ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದವರು ಮೊದಲನೇ ಸಾಲಿನಲ್ಲಿ ಲಸಿಕೆ ಪಡೆಯುತ್ತಿದ್ದಾರೆ:ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ ಜೂ. ೦೭
ಜಿಲ್ಲೆಯಲ್ಲಿ ಕೋವಿಡ್-೧೯ ಪ್ರಕರಣಗಳು ಕಡಿಮೆಯಾಗಲು ಎಲ್ಲರು ಸಹಕಾರ ನೀಡುವಂತೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ನಾಗರೀಕರಲ್ಲಿ ಮನವಿ ಮಾಡಿದ್ದಾರೆ.
ಚಿತ್ರದುರ್ಗ ನಗರದ ಜೆಸಿಆರ್ ಬಡಾವಣೆಯ ಸರ್ಕಾರಿ ಶಾಲೆಯ ಆವರಣದಲ್ಲಿ ಅಖಿಲ ಬಾರತ ವೀರಶೈವ ಸಮಾಜದವತಿಯಿಂದ ಹಮ್ಮಿಕೊಂಡಿದ್ದ ಲಸಿಕೆ ನೀಡುವ ಕಾರ್ಯುಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕೋವಿಡ್ ಸೋಂಕಿನಿಂದ ಮುಕ್ತಿ ಪಡೆಯುವ ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದ್ದವರು ಈಗ ಮೊದಲ ಸಾಲಿನಲ್ಲಿ ನಿಂತು ಲಸಿಕೆ ಪಡೆಯುತ್ತಿದ್ದಾರೆ. ಆದರೆ ಅಮಾಯಕರು ಸಾಯುತ್ತಿದ್ದಾರೆ ಎಂದು ವಿಷಾಧಿಸಿದರು.

 

 

ದೇಶದಲ್ಲಿ ಕೋವಿಡ್ ಲಸಿಕೆ ನೀಡಲು ಮುಂದಾದಾಗ ಅನೇಕರು ಲಸಿಕೆ ಕುರಿತು ಅಪಪ್ರಚಾರ ನಡೆಸಿದರು. ಲಸಿಕೆ ಪಡೆದಲ್ಲಿ ಹೆಣ್ಣುಮಕ್ಕಳಿಗೆ ಸಂತಾನ ಭಾಗ್ಯ ಆಗುವುದಿಲ್ಲ. ಗಂಡಸರಿಗೆ ನಪಂಸಕತ್ವ ಉಂಟಾಗುತ್ತದೆ ಎಂದು ವದಂತಿ ಹಬ್ಬಿಸಲಾಗಿತ್ತು. ಇದರಿಂದ ಗಾಬರಿಗೊಂಡ ದೇಶದ ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದರು. ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರು ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುತ್ತಿರುವುದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಏಕ ಕಾಲದಲ್ಲಿ ಹೆಚ್ಚು ಜನ ಲಸಿಕೆ ಪಡೆಯಲು ಬರುತ್ತಿರುವ ಕರಣ ಲಸಿಕೆ ನೀಡುವಲ್ಲಿ ಕೊಂಚ ವ್ಯತ್ಯಯ ಉಂಟಾಗುತ್ತಿದೆ. ಕೊರೋನಾ ಮೊದಲ ಅಲೆಯಲ್ಲಿ ಆಕ್ಸಿಜನ್ ಅಗತ್ಯ ಅಷ್ಟಾಗಿ ಕಂಡುಬರಲಿಲ್ಲ. ಈಗ ಸಾಕಷ್ಟು ಬೇಡಿಕೆ ಇದೆ. ಆದಾಗ್ಯೂ ಆಕ್ಸಿಜನ್ ಪೂರೈಸಲಾಗುತ್ತಿದೆ. ಆದರೆ ವಿರೋಧ ಪಕ್ಷಗಳು ಅನಗತ್ಯವಾಗಿ ಈ ಕುರಿತು ಟೀಕೆ ಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಲಸಿಕಾ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ. ನಗರದಲ್ಲಿ ಕೊರೋನಾ ವಾರಿಯರ‍್ಸ್ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದೆ ಮುಂದಿನ ದಿನಗಳಲ್ಲಿ ಕೊಳಗೇರಿ ಸೇರಿದಂತೆ ಬಡಜನರು ಇರುವ ಪ್ರದೇಶಗಳಲ್ಲಿ ಲಸಿಕೆ ನೀಡಲಾಗುವುದು. ಲಸಿಕೆ ಪಡೆದಲ್ಲಿ ಕೊರೋನಾ ಸೋಂಕಿನಿಂದ ರಕ್ಷಣೆ ಪಡೆಯಬಹುದು. ಹಾಗಾಗಿ ಪ್ರತಿಯೊಬ್ಬರೂ ಲಸಿಕೆ ಪಡೆದು ಉತ್ತಮ ಆರೋಗ್ಯ ಕಾಪಾಡಿ ಕೊಳ್ಳಬೇಕೆಂದು ಮನವಿ ಮಾಡಿದರು.
ಈಗಾಗಲೇ ನಗರದ ವಿವಿಧೆಡೆಗಳಲ್ಲಿ ಲಸಿಕೆಯನ್ನು ಹಾಕಲು ಪ್ರಾರಂಭ ಮಾಡಲಾಗಿದೆ ಮುಂದಿನ ದಿನದಲ್ಲಿ ವಿವಿಧ ಬಡಾವಣೆಗಳಲ್ಲಿಯೂ ಸದಹಾ ಲಸಿಕೆಯನ್ನು ಹಾಕಲಾಗುತ್ತದೆ ಯಾರು ಸಹಾ ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಲಾಗುವುದು ಎಂದ ಶಾಸಕರು ಯಾರಿಗಾದರೂ ಕರೋನಾ ಕಂಡು ಬಂದರೆ ಹೆದರುವ ಅಗತ್ಯ ಇಲ್ಲ ತಮಟಕಲ್ಲು ರಸ್ತೆಯಲ್ಲಿ ಇದಕ್ಕಾಗಿ ಉತ್ತಮವಾದ ಸೌಕರ್ಯವನ್ನು ಮಾಡಲಾಗಿದೆ, ಅಲ್ಲಿ ಇರಿವುದರ ಮೂಲಕ ರೋಗವನ್ನು ದೂರಮಾಡಬಹುದಾಗಿದೆ ಎಂದು ಜನತೆಯಲ್ಲಿ ಧೈರ್ಯವನ್ನು ತಿಪ್ಪಾರೆಡ್ಡಿ ತುಂಬಿದರು.
ಕಾಯಕ್ರಮದಲ್ಲಿ ನಗರಾಭೀವೃದ್ದಿ ಪ್ರಾದಿಕಾರದ ಅಧ್ಯಕ್ಷರಾದ ಬದರಿನಾಥ್, ಸದಸ್ಯರಾದ ಶ್ರಣೀಕ್, ಡಾ ಗೀರೀಶ್ ಡಾ. ಕುಮಾರಸ್ವಾಮಿ ಸಮಾಜದ ಮುಖಂಡರಾದ ಕೆಇಬಿ ಷಣ್ಮುಖಪ್ಪ, ನಗರಸಭಾ ಸದಸ್ಯರಾದ ಶ್ರೀಮತಿ ಅನುರಾಧ ರವಿಕುಮಾರ್, ಶ್ರೀಮತಿ ರೋಹಿಣಿ ನವೀನ್, ಸುರೇಶ್, ರವಿಕುಮಾರ್, ವೇದಾ, ಮಹಡಿ ಶಿವಮೂರ್ತಿ,ರೋ.ಮಹೇಶ್, ದಿವಾಕರ, ಆನಂದ ಶಶಿಧರ್, ಸಿದ್ದಪ್ಪ ಗಂಗಾಧರ ಸೇರಿದಂತೆ ಇತರರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸುಮಾರು ೩೦೦ಕ್ಕೂ ಹೆಚ್ಚು ಜನರಿಗೆ ಲಸಿಕೆಯನ್ನು ಹಾಕಲಾಯಿತು.

[t4b-ticker]

You May Also Like

More From Author

+ There are no comments

Add yours