21 ಕ್ಕೆ ಚಳ್ಳಕೆರೆಯಲ್ಲಿ 11 ಸಾವಿರ ಯೋಗಪಟುಗಳು ಭಾಗಿ: ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಚಳ್ಳಕೆರೆ:  ನಗರದಲ್ಲಿ ದಿನಾಂಕ 21 -6 -2022 ರಂದು ನಡೆಯಲಿರುವ  ವಿಶ್ವ ಯೋಗ ದಿನಾಚರಣೆ ಅಂಗವಾಗಿ 11000 ಯೋಗಪಟುಗಳೊಂದಿಗೆ  ಯೋಗ ದಿನಾಚರಣೆಯನ್ನು ಆಚರಿಸಲು ತಾಲೂಕಾಡಳಿತದಿಂದ ತೀರ್ಮಾನಿಸಲಾಗಿದೆ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ತಿಳಿಸಿದ್ದಾರೆ.

 

 

ನಗರದ ಸಮಸ್ತ ನಾಗರಿಕರು ಒಂದು ಬೃಹತ್ ಯೋಗ ಶಿಬಿರದಲ್ಲಿ ಪಾಲ್ಗೊಳ್ಳಬೇಕಾಗಿ ‌ ಈ ಕುರಿತಾದ ಪೂರ್ವಭಾವಿ ಯೋಗ ತರಬೇತಿ ಅಭ್ಯಾಸದ ಸಂದರ್ಭ ದಲ್ಲಿ ಮಾತನಾಡಿ  ಭಾರತೀಯ ಪರಂಪರೆಯಲ್ಲಿ ಯೋಗಕ್ಕೆ ವಿಶಿಷ್ಟವಾದ ಸ್ಥಾನವಿದೆ ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸ ಮುಂತಾದವರು ಯೋಗವನ್ನು ವಿಶ್ವಕ್ಕೆ ಪರಿಚಯಿಸಿ ತನ್ಮೂಲಕ ಯುವಕರು ದೈಹಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಬುನಾದಿ ಹಾಕಿ ಹೋಗಿದ್ದಾರೆ ಭಾರತೀಯ ಸಂಸ್ಕೃತಿಯ ಯೋಗ ಇಡೀ ವಿಶ್ವಕ್ಕೆ ಅನುಕರಣೀಯ ಚಿತ್ರದುರ್ಗ ಜಿಲ್ಲೆ ಯೋಗವನ್ನು ಕರ್ನಾಟಕ ಪರಿಚಯಿಸಿದವರು ಮಲ್ಲಾಡಿಹಳ್ಳಿಯ ಶ್ರೀಗಳು ಯೋಗದ ನೆಲೆ ನೀಡು ಚಿತ್ರದುರ್ಗ ಆದ್ದರಿಂದ ಚಳ್ಳಕೆರೆ ನಗರದಲ್ಲಿ ಇದೇ 21ರಂದು 11 ಸಾವಿರ ಯೋಗಪಟುಗಳು ವಿಶ್ವ ಯೋಗ ದಿನಾಚರಣೆಯನ್ನು ಆಚರಣೆ ಮಾಡುವ ಮೂಲಕ ಭಾರತೀಯ ಪರಂಪರೆಯನ್ನು ಎತ್ತಿ ಹಿಡಿಯಲಿದ್ದಾರೆ. ಸ್ಥಳೀಯ ಶಾಸಕರು ಅಧ್ಯಕ್ಷತೆ ವಹಿಸಲಿದ್ದು  ತಾಲೂಕಿನ ಎಲ್ಲಾ ಚುನಾಯಿತ ಪ್ರತಿನಿಧಿಗಳು , ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ರಕ್ಷಣಾ ವೇದಿಕೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಎಲ್ಲ ಕಾಲೇಜು ಪ್ರೌಢಶಾಲೆ ಪ್ರಾಂಶುಪಾಲರು ಮುಖ್ಯೋಪಾಧ್ಯಾಯರು ಗಳು ಶಿಕ್ಷಕರುಗಳು ಮತ್ತು ವಿದ್ಯಾರ್ಥಿಗಳು ಎಲ್ಲ ಇಲಾಖೆ ಅಧಿಕಾರಿ ನೌಕರರು ಇವತ್ತು ಬೃಹತ್ ವಿಶ್ವ ಯೋಗ ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ದರ್ಜೆ ಕಾಲೇಜಿನ ಪ್ರಾಂಶುಪಾಲ ನರಸಿಂಹಮೂರ್ತಿ ಸೇರಿದಂತೆ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು ಮತ್ತು ಮಕ್ಕಳು ಪೂರ್ವಭಾವಿ ತರಬೇತಿಯಲ್ಲಿ ಉಪಸ್ಥಿತರಿದ್ದರು

[t4b-ticker]

You May Also Like

More From Author

+ There are no comments

Add yours