ಸಿನಿಮಾ, ಧಾರವಾಹಿಗಳು ಪ್ರಭಾವ ಎಷ್ಟೇ ಬೀರಿದರೂ ನಾಟಕ ಎಂದಿಗೂ ಜೀವಂತ: ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಚಳ್ಳಕೆರೆ  :  ನಾಟಕವು ಎಲ್ಲವನ್ನು ಒಳಗೊಂಡ ಸಮಗ್ರ ಕಲೆಯಾಗಿದ್ದು, ಇದನ್ನು ಪ್ರತಿಯೊಬ್ಬರು ಸ್ವೀಕರಿಸುವಂತಾಗಬೇಕು. ಸಮಾಜದ ಹುಳುಕುಗಳನ್ನು ಎತ್ತಿ ತೋರಿಸುವ, ಸಮಾಜದ ಸಂಬಂಧಗಳನ್ನು ಗಟ್ಟಿಗೊಳಿಸುವ ಸಾಮರ್ಥ್ಯ‌ ನಾಟಕಗಳಿಗಿದೆ ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು

 

 

ತಾಲೂಕಿನ ತಳಕಿ ಹೋಬಳಿ ಬಂಜಗೆರೆ ಮಾರುತಿ ಗ್ರಾಮದಲ್ಲಿ ಕೃಪಪೊಷಕ ನಾಟಕ ಮಂಡಳಿ ಯುವಕರ ಸಂಘದ ವತಿಯಿಂದ ಕುಡುಕ ಕಟ್ಟಿದ ಪ್ರೇಮಕೊಟೆ ಸಾಮಾಜಿಕ ನಾಟಕ ದಲ್ಲಿ ಅವರು ಮಾತನಾಡಿ, ಎರಡು ವರ್ಷ ಕೊವಿಡ್ ಇದ್ದ ಕಾರಣ ನಾಟಕಗಳು ಸಂಪೂರ್ಣ ನಿಂತು ಹೋಗಿದ್ದವು ಈಗ ಸ್ವಲ್ಪ ಕೋವಿಡ್ ಕಡಿಮೆ ಆದ ಹಿನ್ನೆಲೆಯಲ್ಲಿ ಇಂದು ಎಲ್ಲಾ ಕಡೆ ನಾಟಕಗಳು ಕಳೆ ಕಟ್ಟಿವೆ ನಾಟಕ ಪುರಾತನ ಗಂಡು ಕಲೆ. ರಂಗಭೂಮಿ ಬದುಕಿನ ಕನ್ನಡಿ ಹಾಗೂ ನೈಜ ಕಲೆಯಾಗಿದ್ದು, ಪ್ರೇಕ್ಷ ಕರೇ ಇದರ ಜೀವಾಳವಾಗದ್ದಾರೆ ಜಾಗತೀಕರಣ ಮತ್ತು ಅಧುನಿಕತೆಯ ಭರಾಟೆಯಲ್ಲಿ ನಮ್ಮ ಸಂಸ್ಕೃತಿಯ ಪ್ರತಿಬಿಂಬಗಳಾಗಿರುವ ನಾಟಕಗಳು ಇಂದು ಹೆಚ್ಚು ಜನರನ್ನು ತಲುಪುತ್ತಿಲ್ಲ. ಜನತೆ ಸಿನಿಮಾ, ಟಿವಿ ಕಡೆಗೆ ಆಕರ್ಷಿತರಾಗಿ ನಾಟಕಗಳನ್ನು ನೋಡುವುದನ್ನೇ ಕಡಿಮೆ ಮಾಡಿದ್ದಾರೆ ಎಂದು ವಿಷಾಧಿಸಿದ ಅವರು, ಸಿನಿಮಾ, ಧಾರವಾಹಿಗಳ ಪ್ರಭಾವ ಎಷ್ಟೇ ಬೀರಿದರೂ ನಾಟಕ ಎಂದಿಗೂ ಜೀವಂತವಾಗಿರುತ್ತದೆ .
ನಾಟಕಗಳನ್ನು ಜನರು ಹೆಚ್ಚು ಹೆಚ್ಚು ನೋಡಿದಾಗ ಮತ್ತು ಹೆಚ್ಚು ಹೆಚ್ಚು ಪ್ರದರ್ಶನಗಳಾದಾಗ ಮಾತ್ರ ನಾಟಕಗಳ ಸಾರ್ಥಕತೆ ಪಡೆಯುತ್ತವೆ. ಸಮಾಜದಲ್ಲಿ ಕಲಾವಿದರಿಗೆ ಉತ್ತಮ ಸ್ಥಾನಮಾನಗಳು ಸಿಗಬೇಕು. ಕಲಾವಿದರು ಬದುಕು ಎಷ್ಟೇ ಸಂಕಷ್ಟದಲ್ಲಿದ್ದರೂ ತಮ್ಮ ರಕ್ತಗತವಾದ ಕಲೆಯಿಂದ ಸಮಾಜದ ಸಂಕಷ್ಟಗಳನ್ನು ಮರೆಸಿ, ಮನರಂಜಿಸುತ್ತಾರೆ. ಆಧುನಿಕ ಯುಗದ ಒತ್ತಡಗಳಿಗೆ ನಮ್ಮ ಸಾಂಪ್ರದಾಯಿಕ ಕಲಾ ಪ್ರಕಾರಗಳು ಅವನತಿಗೊಳ್ಳುತ್ತಿವೆ. ರಾಜ್ಯದಲ್ಲಿ ಹಿಂದೊಮ್ಮೆ ನಾಟಕಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದವು ಈಗ ಆ ಪರಿಸ್ಥಿತಿ ಇಲ್ಲವಾಗಿದೆ. ಅಳಿದುಳಿದ ಕೆಲವು ವೃತ್ತಿ ರಂಗಭೂಮಿ ಕಂಪನಿಗಳು ಈ ನಾಟಕದ ಪರಂಪರೆಯನ್ನು ಮುಂದುವರೆಸುತ್ತಿವೆ. ಇವರಿಗೆ ನಮ್ಮ ಸಹಕಾರ, ಪ್ರೋತ್ಸಾಹ ನೀಡಬೇಕಿದೆ ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ನಿವೃತ ಇಂಜನೀಯರ್ ನಾಗಭೂಷನ್, ಗುತ್ತಿಗೆ ದಾರರಾದ ಹನುಮಂತಪ್ಪ, ನಿವೃತ ಎಸಿಪಿ ಅಜ್ಜಪ್ಪ,,ದಾವಣಗೆರೆ ಬಸಣ್ಣ,ನಗರಸಭೆ ಗ್ರಾಮಪಂಚಾಯಿತಿ ಸದಸ್ಯರು.ಹಾಗೂಗ್ರಾಮಸ್ಥರು ಮುಖಂಡರು ಇದ್ದರು.

[t4b-ticker]

You May Also Like

More From Author

+ There are no comments

Add yours