ಹುಮ್ನಬಾದ್ ತಾಲ್ಲೂಕಿನ ತಹಶಿಲ್ದಾರ್‌ರ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ ಜಿಲ್ಲಾ ಸರ್ಕಾರಿ ನೌಕರರ ಸಂಘದಿಂದ ಪ್ರತಿಭಟನೆ

 

 

 

 

ಚಿತ್ರದುರ್ಗ ಜ. ೨೯
ಬೀದರ್ ಜಿಲ್ಲೆಯ ಹುಮ್ನಬಾದ್ ತಾಲ್ಲೂಕಿನ ತಹಶಿಲ್ದಾರ್‌ರ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿರುವ ಸರ್ಕಾರಿ ನೌಕರರ ಸಂಘ ಹಲ್ಲೆ ಮಾಡಿದವರನ್ನು ಗಡಿಪಾರು ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದೆ.
ಚಿತ್ರದುರ್ಗ ನಗರದಲ್ಲಿ ಇಂದು ಪ್ರತಿಭಟನೆಯನ್ನು ನಡೆಸಿದ ಸರ್ಕಾರಿ ನೌಕರರು ಕಳೆದ ೨೮ ರಂದು ತಹಶೀಲ್ದಾರ್ ಪ್ರದೀಪ್ ಕುಮಾರ್ ಹೀರೇಮಠ್ ರವರ ಮೇಲೆ ದುಷ್ಕರ್ಮಿಗಳು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರ ಮೇಲೆ ಹಲ್ಲೆ ನಡೆಯುತ್ತಿರುವ ಇದೇ ಮೊದಲಲ್ಲ, ಇಂತಹ ಘಟನೆಗಳು ರಾಜ್ಯದಲ್ಲಿ ಹಲವಾರು ಭಾರಿ ನಡೆದಿದೆ. ಇಂತಹ ಘಟನೆಗಳಿಂದ ಗ್ರೂಪ್ ಎ ನೌಕರರಿಂದ ಗ್ರೂಪ್ ಡಿ ನೌಕರರವರೆಗೂ ಸರ್ಕಾರಿ ನೌಕಕರು ನಿರ್ಭಿತಿಯಿಂದ ಕಚೇರಿಗಳಲ್ಲಿ ಕೆಲಸ ಮಾಡುವುದು ಕಷ್ಠವಾಗಿದೆ ಎಂದು ಜಿಲ್ಲಾಧ್ಯಕ್ಷ ಮಂಜುನಾಥ್ ಹೇಳಿದರು.
ತಹಶೀಲ್ದಾರ್ ರವರ ಮೇಲೆ ಹಲ್ಲೆ ಮಾಡಿದವರನ್ನು ಕಾನೂನು ಕ್ರಮಕ್ಕೆ ಒಳಪಡಿಸಿ, ಮುಂದೆ ಇಂತಹ ದುಷ್ಕರ್ಮಿಗಳ ಮೇಲೆ ಕಠಿಣ ಕಾನೂನು ರೂಪಿಸಿ ಹಲ್ಲೇ ಮಾಡುವಂತಹ ವ್ಯಕ್ತಿಗಳನ್ನು ಆ ಪ್ರದೇಶದಿಂದ ಗಡಿಪಾರು ಮಾಡುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದು, ಸಾರ್ವಜನಿಕರ ಸೇವೆಯನ್ನು ಸಲ್ಲಿಸುತ್ತಿರುವ ಸರ್ಕಾರಿ ನೌಕಕರು ಯಾವುದೇ ಆತಂಕವಿಲ್ಲದೆ ನೆಮ್ಮದಿಯಿಂದ ಕಛೇರಿಗಳಲ್ಲಿ ಕೆಲಸ ಮಾಡುವಂತ ವಾತಾವರಣವನ್ನು ನಿರ್ಮಾಣವಾಗಬೇಕೆಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಪ್ರದೀಪ್ ಕುಮಾರ್, ರಾಜ್ಯ ಪರಿಷತ್ ಸದಸ್ಯ ತಿಮ್ಮಾರೆಡ್ಡಿ ಹಾಗೂ ಖಜಾಂಚಿ ವಿರೇಶ್ ಸೇರಿದಂತೆ ಸರ್ಕಾರಿ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
[t4b-ticker]

You May Also Like

More From Author

+ There are no comments

Add yours