ಶಾಸಕರ ಮತ್ತು ತಹಶೀಲ್ದರ್ ಜಂಟಿ ಸಂಧಾನಕ್ಕೆ ರೈತಸಂಘದ ಪ್ರತಿಭಟನೆ ವಾಪಸ್.

 

 

 

 

ಚಳ್ಳಕೆರೆ: ಮೊಳಕಾಲ್ಮುರು ಮತ್ತು ಚಳ್ಳಕೆರೆ ಜನರ  ಸೇವೆ ಪ್ರತಿಯೊಬ್ಬರು  ತಮ್ಮ ವೃತ್ತಿ ಬದುಕಿನಲ್ಲಿ ಒಂದು ಬಾರಿ ಎರಡು  ತಾಲ್ಲೂಕಿನಲ್ಲಿ ಕೆಲಸ ಮಾಡುವುದು ಅತ್ಯಂತ ಶ್ರೇಷ್ಠ ಅವರ ಸಮಸ್ಯೆ ಬಗೆಹರಿಸಲು ನಾವು ಸದಾ ಸಿದ್ದ ಎಂದು  ತಹಶೀಲ್ದರ್ ಎನ್.ರಘುಮೂರ್ತಿ ಹೇಳಿದರು.

ಚಳ್ಳಕೆರೆ ತಾಲೂಕಿನಲ್ಲಿ   ನಾಗಗೊಂಡನಹಳ್ಳಿ ಸಂಗಮೇಶ್ವರ ದೇವಸ್ಥಾನದ ಹತ್ತಿರ ರೈತ ಸಂಘದ ಅಧ್ಯಕ್ಷರಾದ ಶ್ರೀ ಭೂತಯ್ಯ ಇವರು ಸಂಘಟನೆಯಿಂದ ಹಮ್ಮಿಕೊಂಡಿದ್ದ ಮುಷ್ಕರ ದಲ್ಲಿ ಪಾಲ್ಗೊಂಡು ರೈತ ಸಂಘದ ಮನವಿಯನ್ನು ಸ್ವೀಕರಿಸಿ ಮಾತನಾಡಿದರು.

 

 

ಅತಿ ಹೆಚ್ಚು ಹಿಂದುಳಿದ ಜನಸಂಖ್ಯೆ ಇರುವ  ಬಡವರ ಅಮಾಯಕರ ಮುಗ್ಧರ ಹಾಗೂ ಅನಕ್ಷರಸ್ಥರ  ಬದುಕಿನಲ್ಲಿ ಅಭಿವೃದ್ಧಿ ಶಕೆ  ಆಗಬೇಕಿದೆ.  ರಾಜ್ಯದ ಹಿಂದುಳಿದ ತಾಲ್ಲೂಕುಗಳಾದ ಇಲ್ಲಿನ ಜನಜೀವನದ ಪರಿಸ್ಥಿತಿ ಅರಿವಾಗುವುದೆಂದು ತಿಳಿಸುತ್ತ . ಸಂಗಮೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಕುರಿತು ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಮಾಡಿ ಸರ್ಕಾರದಿಂದ ಅನುದಾನ ಪಡೆದು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಶಾಸಕರಾದ  ಟಿ.ರಘುಮೂರ್ತಿ ರವರು ಮಾತನಾಡಿ ಈ ಭಾಗದ ರೈತರ ಬಹುದಿನದ ಬೇಡಿಕೆಯಾದ ಬ್ಯಾರೇಜ್ ನಿರ್ಮಾಣ ತಾರ್ಕಿಕ ಅಂತ್ಯಕ್ಕೆ ಬಂದಿದ್ದು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳುವುದು. ಇನ್ನು ರಸ್ತೆಯ ಬೇಡಿಕೆಯನ್ನ ಪೂರೈಸಲಾಗುವುದು .
ಈಗಾಗಲೇ ವೇದಾವತಿ ನದಿಯಲ್ಲಿ ನಾಲ್ಕು ಬ್ಯಾರೇಜ್ಗಳನ್ನು ನಿರ್ಮಾಣ ಮಾಡಿರುವುದರಿಂದ ರೈತನ ಬದುಕು ಹಸನಾಗಿದೆ ಈವರೆಗೂ ಮುನ್ನೂರ ಎಪ್ಪತ್ತು ಹೆಕ್ಟೇರು ಇದ್ದಂತಹ ಅಡಿಕೆ ಬೆಳೆಯ ವಿಸ್ತೀರ್ಣ ಹದಿನಾಲ್ಕು ಸಾವಿರ ಹೆಕ್ಟೇರು ಗಳಿಗೆ ವಿಸ್ತರಣೆಯಾಗಿದ್ದು ಅಭಿವೃದ್ಧಿಯಲ್ಲಿ ಯಾವುದೇ ರಾಜಕೀಯ ಮಾಡದೆ ಬಡವರ ಮತ್ತು ರೈತರ ಏಳಿಗೆಗೆ ಶ್ರಮಿಸಲಾಗುವುದು ಎಂದು ಶಾಸಕರು ತಿಳಿಸಿದರು.
ರೈತ ಸಂಘದ ಅಧ್ಯಕ್ಷರಾದ ಭೂತಯ್ಯ ರವರು ಮಾತನಾಡಿ ಶಾಸಕರು ತಾಲ್ಲೂಕಿನ ರೈತರ
ಮತ್ತು ಸಾರ್ವಜನಿಕರ ನಿರಂತರ ಸಂಪರ್ಕದಲ್ಲಿದ್ದು ಕಷ್ಟ-ಸುಖಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿದ್ದಾರೆ ಇಂತಹ ಶಾಸಕರನ್ನು ಕೊನೆಯವರೆಗೆ ನಾವು ಕೈಬಿಡುವುದಿಲ್ಲ ಎಂದು ಹೇಳಿದರು.
ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾ ರೈತ ಸಂಘದ ಮುಖಂಡರಾದ ಹೊರಕೇರಪ್ಪನವರು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು , ಗ್ರಾಮೀಣ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours