ಹಲವು ವರ್ಷಗಳ ನಂತರ ಮತ್ತೆ ರಾಜಕೀಯ ಪುನರಾರಂಭ: ಸಚಿವ ಗಾಲಿ ಜನಾರ್ಧನ ರೆಡ್ಡಿ

 

 

 

 

ಹೊಸಪೇಟೆ: ಹಲವು  ವರ್ಷಗಳ  ಬಳಿಕ ಮತ್ತೆ ರಾಜಕೀಯ ಜೀವನ ಪುನರಾರಂಭಿಸುವುದಾಗಿ ಮಾಜಿ ಸಚಿವ ಗಾಲಿ  ಜಿ.ಜನಾರ್ಧನ ರೆಡ್ಡಿ ಘೋಷಿಸಿಕೊಂಡಿದ್ದಾರೆ.

ಹರಪನಹಳ್ಳಿ ನಗರದ  ಎಚ್. ಪಿ.ಎಸ್. ಕಾಲೇಜಿನ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಸೀತಾರಾಮ ಕಲ್ಯಾಣೋತ್ಸವ ಹಾಗೂ ಷಷ್ಠ್ಯಾಬ್ದಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ 150 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಗೆಲ್ಲುವಂತೆ ಎಲ್ಲಾರೂ ಒಗ್ಗಟ್ಟಾಗಿ ಮಾಡುತ್ತೇವೆ ಎಂದರು.

 

 

ಪಕ್ಷ ಅಧಿಕಾರಕ್ಕೆ ಬರಲು ಎಲ್ಲಾ  ಕಾರ್ಯತಂತ್ರ ರೂಪಿಸಿ, ಬಿಜೆಪಿಯನ್ನು ಅಧಿಕಾರಕ್ಕೆ ಬರುವಂತೆ ಮಾಡಲು ಶ್ರಮಿಸುತ್ತೇನೆ ಎಂದು  ಹೇಳಿದ್ದಾರೆ.

ಶ್ರೀರಾಮುಲು ಸೇರಿ ನಾವು ಮೂವರು ಲಕ್ಷ್ಮಣ, ಭರತ್, ಶತ್ರುಘ್ನನಾದರೇ ನಮ್ಮ ಅಣ್ಣ ಕರುಣಾಕರ ರೆಡ್ಡಿ ಶ್ರೀರಾಮ.1999 ರಲ್ಲಿ ಸುಷ್ಮಾ ಸ್ವರಾಜ್​ ಬಳ್ಳಾರಿಗೆ ಬಂದಾಗ ಜಿಲ್ಲೆಯ ಜನರು ಪ್ರೀತಿ ತೋರಿದರು. ಅದಾದ ಬಳಿಕ ಭಾರತ ರಾಷ್ಟ್ರದ ಇತಿಹಾಸದಲ್ಲಿ 2004 ರಲ್ಲಿ ಕಾಂಗ್ರೆಸ್ ಭದ್ರಕೋಟೆಯನ್ನು ಹೊಡೆದುರುಳಿಸಿ, ಕರುಣಾಕರ ರೆಡ್ಡಿಯನ್ನು ಲೋಕಸಭಾ ಕ್ಷೇತ್ರಕ್ಕೆ ಕಳುಹಿಸಲಾಯಿತು.ನಮ್ಮ ಕುಟುಂಬಕ್ಕೆ ಹಾಗೂ ಹರಪನಹಳ್ಳಿಗೆ ಅವಿನಾಭವ ಸಂಬಂಧವಿದೆ ಎಂದು ಹಳೆದ ನೆನಪುಗಳನ್ನು ಮೆಲುಕು ಹಾಕಿದರು.

[t4b-ticker]

You May Also Like

More From Author

+ There are no comments

Add yours