ರೈತರಿಗೆ ಬೆಳೆ ಸಮೀಕ್ಷೆ ಮೊಬೈಲ್ ಆಪ್ ಕುರಿತು ಮಾಹಿತಿ ನೀಡಿ, ಬೆಳೆ ಸಮೀಕ್ಷೆ ಮಾಡಿಸಿ: ಶಾಸಕ ಟಿ.ರಘುಮೂರ್ತಿ.

 

 

 

 

ಚಳ್ಳಕೆರೆ: ರೈತರಿಗೆ ಮೊಬೈಲ್ ಆಪ್ ನಲ್ಲಿ ಸಮೀಕ್ಷೆ ಮಾಡೋದು ತಿಳಿಯದೆ, ಬೆಳೆ ಸಮೀಕ್ಷೆ ಮಾಡೋದು ಕೈಬಿಟ್ಟರೆ ಅಧಿಕಾರಿಗಳೇ ಅಂತಹ ರೈತರಿಗೆ ಮೊಬೈಲ್ ಆಪ್ ಬಗ್ಗೆ ಮಾಹಿತಿ ನೀಡಿ, ಬೆಳೆ ಸಮೀಕ್ಷೆ ಮಾಡಿಸಬೇಕು ಎಂದು ಶಾಸಕ ಟಿ. ರಘುಮೂರ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಕೃಷಿ ಸಹಾಯಕ ನಿರ್ದೇಶಕರ ಕಚೇರಿ ಆವರಣದಲ್ಲಿ ರೈತರು ಬೆಳೆ ಸಮೀಕ್ಷೆ ಮೊಬೈಲ್ ಆಪ್ ಬಳಸುವಂತೆ ಪ್ರಚಾರ ಮಾಡುವ ವಾಹನಗಳಿಗೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ೨೦೨೦ ನೇ ಸಾಲಿನಿಂದಲೇ ರೈತರು ತಮ್ಮ ಮೊಬೈಲ್ ಗಳಲ್ಲಿ ತಮ್ಮ ಬೆಳೆ ಸಮೀಕ್ಷೆ ಮಾಡಿಕೊಳ್ಳುವ ಕಾರ್ಯಕ್ರಮವನ್ನು ಜಾರಿ ಮಾಡಿದೆ, ಆದರೆ ಇದರ ಬಗ್ಗೆ ಕೃಷಿ ಅಧಿಕಾರಿಗಳು ಮೊಬೈಲ್ ಆಪ್ ನಲ್ಲಿ ಬೆಳೆ ಸಮೀಕ್ಷೆ ಮಾಡುವ ಕುರಿತು ಸರಿಯಾಗಿ ಮಾಹಿತಿ ರೈತರಿಂದ ಬೆಳೆ ಸಮೀಕ್ಷೆ ಮಾಡಿಸಬೇಕು ಎಂದರು.

ತಾಲ್ಲೂಕಿನ ರೈತರು ಮೊಬೈಲ್ ಆಪ್ ಮೂಲಕ ಬೆಳೆ ಸಮೀಕ್ಷೆ ಮಾಡಿದ್ದಾರೆ, ಎಷ್ಟು ರೈತರು ಮಾಡಿಲ್ಲ ಎಂದು ಮಾಹಿತಿ ಪಡೆದುಕೊಂಡು ಎಲ್ಲರ ರೈತರ ಬೆಳೆ ಸಮೀಕ್ಷೆ ಮಾಡಬೇಕು ಎಂದು ಶಾಸಕ ಟಿ.ರಘುಮೂರ್ತಿ ಅವರು ಕೃಷಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದರು.
೨೦೨೦-೨೧ ನೇ ಸಾಲಿನ ಬೆಳೆ ವಿಮೆ ತಾಲ್ಲೂಕಿನ ರೈತರಿಗೆ ಬಂದಿಲ್ಲ, ಇದರ ಬಗ್ಗೆ ಕೃಷಿ ಆಯುಕ್ತರೊಂದಿಗೆ ಚರ್ಚೆ ಮಾಡಿದ್ದೇವೆ ಎಂದು ಹೇಳಿದ ಅವರು ೨೦೨೧-೨೨ ನೇ ಸಾಲಿನ ಬೆಳೆ ಸಮೀಕ್ಷೆ ಯಶಸ್ವಿಯಾಗಬೇಕು. ಕೆಲವು ರೈತರು ತಂತ್ರಜ್ಞಾನದ ಸಮಸ್ಯೆಯಿಂದ ಸಮೀಕ್ಷೆ ಮಾಡಿಕೊಂಡಿರುವುದಿಲ್ಲ. ಎಲ್ಲ ರೈತರ ಬೆಳೆ ಸಮೀಕ್ಷೆ ಮಾಡಿಸಿ, ಬೆಳೆ ಸಮೀಕ್ಷೆ ಯಶಸ್ವಿಗೊಳಿಸಬೇಕು. ಮೊಬೈಲ್ ಹ್ಯಾಪ್ ಮೂಲಕ ಬೆಳೆ ಸಮೀಕ್ಷೆ ಮಾಡುವ ಅಂತಹ ಯೋಜನೆ ಸರ್ಕಾರ ಜಾರಿಗೆ ತಂದಿದೆ, ಇದು ರೈತರಿರಗೆ ಪೂರಕವಾಗುವಂತಹ ಕಾರ್ಯಕ್ರಮವಾಗಬೇಕು ಎಂದು ಹೇಳಿದರು..

 

 

ತಾಲ್ಲೂಕಿನಲ್ಲಿ ಈರುಳ್ಳಿ ಬೆಳೆಗೆ ಕೊಳೆ ರೋಗ ಬಿದ್ದಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ, ಈ ರೋಗದ ಬಗ್ಗೆ ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ರೋಗದ ಬಗ್ಗೆ ಪರಿಶೀಲನೆ ಮಾಡಬೇಕು. ಕೊಳೆ ರೋಗ ಅತೋಟಿಗೆ ಬರಲು ಎನು ಮಾಡಬೇಕು ಎಂದು ರೈತರಿಗೆ ಸಲಹೆ ನೀಡಿ, ಕೊಳೆ ರೋಗದಿಂದ ಈರುಳ್ಳಿ ಬೆಳೆಯನ್ನು ಪಾರು ಮಾಡಬೇಕು ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಿಗೆ ಶಾಸಕರು ಸೂಚನೆ ನೀಡಿದರು.

ಸಹಾಯಕ ನಿರ್ದೇಶಕ ಆಶೋಕ್ ಕುಮಾರ ಮತಾನಾಡಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ಸಮೀಕ್ಷೆ ಕಾರ್ಯ ಆರಂಭವಾಗಿದ್ದು, ರೈತರು ಸ್ವಂತ ತಮ್ಮ ಜಮೀನಿನಲ್ಲಿ ಬೆಳೆ ಬೆಳೆಯ ಸಮೀಕ್ಷೆಯನ್ನು ತಮ್ಮ ಮೊಬೈಲ್ ನಲ್ಲಿ ಮಾಡಬಹುದು ಎಂದು ಹೇಳಿದರು.
ಮೊಬೈಲ್ ನಲ್ಲಿ ಸಮೀಕ್ಷೆ ಮಾಡೋದು ಹೀಗೆ: ಮುಂಗಾರು ರೈತರ ಬೆಳೆ ಸಮೀಕ್ಷೆ ೨೦೨೧-೨೨ ಎಂಬ ಹೆಸರಿನ ಮೊಬೈಲ್ ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು. ರೈತರ ಆಧಾರ್ ಕಾರ್ಡ್ನ ಕ್ಯೂ ಆರ್ ಕೋಡ್ ಅನ್ನು ಸ್ಕಾö್ಯನ್ ಮಾಡಿಕೊಂಡು ಆಧಾರ್ ವಿವರ ಮೊಬೈಲ್ ನಂಬರ್ ಅನ್ನು ನಮೂದಿಸಿ ಸಕ್ರೀಯಗೊಳಿಸಲು ಓಟಿಪಿ ನಮೂಸಿ, ಮೊಬೈಲ್ ಆಪ್ ನಲ್ಲಿ ಮೊದಲು ಮಾಸ್ಟರ್ ವಿವರಗಳನ್ನು ಆಪ್‌ಗೆ ಸೇರಿಸಿಕೊಳ್ಳಬೇಕು. ನಂತರ ತಮ್ಮ ಜಮೀನಿನ ಸರ್ವೇ ನಂಬರ್‌ಗಳನ್ನು ಆಪ್‌ಗೆ ಸೇರಿಸಿಕೊಳ್ಳಬೇಕು. ಮುಂದಿನ ಹಂತದಲ್ಲಿ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರಗಳನ್ನು ದಾಖಲಿಸಬೇಕು. ಈ ಹಂತದಲ್ಲಿ ರೈತರು ತಮ್ಮ ಜಮೀನಲ್ಲಿ ಪಾಳು ಬಿದ್ದಿರುವ ಪ್ರದೇಶದಲ್ಲಿ ಈಗಾಗಲೇ ಕಟಾವು ಆದ ಪ್ರದೇಶ, ಕೃಷಿಯೇತರ ಬಳಕೆಗೆ( ಕೊಟ್ಟಿಗೆ, ಕೃಷಿ ಹೊಂಡ, ಮನೆ ಇತರೆ) ಬಳಕೆಯಾದ ವಿವರವನ್ನು ಸಹ ದಾಖಲಿಸಬೇಕಾಗಿರುತ್ತದೆ. ರೈತರು ತಾವು ಬೆಳೆದ ಪ್ರತಿ ಬೆಳೆಯ ವಿಸ್ತೀರ್ಣ ಜೊತೆಗೆ ಪ್ರತಿ ಬೆಳೆಯ ೨ ಛಾಯ ಚಿತ್ರಗಳನ್ನು ತೆಗೆದು ಅಪ್ಲೋಡ್ ಮಾಡಬೇಕಾಗುತ್ತದೆ.

ಈ ವೇಳೆ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶ ಆರ್ .ವಿರುಪಾಕ್ಷಪ್ಪ, ರೈತಮುಖಂಡ ಕೆ.ಪಿ.ಭೂತಯ್ಯ, ನಗರಸಭೆ ಸದಸ್ಯ ಚಳ್ಳಕೆರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ಗೌಡ, ಮುಖಂಡರಾದ ಪ್ರಸನ್ನ ಹಾಗೂ ರೈತರು ಹಾಗೂ ಇತರೆ ಅಧಿಕಾರಿಗಳು ಇದ್ದರು….
=====================================

[t4b-ticker]

You May Also Like

More From Author

+ There are no comments

Add yours