ಹಾಕ್ಕೊ ಗುರು ಮಾಸ್ಕ್ ಸುಮ್ನೆ ಯಾಕೆ ರಿಸ್ಕು” ವಿಶೇಷ ಕಾರ್ಯಕ್ರಮ: ಟಿಹೆಚ್ಓ ಗಿರೀಶ್ ಚಾಲನೆ

 

 

 

 

ಚಿತ್ರದುರ್ಗ,ಫೆಬ್ರವರಿ11:
ಜಿಲ್ಲಾ ಪಂಚಾಯತ್ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ನಗರದ ಬುದ್ಧನಗರದ ಆರೋಗ್ಯ ಕೇಂದ್ರದಲ್ಲಿ ಮಾಸ್ಕ್ ಅಪ್ ಮತ್ತು ಜಂತುಹುಳು ನಿವಾರಣ ಜಾಗೃತಿ ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಕೋವಿಡ್ ನಿಯಂತ್ರಣದಲ್ಲಿ ಮಾಸ್ಕ್ ಧಾರಣೆಯ ಮಹತ್ವವನ್ನು ತಿಳಿಸಿದರು.
ಸಾಮಾಜಿಕ ವರ್ತನೆ ಬದಲಾವಣೆ ಸಂಯೋಜಕರಾದ ಸುನಿಲ್ ಮಾತನಾಡಿ ಕೋವಿಡ್ ನಿಯಂತ್ರಣದಲ್ಲಿ ಅನುಸರಿಸಬೇಕಾದ ಪಂಚಸೂತ್ರಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಮಜಹರ್ ಉಲ್ಲಾ ಮಾತನಾಡಿ, ಕೋವಿಡ್ ನಿಯಂತ್ರಣದಲ್ಲಿ ಹೆಲ್ತ್ ವಾರಿಯರ್ಸ್ ನಿರ್ವಹಿಸಿದ ಸಮಯ ಪ್ರಜ್ಞೆಯ ಸೇವೆ ಈ ದಿನ ಚಿತ್ರದುರ್ಗ ಜಿಲ್ಲೆಯನ್ನು ಕೋವಿಡ್ ಹೆಚ್ಚು ಬಾಧಿಸದಂತೆ ಕಾಪಾಡಿದೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಈ ಮಾಸ್ಕ್ ಅಪ್ ಕಾರ್ಯಕ್ರಮಗಳನ್ನು ಆಯೋಜಿಸಲು ಸಹಕರಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಎಲ್ಲಾ ಹಲ್ತ್ ವಾರಿಯರ್ಸ್‍ಗಳಿಗೆ ಮಾಸ್ಕ್ ವಿತರಿಸುವುದರ ಮೂಲಕ “ಹಾಕ್ಕೋ ಗುರು ಮಾಸ್ಕ್, ಸುಮ್ನೇ ಯಾಕೆ ರಿಸ್ಕು”  ಎನ್ನುವ ಘೋಷಣೆಯನ್ನು ಕೂಗಿಸಲಾಯಿತು
ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಹಿರಿಯ ಆರೋಗ್ಯ ಸುರಕ್ಷತಾ ಅಧಿಕಾರಿಗಳಾದ ಶ್ರೀ ಧರ್, ಪರ್ವಿನ್, ಉμÁ, ಶ್ರೀ ನಿವಾಸ್ ಮಳಲಿ, ಆಶಾ ಬೋದಕರಾದ ಪದ್ಮಜಾ, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

 

 

[t4b-ticker]

You May Also Like

More From Author

+ There are no comments

Add yours