ಮೂರನೇ ಅಲೆಗೂ ಮುನ್ನವೇ ಚಳ್ಳಕೆರೆ ಶಾಸಕರು ಮತ್ತು ತಹಶೀಲ್ದಾರ್ ಆಲರ್ಟ್ .

 

 

 

 

ಚಳ್ಳಕೆರೆ: ಕೋವಿಡ್ 3 ನೇ ಅಲೆಯನ್ನು ನಿಯಂತ್ರಿಸುವ ಸಂಬಂಧ ವ್ಯಾಕ್ಸಿನ್ ಡ್ರೈವ್ ನಡೆಸಲಾಯಿತು. ವ್ಯಾಕ್ಸಿನ್ ಡ್ರೈವನ್ನು ಶಾಸಕ ಟಿ.ರಘುಮೂರ್ತಿ ಮತ್ತು  ತಹಶೀಲ್ದಾರ್ ಎನ್. ರಘುಮೂರ್ತಿ ಅವರ   ನೇತೃತ್ವದಲ್ಲಿ ಚಳ್ಳಕೆರೆ ನಗರ/ಪರಶುರಾಂಪುರ/ನಾಯಕನಹಟ್ಟಿ ಮತ್ತು ತಳಕು ಗ್ರಾಮಗಳಲ್ಲಿ ಕಾರ್ಯಕ್ರಮ ನಡೆಸಲಾಯಿತು .

 

 

ತಳಕು ಗ್ರಾಮದಲ್ಲಿ ಮಾತನಾಡಿದ ಶಾಸಕರಾದ ಶ್ರೀ ಟಿ.ರಘುಮೂರ್ತಿ ರವರು ಮಾತನಾಡಿ ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ಜನರ ನಾಡಿಮಿಡಿತ ತಿಳಿದಿದ್ದು, ಈ ಬಗ್ಗೆ ಜನರನ್ನು ಮನವೊಲಿಸಿ ಕೋವಿಡ್ ಮುಕ್ತ ತಾಲ್ಲುಕಿಗೆ ಶ್ರಮಿಸಲು ಕರೆ ನೀಡಿದರು.

ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ ಜಿಲ್ಲಾಧಿಕಾರಿಗಳವರ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಮತ್ತು ಕ್ಷೇತ್ರದ ಶಾಸಕರ ಆಶಯದಂತೆ ಚಳ್ಳಕರೆ ತಾಲ್ಲೂಕನ್ನು ಶೇಕಡ 100 ರಷ್ಟು ವ್ಯಾಕ್ಸಿನ್ ಗೆ ಒಳಪಡಿಸುವ ಪ್ರತಿಜ್ಞೆ ಹಾಗೂ ಕಂಕಣವನ್ನು ತೊಡಬೇಕಾಗಿ ಸ್ಥಳೀಯ ಮಟ್ಟದ ಅಧಿಕಾರಿಗಳಾದ ಅಂಗನವಾಡಿ ಕಾರ್ಯಕರ್ತರು/ಶಿಕ್ಷಕರು ಹಾಗೂ ಆಶಾ ಕಾರ್ಯಕರ್ತರಿಗೆ ಕರೆ ನೀಡಿದರು. ಈ ಕುರಿತು ಅಮಾಯಕ ಮತ್ತು ಮುಗ್ಧ ಜನರಿಗೆ ವ್ಯಾಕ್ಸಿನ್ ಕುರಿತಾದ ಮತ್ತು ವ್ಯಾಕ್ಸಿನ್ ನಿಂದ ಉಂಟಾಗುವ ಅನುಕೂಲಗಳ ಬಗ್ಗೆ ಮನವರಿಕೆ ಮಾಡಿ ಜನರನ್ನು ಪ್ರೇರಪಿಸುವಂತೆ ಕರೆ ನೀಡಿದರು.  ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಶ್ರೀಮತಿ ಪ್ರೇಮಸುಧಾ, ಸಹಾಯಕ ಕೃಷಿ ನಿರ್ದೇಶಕರಾದ ಆಶೋಕ್, ನಗರಸಭೆ ಆಯುಕ್ತರಾದ ಪಿ.ಪಾಲಯ್ಯ ಹಾಗೂ ಸಿ.ಡಿ.ಪಿ.ಓ ಮೋಹನಕುಮಾರಿ ಮತ್ತು ಎಲ್ಲಾ ಇಲಾಖೆಯ ಅಧಿಕಾರಿ ನೌಕರರು ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours