರ್ ಅಂಬೇಡ್ಕರ್ ರವರ ಜಯಂತ್ಯೋತ್ಸವದಲ್ಲಿ ಸಂಘದ ಸಹಕಾರ ದರ್ಶಿ ಗಳಾದ ತಾಜೀರ್ ಪಾಷಾ ಅವರು ಮಾತನಾಡಿ ಅಂಬೇಡ್ಕರ್ ಅವರ ಬಾಲ್ಯ, ವೈವಾಹಿಕ, ಜೀವನ ಹಾಗೂ ಅವರ ವಿದ್ಯಾಭ್ಯಾಸ ವಿವರಗಳನ್ನು ಹಂಚಿಕೊಂಡರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರಾದ ಶ್ರೀ ವೀರಣ್ಣ ರವರು ಮಾತನಾಡಿ ಸಂವಿಧಾನದ ರಚನೆ, ಅವರ ಸಾಧನೆಗಳು ತುಳಿತಕ್ಕೊಳಗಾದವರ ಪರವಾಗಿ ಮಾಡಿದ ಚಿಂತನೆಗಳು ಹೋರಾಟಗಳ ಬಗ್ಗೆ ಸವಿವರವಾಗಿ ಮಾತನಾಡಿದರು.

ಜಿಲ್ಲಾಧ್ಯಕ್ಷರಾದ ಮಂಜುನಾಥ್ ರವರು ಡಾ ಬಿ.ಆರ್ ಅಂಬೆಡ್ಕರ್ ಮಹಾಮಾನವತಾವಾದಿ, ದಮನಿತರ, ದೀನದಲಿತರ, ಸಮಾಜದಲ್ಲಿ ತುಳಿತಕ್ಕೆ ಒಳಗಾದ, ಮಹಿಳೆಯರ, ಕಾರ್ಮಿಕರ ಪರವಾಗಿ ನ್ಯಾಯಯುತ ಹಕ್ಕುಗಳಿಗಾಗಿ ಹೊರಾಟಮಾಡಿ ಸಂವಿಧಾನ ಬದ್ಧವಾದ ಹಕ್ಕುಗಳನ್ನು ನೀಡುವಲ್ಲಿ ಶ್ರಮಿಸಿದ ಮಹಾನ್ ಚೇತನ ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳುತ್ತಾ ಸಂಘಟನೆಯಲ್ಲಿ ನೌಕರರು ತಮ್ಮ ಪಾಲಿನ ನ್ಯಾಯಬದ್ಧವಾಗಿ ನೀಡುವಂತಹ ಸೌಲಭ್ಯಗಳನ್ನು ಹಕ್ಕುಗಳನ್ನು ಪಡೆಯಲು ಸಂವಿಧಾನಬದ್ಧವಾಗಿ ಹೋರಾಟ ಮಾಡಲು ಸಂವಿಧಾನವೇ ಮೂಲ ಆಧಾರ. ಆದ್ದರಿಂದ ಆದ್ದರಿಂದ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಆಶಯದಂತೆ ದೇಶದ ಎಲ್ಲಾ ಜನರಿಗೆ ಉಚಿತ ಶಿಕ್ಷಣ ಉಚಿತ ಆರೋಗ್ಯ ಸೌಲಭ್ಯಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಶೋಷಿತರಿಗೆ ದಲಿತರಿಗೆ ದೊರಕುವಂತಾಗಬೇಕು. ಕೆಲವೇ ಕೆಲವು ಸಮುದಾಯಗಳಿಗೆ ಸೀಮಿತವಾಗಿದ್ದ ಶಿಕ್ಷಣವನ್ನು ಪ್ರತಿಯೊಬ್ಬರಿಗೂ ಸಂವಿಧಾನದ ಮೂಲಕ ಸಂವಿಧಾನಬದ್ಧವಾಗಿ ನೀಡುವ ಮೂಲಕ ಪ್ರತಿಯೊಬ್ಬರಲ್ಲಿಯೂ ಪ್ರಶ್ನಿಸುವ ಹಕ್ಕನ್ನು ಜಾಗೃತಿ ಗೊಳಿಸಿದ ಮಹಾನಾಯಕ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ 131ನೇ ಜಯಂತಿ ದಿನದಂದು ಮತ್ತೋಮ್ಮೆ ಸಂಘದ ಪದಾಧಿಕಾರಿಗಳಿಗೆ ಕಾರ್ಯಕಾರಿ ಸಮಿತಿ ಸದಸ್ಯರಿಗೆ ನೌಕರರಿಗೆ ಶುಭಾಶಯಗಳು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಶ್ರೀ ಕೆ ಮಂಜುನಾಥ, ಪ್ರದೀಪ್ ಕುಮಾರ್ ಜಿ ಆರ್, ಹಿರಿಯ ಉಪಾಧ್ಯಕ್ಷರಾದ ಶಿವಮೂರ್ತಿ, ಉಪಾಧ್ಯಕ್ಷರಾದ ವೀರಣ್ಣ, ರಾಘವೇಂದ್ರ, ಖಾಜಾಹುಸೇನ್, ಸಹ ಕಾರ್ಯದರ್ಶಿಗಳಾದ ತಾಜಿರ್ ಗವಿಸಿದ್ದೇಶ್, ಗುರುಮೂರ್ತಿ,
ಚಂದ್ರನಾಯಕ್, ರಾಘವೇಂದ್ರ ತಿರುಮಲೇಶ್
ಹುಲಿ ಕುಂಟಪ್ಪ ಗೀತಮ್ಮ, ಕಾಂತರಾಜು, ಹನುಮಂತಪ್ಪ, ರಾಜಪ್ಪ,ಕೃಷ್ಣಪ್ಪ, ವಡಕಲ್ ತಿಮ್ಮಣ್ಣ, ನಾಮನಿರ್ದೇಶಿತ ಸದಸ್ಯರು ನೌಕರರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours