ಲಸಿಕೆ ಬೇಡ ಎಂದು ಮನೆ ಏರಿದ ಯುವಕ, ಹರ ಸಾಹಸ ಪಟ್ಟು ಲಸಿಕೆ ಹಾಕಿಸಿದ ತಹಶೀಲ್ದಾರ್ ಮತ್ತು ಆರೋಗ್ಯ ಸಿಬ್ಬಂದಿ

 

 

 

 

ನನಗೆ ಲಸಿಕೆ ಬೇಡವೆಂದು ಹಠಹಿಡಿದು ಮನೆ ಏರಿ ಕುಳಿತಿದ್ದ ಯುವಕನನ್ನು ತಹಶೀಲ್ದರ್ ಎನ್ .ರಘುಮೂರ್ತಿ ಹಾಗೂ ಆರೋಗ್ಯ ಅಧಿಕಾರಿಗಳು ಮನವೊಲಿಸಿ ಲಸಿಕೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ‌.

 

 

ತಾಲೂಕಿನ ನಾಯಕನಹಟ್ಟಿ ಹೋಬಳಿಯ ಎನ್ .ದೇವರಹಳ್ಳಿ ಗ್ರಾಮದಲ್ಲಿ ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಾಲೂಕು ಆಡಳಿತ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು .

ಈ ಕಾರ್ಯಕ್ರಮದಲ್ಲಿ ಒಂದು ಹಾಗೂ ಎರಡನೇ ಹಂತದ ಲಸಿಕೆ ಪಡೆಯದ ವ್ಯಕ್ತಿಗಳನ್ನು ಗುರುತಿಸಿ ಅಂತಹವರಿಗೆ ವ್ಯಾಕ್ಸಿನ್ ಹಾಕಲಾಗುತ್ತಿತ್ತು .ಈ ಸಂದರ್ಭದಲ್ಲಿ ಮಂಜುನಾಥ ಯುವಕ ಮೊದಲನೆ ಲಸಿಕೆ ಇರುವುದನ್ನು ತಿಳಿದುಕೊಂಡ ಅಧಿಕಾರಿಗಳು ಯುವಕನಿಗೆ ಲಸಿಕೆ ಹಾಕಲು ಹೋದಾಗ ಯುವಕ ನನಗೆ ಲಸಿಕೆ ಬೇಡ ಎಂದು ಹಠ ಹಿಡಿದು ಮನೆ ಏರಿ ಕುಳಿತಿದ್ದ. ನಂತರ ತಹಶೀಲ್ದಾರ್  ಹಾಗೂ ಆರೋಗ್ಯ ಅಧಿಕಾರಿಗಳು ಗ್ರಾಮ ಪಂಚಾಯತಿ ಸದಸ್ಯರು ಯುವಕನನ್ನು ಮನವೊಲಿಸಿ ಮನೆ ಮೇಲಿನಿಂದ ಕೆಳಗೆ ಇಳಿಸಿ ಲಸಿಕೆಯನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಆರೋಗ್ಯ ಸಿಬ್ಬಂದಿ ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours