ಶ್ರದ್ಧೆ ಭಕ್ತಿಯಿಂದ ಜರುಗಿದ ಆಂಜನೇಯಸ್ವಾಮಿ ಪವಾಡ

 

 

 

 

ಚಿತ್ರದುರ್ಗ: ತಾಲೂಕಿನ  ಇಂಗಳದಾಳ್ ಗ್ರಾಮದಲ್ಲಿ ಆಂಜನೇಯ ಸ್ವಾಮಿ ಪವಾಡ ಭಾನುವಾರ ಶ್ರದ್ಧೆ ಭಕ್ತಿಯಿಂದ ನೇರವೇರಿತು.

 

 

ಬೆಳಗ್ಗೆ ಬನ್ನಿಮರದ ಬಳಿ ದಾಸಪ್ಪನು ಆಂಜನೇಯ ಅವಾತರದಲ್ಲಿ ಪವಾಡ ನಡೆಸಿ ಜನರ ಕಡೆ ನೋಡಿಕೊಂಡು 3 ಸುತ್ತು ಹಾಕುತ್ತಾರೆ. ತಕ್ಷಣ ಜನರು ಕೈ ಮುಗಿದು ಧನ್ಯತಾಭಾವ ಮೆರೆಯುತ್ತಾರೆ. ಪವಾಡ ಬಳಿಕ ದಾಸಪ್ಪ ಜ್ಞಾನ ತಪ್ಪುತ್ತಾರೆ. ನಂತರ ದಾಸಪ್ಪರನ್ನು ಮುಳ್ಳಿನ ಪಲ್ಲಕ್ಕಿಯಲ್ಲಿ  ಆಂಜನೇಯ ಸ್ವಾಮಿಯನ್ನು ಹೂವಿನ ಪಲಕ್ಕಿಯಲ್ಲಿ ಯುವಕರು ಹೊತ್ತುಕೊಂಡು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾರೆ. ನಂತರ ದೇವಸ್ಥಾನ ಬಳಿ  ಬಂದಾಗ ದಾಸಪ್ಪನಿಗೆ ಎಚ್ಚರವಾಗುತ್ತದೆ.
ಇಂಗಳದಾಳ್ ಗ್ರಾಮದ ಪರವಾಗಿ ದಾಸಪ್ಪನಿಗೆ ತುಂಬು ಉಡುಗೊರೆ ನೀಡುವ ಮೂಲಕ ಗೌರವಿಸುತ್ತಾರೆ. ದೇವರು ಸಮೇತನಾಗಿ ದೊಡ್ಡಸಿದ್ದವ್ವನಹಳ್ಳಿ ಪತನಾ ಗುಡಿವರೆಗೆ  ದೇವರನ್ನು ಹೊತ್ತು ದೊಡ್ಡಸಿದ್ದವ್ವನಹಳ್ಳಿ ಗ್ರಾಮಸ್ಥರಿಗೆ ಒಪ್ಪಿಸುವ ಮೂಲಕ ಇಂಗಳದಾಳ ಜಾತ್ರೆ ಮುಕ್ತಾಯವಾಗಿ ದೊಡ್ಡಸಿದ್ದವ್ವನಹಳ್ಳಿ ಜಾತ್ರೆ ಪ್ರಾರಂಭವಾಗುತ್ತದೆ.
ಇದಕ್ಕೂ ಮೊದಲು ಬೆಳಗ್ಗೆ  11-45 ದೇವರು ಆಗಮನವಾಯಿತು.  ಇಂಗಳದಾಳ ಗ್ರಾಮದ ಹತ್ತಾರು ಯುವಕರು ಶ್ರೀ ಮಾರಿಕಾಂಭ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಬೆಳಗ್ಗೆ 8-30 ಕ್ಕೆ ಗುಡ್ಡಕ್ಕೆ ತೆರಳುತ್ತಾರೆ.  ಯುವಕರು ಕೆಂಪು ಬಣ್ಣದ ಪ್ಯಾಂಟ್ ಧರಿಸಿ , ಬರೀ ಮೈ, ಬರೀ ಕಾಲಲ್ಲಿ ಜೋಗಿಮಟ್ಟಿ ಅರಣ್ಯಕ್ಕೆ ತೆರಳಿ ಆಂಜನೇಯ ಸ್ವಾಮಿ ಜಾತ್ರೆಯ ಚಾಲನೆ ನೀಡಲು ಬೇಕಾದಂತ ದೂಪದ ಮರವನ್ನು ಕೇವಲ ಒಂದು ಚಾಕುವಿನಿಂದ ಕೈಯಲ್ಲಿ  ಮಣ್ಣುನ್ನು ತೆಗೆದು ಬೇರು ಸಮೇತವಾಗಿ ಯುವಕರು ಮರ ಹೊತ್ತು ತರುತ್ತಾರೆ. ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ತಾಳ ಮೇಳದಿಂದ ಸಂಭ್ರಮದಿಂದ ಬರ ಮಾಡಿಕೊಂಡು ಮರವನ್ನು ಪವಾಡ ಆಗುವ ಸ್ಥಳಕ್ಕೆ ಇಟ್ಟು ಮರ ತರಲು ಅರಣ್ಯಕ್ಕೆ ತೆರಳಿದ್ದ ಯುವಕರು ಉಪವಾಸ ಬಿಡುವ ಮೂಲಕ ಜಾತ್ರೆ ಆರಂಭವಾಗುತ್ತದೆ.
ಇಂಗಳದಾಳ್ ಸುತ್ತಮುತ್ತಲಿನ ಹಳ್ಳಿಯ ಸಾವಿರಾರು  ಜನರು ಆಂಜನೇಯ ಸ್ವಾಮಿ ಪವಾಡಕ್ಕೆ ಆಗಮಿಸುತ್ತಾರೆ. ಇವರಿಗೆ ಊರಿನ ಭಕ್ತಾದಿಗಳು ಪಾನಕ , ಕೊಸಂಬರಿ ವಿತರಿಸುತ್ತಾರೆ.ಇಂಗಳದಾಳ್ ಗ್ರಾಮದ ಮಾರಿಕಾಂಭ ಸೇವಾ ಸಮಿತಿಯ ಸದಸ್ಯರು , ಗ್ರಾಮಸ್ಥರು ಜಾತ್ರೆಯ ಸಂಪೂರ್ಣ ಜವಾಬ್ದಾರಿ ವಹಿಸಿ  ಸಕಲ ಕಾರ್ಯ ನಡೆಸಿಕೊಟ್ಟರು.
[t4b-ticker]

You May Also Like

More From Author

+ There are no comments

Add yours