ರೈತರಿಗೆ ಗುಡ್ ನ್ಯೂಸ್: ಬೆಳೆ ಹಾನಿ ಪರಿಹಾರ ಬಗ್ಗರ ಸಿಎಂ ಬೊಮ್ಮಾಯಿ ಹೇಳಿದ್ದೇನು.

 

 

 

 

 

ಬೆಂಗಳೂರು(ಫೆ.08): ಬೆಳೆ ಹಾನಿಗೆ ರಾಜ್ಯ ಸರ್ಕಾರ ಘೋಷಿಸಿದ್ದ ಹೆಚ್ಚುವರಿ ಪರಿಹಾರ ಹಂಚಿಕೆಯು ಮುಂದಿನ ಎರಡು – ಮೂರು ದಿನದಲ್ಲಿ ಆರಂಭವಾಗಲಿದೆ

ಸುಮಾರು  18.2 ಲಕ್ಷ ಅರ್ಹ ರೈತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಜಮಾ ಆಗಲಿದೆ. ಇದಕ್ಕಾಗಿ 1200 ಕೋಟಿ ರುಪಾಯಿಯನ್ನು ಸರ್ಕಾರ ಬಿಡುಗಡೆ ಮಾಡಲು ನಿರ್ಧರಿಸಿದೆ.

 

 

ಕಳೆದ ವರ್ಷ ಸುರಿದ ಭಾರಿ ಧಾರಾಕಾರ ಮಳೆಯಿಂದಾಗಿ 14 ಲಕ್ಷಕ್ಕೂ ಅಧಿಕ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಪೈರು ಹಾನಿಯಾಗಿ 18.2 ಲಕ್ಷ ರೈತರು ಸಂಕಷ್ಟ ಅನುಭವಿಸಿದ್ದರು. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ(NDRF)ಯ ನಿಯಮಗಳಂತೆ ಒಣ ಬೇಸಾಯ ಭೂಮಿಗೆ 1 ಹೆಕ್ಟೇರ್‌ಗೆ 6,800 ರು., ನೀರಾವರಿ ಜಮೀನಿಗೆ(Land) ಪ್ರತಿ ಹೆಕ್ಟೇರ್‌ಗೆ 13,500 ರು. ಮತ್ತು ಪ್ರತಿ ಹೆಕ್ಟೇರ್‌ ತೋಟಗಾರಿಕೆ ಬೆಳೆಗೆ 18 ಸಾವಿರ ರು. ಸೇರಿ ಒಟ್ಟಾರೆ 1252 ಕೋಟಿ ರು. ಪರಿಹಾರ ಪಾವತಿಸಲಾಗಿತ್ತು.

ಬೆಳೆ ಹಾನಿಗೆ(Crop Loss) ಎನ್‌ಡಿಆರ್‌ಎಫ್‌ನಡಿ ನೀಡುತ್ತಿರುವ ಹಣ ಯಾವುದಕ್ಕೂ ಸಾಕಾಗುವುದಿಲ್ಲ. ರಾಜ್ಯ ವಿಪತ್ತು ಪರಿಹಾರ ನಿಧಿ(SDRF)ಯಡಿ ಹೆಚ್ಚು ಪರಿಹಾರ ನೀಡಬೇಕು ಎಂಬ ಬೇಡಿಕೆ ರೈತರಿಂದ ವ್ಯಕ್ತವಾದಾಗ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ರಾಜ್ಯ ಸರ್ಕಾರ, ಸಮ್ಮತಿ ವ್ಯಕ್ತಪಡಿಸಿತ್ತು. ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ(Belagavi Assembly Session) ನಡೆಯುತ್ತಿದ್ದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಡಿ.21ರಂದು ಪರಿಹಾರ ಹೆಚ್ಚಳದ ಭರವಸೆ ನೀಡಿದ್ದರು.

 

[t4b-ticker]

You May Also Like

More From Author

+ There are no comments

Add yours