230 ಸಹಕಾರ ಸಂಘಗಳು ರದ್ದು , ಯಾವ ತಾಲೂಕಲ್ಲಿ ಎಷ್ಟು .

 

 

 

 

ಚಿತ್ರದುರ್ಗ,ಮಾರ್ಚ್10:
2022ರ ಫೆಬ್ರವರಿ 28ಕ್ಕೆ ಇದ್ದಂತೆ ಜಿಲ್ಲೆಯಲ್ಲಿ ಒಟ್ಟು 230 ವಿವಿಧ ರೀತಿಯ ಸಹಕಾರ ಸಂಘಗಳು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಅಡಿಯಲ್ಲಿ ನೊಂದಣಿಗೊಂಡು ಸಂಘದ ಬೈಲಾ ರೀತ್ಯಾ ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿದ್ದರಿಂದ ಸಹಕಾರ ಸಂಘಗಳನ್ನು ಸಮಾಪನೆಗೊಳಿಸಲಾಗಿದೆ.
ಈ ಸಮಾಪನೆಗೊಂಡ ಸಹಕಾರ ಸಂಘಗಳನ್ನು ನೊಂದಣಿ ರದ್ದು ಮಾಡಲು ಕ್ರಮವಿಡಲಾಗುತ್ತಿದೆ. ಈ ಬಗ್ಗೆ ತಮ್ಮ ಆಕ್ಷೇಪಣೆಗಳೇನಾದರು ಇದ್ದಲ್ಲಿ ಸಕ್ಷಮ ನಿಂಬಂಧಕರಿಗೆ ದಾಖಲಾತಿಗಳೊಂದಿಗೆ ಪ್ರಕಟಣೆ ಹೊರಡಿಸಿ 15ದಿನಗಳ ಒಳಗಾಗಿ ಸಲ್ಲಿಸಲು ತಿಳಿಯಪಡಿಸಿದೆ.  ಚಿತ್ರದುರ್ಗ ತಾಲ್ಲೂಕಿನಲ್ಲಿ 68, ಚಳ್ಳಕೆರೆ ತಾಲ್ಲೂಕಿನಲ್ಲಿ 33, ಮೊಳಕಾಲ್ಮೂರು 10, ಹಿರಿಯೂರಿನಲ್ಲಿ 33, ಹೊಸದುರ್ಗದಲ್ಲಿ 52, ಹೊಳಲ್ಕೆರೆ 34 ಸಹಕಾರಿ ಸಂಘಗಳು ಸ್ಥಗಿತಗೊಂಡಿವೆ. ಸಮಾಪನೆಗೊಂಡ ಸಹಕಾರ ಸಂಘಗಳ ಪೂರ್ಣ ಮಾಹಿತಿಯನ್ನು ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ಸಹಕಾರ ಸಂಘಗಳ ಉಪ ನಿಬಂಧಕ ಆರ್.ಜೆ.ಕಾಂತರಾಜು ತಿಳಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours