ಹೊಳಲ್ಕೆರೆ ಪುರಸಭಾ ಕಾರ್ಯಾಲಯದಲ್ಲಿ 75ನೇ ಸ್ವಾತಂತ್ರ ದಿನದ ಅಮೃತ ಮಹೋತ್ಸವ ಆಚರಣೆ.

 

 

 

 

75ನೇ ಸ್ವಾತಂತ್ರ ದಿನದ ಅಮೃತ ಮಹೋತ್ಸವದಂದು ಹೊಳಲ್ಕೆರೆ ಪುರಸಭೆಯ ಪೌರಸೈನಿಕರ ಮನಮೋಹಕ ಪಥಸಂಚಲನ

ಹೊಳಲ್ಕೆರೆ ಪುರಸಭಾ ಕಾರ್ಯಾಲಯದಲ್ಲಿ 75ನೇ ಸ್ವಾತಂತ್ರ ದಿನದ ಅಮೃತ ಮಹೋತ್ಸವ ಆಚರಿಸಲಾಯಿತು.
*ಸಮವಸ್ತ್ರ ಹಾಗೂ ಸುರಕ್ಷಾ ಧಿರಿಸುಗಳನ್ನು ಧರಿಸಿದ ಪೌರಕಾರ್ಮಿಕರ ಪಥಸಂಚಲನ ಎಲ್ಲರ ಗಮನ ಸೆಳೆಯಿತು.*
*ಖಾಕಿ ಸಮವಸ್ತ್ರ ತೊಟ್ಟ ಈ ಪೌರಸೈನಿಕರ ಪಡೆ ಪೊಲೀಸ್ ಪಡೆಯಂತೆ ಕಂಗೊಳಿಸುತ್ತಿತ್ತು*

 

 

ಹೊಳಲ್ಕೆರೆ ಪುರಸಭೆ ಅಧ್ಯಕ್ಷರಾದ ಶ್ರೀ ಆರ್ ಅಶೋಕ್ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷರಾದ ಶ್ರೀ ಕೆ.ಸಿ. ರಮೇಶ್, ಮುಖ್ಯಾಧಿಕಾರಿ ಎ ವಾಸಿಂ, ಸದಸ್ಯರುಗಳಾದ ಶ್ರೀಮತಿ ನಾಗರತ್ನ.ಹೆಚ್.ಆರ್. ವೇದಮೂರ್ತಿ, ಶ್ರೀ ಪಿ.ಆರ್. ಮಲ್ಲಿಕಾರ್ಜುನ, ಶ್ರೀ ಡಿ.ಎಸ್. ವಿಜಯ, ಶ್ರೀ ಬಿ.ಎಸ್.ರುದ್ರಪ್ಪ, ಶ್ರೀ ವಿಜಯಸಿಂಹ ಖಾಟ್ರೋತ್.ಎಲ್, ಶ್ರೀಮತಿ ಮಮತ ಜಯಸಿಂಹ ಖಾಟ್ರೋತ್, ಶ್ರೀ ಪಿ.ಹೆಚ್.ಮುರುಗೇಶ, ಶ್ರೀಮತಿ ಶಬೀನ ಅಶ್ರಫ್ವುೊಲ್ಲಾ, ಶ್ರೀ ಸೈಯದ್ ಸಜೀಲ್, ಶ್ರೀ ಸೈಯದ್ ಮನ್ಸೂರ್, ಶ್ರೀಮತಿ ಪೂರ್ಣಿಮ ಬಸವರಾಜ್, ಶ್ರೀಮತಿ ಸುಧಾ ಬಸವರಾಜ್ , ಶ್ರೀಮತಿ ಸವಿತ ನರಸಿಂಹ ಖಾಟ್ರೋತ್, ಶ್ರೀಮತಿ ಬಿ. ವಸಂತ ಆರ್. ರಾಜಪ್ಪ ಹಾಗೂ ಪುರಸಭಾ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

*ಸ್ವಚ್ಛ ಸರ್ವೇಕ್ಷಣೆ 2020ರ ಪ್ರಶಸ್ತಿಗೆ ಹೊಳಲ್ಕೆರೆ ಪಟ್ಟಣ ಪಂಚಾಯಿತಿಯು ಭಾಜನವಾಗಿದ್ದು ಕೇಂದ್ರ ಸರ್ಕಾರದಿಂದ ಕಳುಹಿಸಲಾಗಿದ್ದ ಪ್ರಶಸ್ತಿ ಪತ್ರಗಳು ಹಾಗೂ ಮಹಾತ್ಮ ಗಾಂಧೀಜಿಯವರ ಪುತ್ಥಳಿಯನ್ನು ಶ್ರೀ ಎಂ ಚಂದ್ರಪ್ಪ, ಶಾಸಕರು, ಹೊಳಲ್ಕೆರೆ ಕ್ಷೇತ್ರ ರವರು ಶ್ರೀ ಎ ವಾಸಿಂ, ಮುಖ್ಯಾಧಿಕಾರಿ, ಪುರಸಭೆ, ಹೊಳಲ್ಕೆರೆ ಇವರಿಗೆ ಪ್ರಶಸ್ತಿ ಪ್ರಧಾನ ಮಾಡಿ, ಸನ್ಮಾನಿಸಿ ಜೊತೆಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿ ಗೌರವಿಸಿದರು. ಮುಂದಿನ ದಿನಗಳಲ್ಲೂ ಪ್ರತೀ ವರ್ಷ ಹೊಳಲ್ಕೆರೆ ಪುರಸಭೆಗೆ ಇಂತಹ ಪ್ರಶಸ್ತಿಗಳು ಬರಲಿ ಎಂದು ಅವರು ಈ ಸಂದರ್ಭದಲ್ಲಿ ಹಾರೈಸಿದರು. ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ವಿಜೇತ ಹೊಳಲ್ಕೆರೆ ಪುರಸಭಾ ಕಛೇರಿಯ ನೌಕರ ಶ್ರೀ ರವಿನಾಗ್ ತಾಳ್ಯ ಅವರ ಕನ್ನಡ ಸಾಹಿತ್ಯ ಅಭಿರುಚಿಯನ್ನು ಗುರುತಿಸಿ, ತಾಲ್ಲೂಕು ಆಡಳಿತ ವತಿಯಿಂದ ಸನ್ಮಾನಿಸಲಾಯಿತು*

[t4b-ticker]

You May Also Like

More From Author

+ There are no comments

Add yours