ಸರ್ಕಾರದ ಕೆರೆ, ಗೋಮಾಳ ಒತ್ತುವರಿ ಮಾಡಿದರೆ ಮುಲಾಜಿಲ್ಲದೆ ಕ್ರಮ: ತಹಶೀಲ್ದರ್ ಎನ್.ರಘುಮೂರ್ತಿ

 

 

 

 

ಚಳ್ಳಕೆರೆ : ಸರ್ಕಾರದ  ಕೆರೆಗಳನ್ನು ಒತ್ತುವರಿ ಮಾಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಬೇಕು ಎಂದು ತಹಶೀಲ್ದರ್ ಎನ್.ರಘುಮೂರ್ತಿ ಹೇಳಿದರು.

 

 

ಚಳ್ಳಕೆರೆ ತಾಲೂಕಿನಲ್ಲಿ ರಾಜ್ಯ ಸರ್ಕಾರದ ಹಾಗೂ  ಜಿಲ್ಲಾಧಿಕಾರಿಗಳ ಆದೇಶದಂತೆ ಕೆರೆ ಒತ್ತುವರಿ ತೆರವು ಮುಂದುವರೆದ ಭಾಗವಾಗಿ ಇಂದು ಬೊಮ್ಮಸಂದ್ರ ಹಾಗೂ ನೇರಲಗುಂಟೆ ಕೆರೆಯಲ್ಲಿ ಒತ್ತುವರಿ ಮಾಡಿದ್ದ ಒತ್ತುವರಿಯನ್ನು ಗ್ರಾಮೀಣಾಭಿವೃದ್ಧಿ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ನೇರಲಗುಂಟೆ ಕೆರೆ ವಿಸ್ತೀರ್ಣ-22 ಎಕರೆ, ನನ್ನಿವಾಳ ಕೆರೆ ವಿಸ್ತೀರ್ಣ-2.00 ಹಾಗೂ ಬೊಮ್ಮಸಂದ್ರ ಕೆರೆ ವಿಸ್ತೀರ್ಣ- 3.00 ಎಕರೆ ಕೆರೆಗಳ ಒತ್ತುವರಿಯನ್ನು ತೆರವು ಗೊಳಿಸಲಾಯಿತು.
ಮುಂದಿನ ದಿನಗಳಲ್ಲಿ ಸಾರ್ವಜನಿಕರು ಸರ್ಕಾರಿ ಸ್ವಾಮ್ಯದ ಯಾವುದೇ ಕೆರೆ, ಕಟ್ಟೆ , ಸ್ಮಶಾನ , ಸರ್ಕಾರಿ ಓಣಿ ಮತ್ತು ಸರ್ಕಾರಿ ಗೋಮಾಳ ಮುಂತಾದ ಸಾರ್ವಜನಿಕ ಸ್ವತ್ತನ್ನು ಅತಿಕ್ರಮಿಸಿದ್ದೆ ಆದಲ್ಲಿ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುವುದರ ಜೊತೆಗೆ ಭೂ ಕಂದಾಯ ಕಾಯ್ದೆಯ ನಿಯಮ 192(A) ರಡಿ ಪ್ರಕರಣ ದಾಖಲಿಸಿ, ಶಿಕ್ಷೆಗೆ ಗುರಿ ಪಡಿಸಲಾಗುವುದೆಂದು ಸಾರ್ವಜನಿಕರಿಗೆ ಅರಿವು ಮೂಡಿಸಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಕಂದಾಯ ಇಲಾಖೆಯ ಉಪತಹಶೀಲ್ದಾರ್, ರಾಜಸ್ವ ನಿರೀಕ್ಷಕರು, ಗ್ರಾಮಲೆಕ್ಕಾಧಿರಿಗಳು, ಸರ್ವೆಯರ್ ಗಳು, ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours