ಶಿಕ್ಷಕರ ಆಗುವವರು ನಿರಂತರ ಅಭ್ಯಾಸದಲ್ಲಿ ತೊಡಗಿಕೊಳ್ಳಬೇಕು:ಡಯಟ್ ಪ್ರಾಂಶುಪಾಲ ಪ್ರಸಾದ್

 

 

 

 

ಚಳಕೆರೆ-24 ಶಿಕ್ಷಕರ ಆಗುವವರು ನಿರಂತರ ಅಭ್ಯಾಸದಲ್ಲಿ ತೊಡಗಿಕೊಳ್ಳುವುದರಿಂದ ಮಕ್ಕಳಿಗೆ ಪರಿಪೂರ್ಣವಾದ ಬೋಧನೆ ನೀಡುವಲ್ಲಿ ಯಶಸ್ವಿಯಾಗುವರು ಎಂದು ಪದನಿಮಿತ್ತ ಉಪನಿರ್ದೇಶಕರು ಹಾಗೂ ಡಯಟ್
ಪ್ರಾಂಶುಪಾಲ ಪ್ರಸಾದ್ ತಿಳಿಸಿದರು.

 

 

ಅವರು, ನಗರದ ಎನ್. ಜಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ವಿದ್ಯಾರ್ಥಿ ಸಂಘ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಆಧುನಿಕ ಕಾಲಮಾನದ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಶಿಕ್ಷಕರು ಪರಿಪೂರ್ಣ ಶಿಕ್ಷಣದೊಂದಿಗೆ ತರಗತಿಗೆ ಹೋಗಬೇಕಾಗುತ್ತದೆ. ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಶಿಕ್ಷಕ ನಿರಂತರವಾಗಿ ಅಭ್ಯಾಸ ಮಾಡುವುದು ಅಗತ್ಯ ಎಂದರು.
ಆಡಳಿತಾಧಿಕಾರಿ ಡಿ.ಆರ್. ಪ್ರಮೀಳಾ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ನಮ್ಮ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಉತ್ತಮವಾಗಿ ಶಿಕ್ಷಣ ಕಲಿತು ವಿಶ್ವವಿದ್ಯಾನಿಲಯಕ್ಕೆ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆಯುವ ಮೂಲಕ ಶಿಕ್ಷಣ ಸಂಸ್ಥೆಯ ಹೆಸರನ್ನು ಬೆಳೆಸಿದ್ದಾರೆ. ಮುಂದಿನ ದಿನಗಳಲ್ಲೂ ಸಹ ಇದೆ ರೀತಿಯಾದ ಫಲಿತಾಂಶ ಕೊಡಲು ಕಾಲೇಜಿನ ಎಲ್ಲಾ ಉಪನ್ಯಾಸಕ ವರ್ಗ ಶ್ರಮಿಸಲಿದೆ ಎಂದು ತಿಳಿಸಿದರು.
ಪ್ರಾಂಶುಪಾಲ ಕೆ. ಟಿಪ್ಪು ಉಪನ್ಯಾಸಕರಾದ ರಾಘವೇಂದ್ರ ನಾಯಕ, ರವಿಕುಮಾರ್, ದೊರೆಸ್ವಾಮಿ, ತಿಪ್ಪಾರೆಡ್ಡಿ, ರೂಪ, ಶಿವಕುಮಾರ್, ವಾಣಿ ಮುಂತಾದವರು ಉಪಸ್ಥಿತರಿದ್ದರು

[t4b-ticker]

You May Also Like

More From Author

+ There are no comments

Add yours