ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ೨೩ನೇ ಮಹಾ ಅಧಿವೇಶನ

 

 

 

 

ದಾವಣಗೆರೆ: ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ೨೩ನೇ ಮಹಾ ಅಧಿವೇಶನ ಡಿ.೨೪ ರಿಂದ ೨೬ರ ವರೆಗೆ ನಗರದ ಎಂಬಿಎ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹೇಳಿದರು.

ಶಾಸಕ ಶಾಮನೂರು ನಗರದ ತಮ್ಮ ನಿವಾಸದಲ್ಲಿ ಅಧಿವೇಶನಕ್ಕೆ ಬರುವ ಪ್ರತಿನಿಧಿಗಳ ನೋಂದಣಿ ಪತ್ರಗಳನ್ನು ಬುಧವಾರ ಬಿಡುಗಡೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿವೇಶನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಎರಡನೇ ದಿನ ಮಹಿಳಾ ಸಮಾವೇಶ, ಯುವ ಸಮಾವೇಶ ನಡೆಯಲಿವೆ. ಮೂರನೇ ದಿನ ಧಾರ್ಮಿಕ ಸಮಾರಂಭ ಹಮ್ಮಿಕೊಳ್ಳಲಾಗಿದ್ದು ನಾಡಿನ ವಿವಿಧ ಮಠಾಧೀಶರು ಪಾಲ್ಗೊಳ್ಳುವರು. ಚರ್ಚಾ ಗೋಷ್ಠಿ, ಕೃಷಿ ಮೇಳ ಆಯೋಜಿಸಲಾಗುವುದು ಎಂದು ವಿವರಿಸಿದರು.

ಈ ಅಧಿವೇಶನವು ಸಮಾಜದ ಒಗ್ಗಟ್ಟಿನ ಪ್ರದರ್ಶನಕ್ಕೆ ವೇದಿಕೆಯಾಗಲಿದೆ. ಅಧಿವೇಶನಕ್ಕೆ ಮಹಾಸಭೆಯ ಸದಸ್ಯರು ಸೇರಿ ಒಂದು ಲಕ್ಷ ಜನರು ಆಗಮಿಸುವ ನಿರೀಕ್ಷೆಯಿದ್ದು, ಅವರಿಗೆ ಮೂರು ದಿನಗಳ ಕಾಲ ವಸತಿ, ಊಟ, ತಿಂಡಿಯ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

 

 

ಎಲ್ಲ ಉಪ ಪಂಗಡಗಳೂ ಒಂದಾಗಬೇಕು ಎಂಬುದು ನಮ್ಮ ಆಶಯ. ಆಗ ಸಮಾಜದ ಜನಸಂಖ್ಯೆ ೨ ಕೋಟಿಯನ್ನು ದಾಟುತ್ತದೆ. ವೀರಶೈವ ಲಿಂಗಾಯತ ಸಮಾಜಕ್ಕೆ ಕೇಂದ್ರ ಸರ್ಕಾರದಿಂದ ಒಬಿಸಿ ಮೀಸಲಾತಿ, ರಾಜ್ಯ ಸರ್ಕಾರದಿಂದ ಉಪ ಪಂಗಡಗಳಿಗೆ ಮೀಸಲಾತಿ ಸಿಗಬೇಕು. ದಾವಣಗೆರೆಯ ಶಾಮನೂರು ರಸ್ತೆಯಲ್ಲಿರುವ ನಿವೇಶನದಲ್ಲಿ ಮಹಿಳಾ ಹಾಸ್ಟೆಲ್ ನಿರ್ಮಿಸುವ ಕುರಿತು ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಹಾಸಭಾ ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್ ಮಾತನಾಡಿ, ಅಧಿವೇಶನ ಸ್ಥಳದಲ್ಲಿ ೧೬೦-೨೦೦ ಅಡಿ ಅಳತೆಯ ಪೆಂಡಾಲ್ ಹಾಕಲಾಗುವುದು. ಅತಿಥಿಗಳಿಗೆ ಅಗತ್ಯ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಎ.ಎಸ್. ವೀರಣ್ಣ, ಎಸ್.ಎಸ್. ಗಣೇಶ್, ಮುಖಂಡರಾದ ಜಿ. ಶಿವಯೋಗಪ್ಪ, ಕಿರುವಾಡಿ ಸೋಮಣ್ಣ, ಸಿದ್ದೇಶ್, ಬಿ.ಜಿ. ರಮೇಶ್, ಸಂದೀಪ್ ಅಣಬೇರು, ಪುಷ್ಪಾ ವಾಲಿ, ವಿನುತಾ ರವಿ, ದಾಕ್ಷಾಯಿಣಮ್ಮ, ರಜನಿ, ಶುಭಾ ಇದ್ದರು.
——————-
ಬಾಕ್ಸ್:

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮಾಯಕೊಂಡ ಕ್ಷೇತ್ರ ಒಂದರಲ್ಲೇ ೧೫-೨೦ ಜನ ಆಕಾಂಕ್ಷಿಗಳಿದ್ದು, ದಾವಣಗೆರೆ ಉತ್ತರ ಸೇರಿ ಇತರ ಕ್ಷೇತ್ರಗಳ ಆಕಾಂಕ್ಷಿಗಳು ಇನ್ನೂ ಅರ್ಜಿ ಸಲ್ಲಿಸಬೇಕಿದೆ. ದಾವಣಗೆರೆ ದಕ್ಷಿಣದಿಂದ ತಾವೊಬ್ಬರೇ ಅರ್ಜಿ ಹಾಕಿರುವುದಾಗಿ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

[t4b-ticker]

You May Also Like

More From Author

+ There are no comments

Add yours