21 ನೇ ಶತಮಾನ ಪೈಪೋಟಿಯ ಯುಗ, ಎಲ್ಲಾ ರಂಗಗಳಲ್ಲಿಯೂ ಸ್ಪರ್ಧೆಯಿದೆ:ಡಾ.ಶಿವಮೂರ್ತಿ ಶರಣರು

 

 

 

 

ಚಿತ್ರದುರ್ಗ: ಬಸವಣ್ಣ, ಪೈಗಂಬರ್ ಒಳಗೊಂಡಂತೆ ಎಲ್ಲಾ ದಾರ್ಶನಿಕರ ಬದುಕಿನಲ್ಲಿಯೂ ಸಂಘರ್ಷವಿತ್ತು. ಆದರೆ ಅದು ಅಭಿವೃದ್ದಿಪರವಾಗಿತ್ತು ಎಂದು ಮುರುಘಾಮಠದ ಡಾ.ಶಿವಮೂರ್ತಿ ಶರಣರು ಹೇಳಿದರು.

 

 

ಮುರುಘಾಮಠದ ವತಿಯಿಂದ ನಡೆಯುತ್ತಿರುವ ನಿತ್ಯ ಕಲ್ಯಾಣ ಕಾರ್ಯಕ್ರಮದಲ್ಲಿ ತರಕಾರಿ ಮಾರುಕಟ್ಟೆ ಸಮೀಪವಿರುವ ನಗರಸಭೆ ಮಾಜಿ ಅಧ್ಯಕ್ಷ ಮಹಮದ್ ಅಹಮದ್ ಪಾಷರವರ ನಿವಾಸದಲ್ಲಿ ಬುಧವಾರ ನಡೆದ ಸ್ಥಿತ ಪ್ರಜ್ಞೆ ಚಿಂತನ ವಿಷಯ ಕುರಿತು ಶರಣರು ಮಾತನಾಡಿದರು.
21 ನೇ ಶತಮಾನ ಪೈಪೋಟಿಯ ಯುಗ, ಎಲ್ಲಾ ರಂಗಗಳಲ್ಲಿಯೂ ಸ್ಪರ್ಧೆಯಿದೆ. ಕೆಲವೊಮ್ಮೆ ಪೈಪೋಟಿ ಆರೋಗ್ಯಕರವಾಗಿರುತ್ತೆ. ಮತ್ತೊಮ್ಮೆ ಅನಾರೋಗ್ಯಕರವಾಗಿರುತ್ತದೆ. ಪೈಪೋಟಿ ಅನಿವಾರ್ಯ ಎಲ್ಲರೂ ಸ್ಪರ್ಧೆಯನ್ನು ಎದುರಿಸಲೇಬೇಕು ಎಂದರು.
ದಾರ್ಶನಿಕರಿಗೂ ಸಿಟ್ಟು ಬರುತ್ತಿತ್ತು. ಹನ್ನೆರಡನೆ ಶತಮಾನದಲ್ಲಿ ಮಹಿಳೆಯರನ್ನು ಹೀನಾಯವಾಗಿ ಕಾಣಲಾಗುತ್ತಿತ್ತು. ಮಾನವರ ಮಾರಾಟವಾಗುತ್ತಿದ್ದುದನ್ನು ನಿಲ್ಲಿಸಿದ ಕೀರ್ತಿ ಪೈಗಂಬ ರ್‍ಗೆ ಸಲ್ಲಬೇಕು. ಅಸಮಾನತೆ, ಅಸ್ಪøಶ್ಯತೆ ವಿರುದ್ದ ಬಸವಣ್ಣನವರು ದೊಡ್ಡ ಆಂದೋಲನ, ಕ್ರಾಂತಿ ಮಾಡಿದರು. ದಾರ್ಶನಿಕರು ಸಾಮಾಜಿಕ ಕ್ಷೋಭೆ, ಅವಮಾನಗಳನ್ನು ಅನುಭವಿಸಿದರೂ ಸ್ಥಿತ ಪ್ರಜ್ಞೆಯನ್ನು ಎಲ್ಲಿಯೂ ಕಳೆದುಕೊಳ್ಳಲಿಲ್ಲ. ಶರೀರ, ಇಂದ್ರಿಯ, ಬುದ್ದಿ ಮೇಲೆ ಸಮತೋಲನ ಸಾಧಿಸುವುದೆ ಸ್ಥಿತ ಪ್ರಜ್ಞೆ. ಸಮತೋಲನ ಸಾಧಿಸುವವರ ಜೀವನದಲ್ಲಿ ವ್ಯತ್ಯಾಸಗಳಾಗುವುದಿಲ್ಲ. ಸಮತೋಲನ ಕಳೆದುಕೊಳ್ಳುವುದರಿಂದ ಅಪಾಯಕಾರಿ ಸಂದರ್ಭಗಳು ಎದುರಾಗುತ್ತವೆ ಎಂದು ತಿಳಿಸಿದರು.
ನೋವು-ನಲಿವು, ಹೊಗಳಿಕೆ-ತೆಗಳಿಕೆ ಎಲ್ಲರ ಜೀವನದಲ್ಲಿಯೂ ಸಾಮಾನ್ಯ. ಹೊಗಳಿಕೆ-ತೆಗಳಿಕೆಯನ್ನು ಸಮಾನವಾಗಿ ಸ್ವೀಕರಿಸುವವರು ಸ್ಥಿತ ಪ್ರಜ್ಞರಾಗಿರುತ್ತಾರೆ. ಮಾನ ಅವಮಾನಗಳ ನಡುವೆ ಯಾರು ಸ್ಥಿತ ಪ್ರಜ್ಞೆಯನ್ನು ಕಾಪಾಡಿಕೊಳ್ಳುತ್ತಾರೋ ಅವರುಗಳೆ ದಾರ್ಶನಿಕರಾಗುತ್ತಾರೆ ಎಂದು ಶರಣರು ನುಡಿದರು.
ನೌಬಾದ್ ಬೀದರ್‍ನ ಶರಣೆ ವಚನ ಸಂಸ್ಕøತಿ ತಾಯಿ ಸ್ಥಿತ ಪ್ರಜ್ಞೆ ವಿಷಯ ಕುರಿತು ಮಾತನಾಡುತ್ತ ಜೀವನದಲ್ಲಿ ಸಾಮಾನ್ಯ ಪ್ರಜ್ಞೆಯನ್ನು ಯಾರು ಅಳವಡಿಸಿಕೊಳ್ಳುತ್ತಾರೋ ಅಂತಹವರು ಸಂಸ್ಕಾರವಂತರಾಗುತ್ತಾರೆ. ಕೋಪ, ಕಾಮ, ಮೋಹ, ಮದ, ಅಸೂಯೆ ಇವುಗಳೆಲ್ಲಾ ಮನಸ್ಸಿನಲ್ಲಿ ತುಂಬಿಕೊಂಡರೆ ಪ್ರಜ್ಞಾವಂತರಾಗಲು ಸಾಧ್ಯವಿಲ್ಲ. ಇಸ್ಲಾಂ ಧರ್ಮದಲ್ಲೂ ಏಕತೆ ಉಪಾಸನೆಯಿದೆ. ಎಲ್ಲಾ ಧರ್ಮ ಗ್ರಂಥಗಳನ್ನು ಪಠಣ ಮಾಡಬೇಕು. ಏಸು, ಬುದ್ದ, ಬಸವ, ಪೈಗಂಬರ್ ಇವರುಗಳೆಲ್ಲಾ ಕ್ರಾಂತಿಕಾರರಾಗಿದ್ದರು ಎಂದು ಹೇಳಿದರು.
ಭರಮಸಾಗರದ ಬಾಪೂಜಿ ಪದವಿಪೂರ್ವ ಕಾಲೇಜು ಉಪನ್ಯಾಸಕಿ ಡಾ.ಎನ್.ಮಮತ ಮಾತನಾಡಿ ಎಲ್ಲಾ ಧರ್ಮಗ್ರಂಥಗಳು ಸ್ಥಿತ ಪ್ರಜ್ಞೆಯನ್ನು ಸಾರುತ್ತವೆ. ಸಿಲುಬೇಗೇರಿದ ಏಸುವಿನಲ್ಲಿ ತಾಳ್ಮೆಯಿತ್ತು. ಆಕ್ರೋಶ, ಆವೇಶ, ಕೋಪ, ಭಯ, ಸ್ಥಿತಪ್ರಜ್ಞೆಗೆ ವಿರೋಧವಾದುದು. ಯಹೂದಿಗಳು ಏಸುವನ್ನು ಕೊಲ್ಲಲು ಪ್ರಯತ್ನಿಸುತ್ತಾರೆ. ಆಗಲೂ ಏಸು ಸ್ಥಿತ ಪ್ರಜ್ಞೆಯನ್ನು ಕಳೆದುಕೊಳ್ಳಲಿಲ್ಲ. ತಾಳ್ಮೆ ಸ್ಥಿತಪ್ರಜ್ಞೆಗೆ ಅಸ್ತ್ರ. ಮತ್ತೊಬ್ಬರ ಹಸಿವಿನ ಪ್ರಜ್ಞೆಯನ್ನು ಯಾರು ಅರ್ಥಮಾಡಿಕೊಳ್ಳುತ್ತಾರೋ ಅವರೆ ಧರ್ಮಾತ್ಮರು ಎಂದು ಸ್ಥಿತ ಪ್ರಜ್ಞೆಯ ಮಹತ್ವ ತಿಳಿಸಿದರು.
ಕೋಪ, ಭಯ, ದ್ವೇಷ, ಅಸೂಯೆ ಎಲ್ಲಿರುತ್ತದೊ ಅಲ್ಲಿ ದುರಂತವಾಗುತ್ತದೆ. ಬುದ್ದನ ಚಿಂತನೆ ಇದಕ್ಕೆ ಪ್ರಸ್ತುತವಾಗಿದೆ. ಜೀವಮಾನವಿಡಿ ಸಾಧನೆ ಮಾಡಿದರೂ ಸ್ಥಿತಪ್ರಜ್ಞೆಗೆ ಕೊನೆಯಿಲ್ಲ. ಮುರುಘಾಮಠದ ಡಾ.ಶಿವಮೂರ್ತಿ ಶರಣರು ಜಾತಿಗೊಬ್ಬ ಗುರುಗಳನ್ನು ಮಾಡಿ ಸಾಕಷ್ಟು ಟೀಕೆ, ಸವಾಲುಗಳನ್ನು ಎದುರಿಸಿದರೂ ಸ್ಥಿತಪ್ರಜ್ಞೆಯನ್ನು ಕಳೆದುಕೊಳ್ಳಲಿಲ್ಲ. ರಾಜಕಾರಣಿಗಳ ಸುಳ್ಳು ಆಶ್ವಾಸನೆಗಳನ್ನು ಸಹಿಸಿಕೊಳ್ಳುವವರು ಒಂದು ರೀತಿಯಲ್ಲಿ ಸ್ಥಿತ ಪ್ರಜ್ಞರು ಎಂದರು.
ಮಹಮದ್ ಅಹಮದ್ ಪಾಷ ಚಿಂತನ ವಿಷಯದ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ಇವರುಗಳು ಮಾತನಾಡಿದರು. ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಇಕ್ಬಾಲ್ ಹುಸೇನ್(ಎಂ.ಸಿ.ಓ.ಬಾಬು) ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸದಸ್ಯ ಕೆ.ಅನ್ವರ್‍ಭಾಷ, ಕೃಷ್ಣಪ್ಪ, ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ ವೇದಿಕೆಯಲ್ಲಿದ್ದರು.

[t4b-ticker]

You May Also Like

More From Author

+ There are no comments

Add yours