ವಿದ್ಯಾರ್ಥಿಗಳ ನಡೆ ಪ್ರಾಚೀನ ಸ್ಮಾರಕಗಳ ಕಡೆ ಕಾರ್ಯಕ್ರಮ ದುರ್ಗದ ಕೋಟೆಯಲ್ಲಿ ವಿದ್ಯಾರ್ಥಿಗಳ ನಡಿಗೆ

 

 

 

 

ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ವಿದ್ಯಾರ್ಥಿಗಳ ನಡೆ ಪ್ರಾಚೀನ ಸ್ಮಾರಕಗಳ ಕಡೆ ಕಾರ್ಯಕ್ರಮ
ದುರ್ಗದ ಕೋಟೆಯಲ್ಲಿ ವಿದ್ಯಾರ್ಥಿಗಳ ನಡಿಗೆ
*****
ಚಿತ್ರದುರ್ಗ, ಫೆಬ್ರವರಿ08:
ಐತಿಹಾಸಿಕ ಏಳುಸುತ್ತಿನ ಕೋಟೆಯ ಪ್ರಾಚೀನ ಸ್ಮಾರಕಗಳನ್ನು ಕಣ್ತುಂಬಿಕೊಳ್ಳುತ್ತ ದಾವಣಗೆರೆ ಚಾಣುಕ್ಯ ಪ್ರಥಮ ದರ್ಜೆ ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಕೋಟೆನಾಡಿನ ಪರಿಸರದಲ್ಲಿ ಹೆಜ್ಜೆ ಹಾಕಿದರು.
ಚಿತ್ರದುರ್ಗ ನಗರದ ಕೋಟೆ ಆವರಣದಲ್ಲಿ ಮಂಗಳವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ದಾವಣಗೆರೆ ಚಾಣುಕ್ಯ ಪ್ರಥಮ ದರ್ಜೆ ವಾಣಿಜ್ಯ ಮಹಾವಿದ್ಯಾಲಯದ ಆಶ್ರಯದಲ್ಲಿ “ಆಜಾದಿ ಕಾ ಅಮೃತ್ ಮಹೋತ್ಸವ್” ಅಂಗವಾಗಿ “ವಿದ್ಯಾರ್ಥಿಗಳ ನಡೆ ಪ್ರಾಚೀನ ಸ್ಮಾರಕಗಳ ಕಡೆ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕೋಟೆ ಆವರಣದಲ್ಲಿನ ಪ್ರಾಚೀನವಾದ ಸ್ಮಾರಕಗಳು, ದೇವಾಲಯಗಳು, ಗಮನ ಸೆಳೆಯುವ ಬುರುಜುಗಳು, ಬತೇರಿಗಳು ಸೇರಿದಂತೆ ಕಲ್ಲು, ಬಂಡೆಗಳ ಸ್ಮಾರಕಗಳ ಮಹತ್ವವನ್ನು ತಿಳಿದುಕೊಂಡರು.
ಇದಕ್ಕೂ ಮುನ್ನಾ ಜಿಲ್ಲಾ ವಾರ್ತಾಧಿಕಾರಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಧನಂಜಯ ಚಾಲನೆ ನೀಡಿ, ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75ನೇ ವರ್ಷಾಚರಣೆ ಆಚರಣೆ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮವನ್ನು 2021ರ ಮಾರ್ಚ್ 12 ರಿಂದ 2023ರ ಆಗಸ್ಟ್ 15 ರವರೆಗೆ ಆಚರಿಸಲು ತೀರ್ಮಾನಿಸಲಾಗಿದೆ. ಯುವ ಜನರಲ್ಲಿ ದೇಶಪ್ರೇಮ ಮೂಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇಂತಹ ಕಾರ್ಯಕ್ರಮಗಳಲ್ಲಿ ಯುವ ಜನರು ಸಕ್ರಿಯಯವಾಗಿ ಪಾಲ್ಗೊಳ್ಳಬೇಕು ಎಂದರು.
ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲೆಯಲ್ಲಿಯೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಐತಿಹಾಸಿಕ ಸ್ಥಳಗಳು, ಸ್ಮಾರಕಗಳನ್ನು ಇಂದಿನ ಯುವ ಪೀಳಿಗೆಯಿಂದ ಸಂರಕ್ಷಣೆ ಮಾಡುವ ಹಾಗೂ ಉಳಿಸುವ ಕೆಲಸವಾಗಬೇಕು ಎಂದರು.
ದೇಶದ ಇತಿಹಾಸವನ್ನು ಅರಿತು, ಯುವ ಜನಾಂಗ ದೇಶಾಭಿಮಾನ, ರಾಷ್ಟ್ರೀಯತೆ ಬೆಳೆಸಿಕೊಳ್ಳುವುದರ ಮೂಲಕ ದೇಶದ ಸಂಪನ್ಮೂಲವಾಗಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ದಾವಣಗೆರೆ ಚಾಣುಕ್ಯ ಪ್ರಥಮ ದರ್ಜೆ ವಾಣಿಜ್ಯ ಕಾಲೇಜಿನ ಪ್ರಾಂಶುಪಾಲರಾದ ಬಿ.ಆರ್.ಟಿ.ಸ್ವಾಮಿ ಹಾಗೂ ಕಾಲೇಜಿನ ಅಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.

 

 

[t4b-ticker]

You May Also Like

More From Author

+ There are no comments

Add yours