ರಾಜ್ಯ ಸರ್ಕಾರ ಖಾಸಗಿ ಸಂಘ-ಸಂಸ್ಥೆಗಳಿಗೆ ನೀಡಲು ಮುಂದಾಗಿರುವ ಕ್ರಮವನ್ನು ವಿರೋಧಿಸಿ ಪ್ರತಿಭಟನೆ

 

 

 

 

ಮೊಳಕಾಲ್ಮುರು:ರಾಜ್ಯದಲ್ಲಿನ ಗೋಮಾಳ ಹುಲ್ಲುಬನ್ನಿ ಸರ್ಕಾರಿ ಜಮೀನನ್ನು ರಾಜ್ಯ ಸರ್ಕಾರ ಖಾಸಗಿ ಸಂಘ-ಸಂಸ್ಥೆಗಳಿಗೆ ನೀಡಲು ಮುಂದಾಗಿರುವ ಕ್ರಮವನ್ನು ವಿರೋಧಿಸಿ ಬುಧವಾರದಂದು ಸಿಪಿಐ ಪಕ್ಷದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು..

ಸಿಪಿಐ ಕಾರ್ಯದರ್ಶಿ ಜಾಫರ್ ಶರೀಫ್ ಮಾತನಾಡಿ ರಾಜ್ಯದಲ್ಲಿ ಅಕ್ರಮ ಸಕ್ರಮ ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿರುವವರು ನಂಬರಲ್ಲಿ ಅರ್ಜಿ ಸಲ್ಲಿಸಿದವರಿಗೆ ರಾಜ್ಯಸರ್ಕಾರ ಜಮೀನು ಕಬಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು…

ಶ್ರೀಮಂತರ ಉದ್ಯಮಿಗಳ ಪರವಾಗಿ ಕಾನೂನುಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ ಮತ್ತು ಹುಲ್ಲುಬನ್ನಿ ಜಮೀನು ಖಾಸಗಿ ಸಂಸ್ಥೆಗಳಿಗೆ ಮಾರಲು ರಾಜ್ಯದಲ್ಲಿ ಸರ್ಕಾರಿ ಒಡೆತನದ ಭೂಮಿಯನ್ನು ಮಾರಾಟ ಮಾಡಲು ಸಂಪುಟ ಉಪಸಮಿತಿ ರಚನೆ ಮಾಡಿದ್ದು ಖಂಡನೀಯ ಇನ್ನು ಮುಂದೆ ಇದೊಂದು ರಿಯಲ್ ಎಸ್ಟೇಟ್ ಸಮಿತಿಯಾಗಿ ಕಾರ್ಯನಿರ್ವಹಿಸುವ ಅಪಾಯವಿದೆ ಪುರೋಹಿತರ ನಿರೀಕ್ಷೆಯನ್ನು ಮಣ್ಣುಪಾಲು ಮಾಡಲು ಸರ್ಕಾರ ಮುಂದಾಗಿದೆ ಎಂದು ಆಕ್ರೋಶ ಹೊರಹಾಕಿದರು…

 

 

2019ರಲ್ಲಿ ಗೋಮಾಳ ಹುಲ್ಲುಬನ್ನಿ ಜಮೀನಿಗೆ ಸಾವಿರ 1482 ಅರ್ಜಿಗಳು ಸಲ್ಲಿಕೆಯಾಗಿದ್ದು ಸಮಿತಿ ಸಭೆಯಲ್ಲಿ ಪ್ರಸ್ತುತ 482 ಅರ್ಜಿಗಳ ಸಾಗುವಳಿ ಪತ್ರ ಹಂಚಿಕೆಯು ಈ ಸಂದರ್ಭದಲ್ಲಿ ಸರ್ಕಾರಿ ಜಾಗವನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಲು ಹೊರಟಿರುವುದು ತಿನ್ನುವ ಅನ್ನಕ್ಕೆ ವಿಷ ಬೆರೆಸುವ ಕೆಲಸ ಮಾಡುತ್ತಿದೆ….

ಪರಿಶಿಷ್ಟ ಜಾತಿ ಪಂಗಡದ ರೈತರು ಈ ತುಂಡು ಭೂಮಿಯನ್ನು ನಂಬಿಕೊಂಡು ಬದುಕುತ್ತಿರುವುದನ್ನು ಸರ್ಕಾರ ನಾಶಮಾಡಲು ಹೊರಟಿದೆ ಕೂಡಲೇ ಅರ್ಜಿ ಸಲ್ಲಿಸಿದ ಎಲ್ಲರಿಗೂ ಸಾಗುವಳಿ ಪತ್ರ ನೀಡಬೇಕು ಎಂದು ಒತ್ತಾಯಿಸಿದರು..

ಸ್ಥಳದಲ್ಲಿ ಮುಖಂಡರಾದ ಡಿಪಿ ನಯ್ಯ ಪಾಲಯ್ಯ ಟಿಪಿ ಮಹಾದೇವಿ ಆಂಜನೇಯ ಓಬಯ್ಯ ಬೋರಯ್ಯ ಬಸವಯ್ಯ ಬಸವರಾಜ್ ಈಶ್ವರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು…

[t4b-ticker]

You May Also Like

More From Author

+ There are no comments

Add yours