ಮಲ್ಲೂರಹಳ್ಳಿ ಸ್ಮಶಾನ ಒತ್ತುವರಿ, ಶವ ಸಂಸ್ಕಾರಕ್ಕೆ ಅಡ್ಡಿ, ತಹಶೀಲ್ದಾರ್ ಎನ್.ರಘುಮೂರ್ತಿ ಮಧ್ಯ ಪ್ರವೇಶದಿಂದ ವಿವಾದಕ್ಕೆ‌ ತೆರೆ

 

 

 

 

ಚಳ್ಳಕೆರೆ:  ತಾಲ್ಲೂಕು ಮಲ್ಲೂರಹಳ್ಳಿ ಲಂಬಾಣಿಹಟ್ಟಿ ಗ್ರಾಮದ ಸ್ಮಶಾನದ ವಿವಾದಕ್ಕೆ ಇಂದು ತೆರೆ ಬಿದ್ದಿದ ಎಂದು ತಹಶೀಲ್ದಾರ್ ಎನ್. ರಘುಮೂರ್ತಿ ತಿಳಿಸಿದ್ದಾರೆ.

 

 

ಮಲ್ಲೂರ ಹಳ್ಳಿ ಗ್ರಾಮದ ಸರ್ವೆ ನಂಬರ್ 141 ರಲ್ಲಿ ನಾಲ್ಕು ಎಕರೆ 16 ಗುಂಟೆ ಸರ್ಕಾರಿ ಜಮೀನನ್ನು ಸಾರ್ವಜನಿಕ ಸ್ಮಶಾನಕ್ಕೆ ಕಳೆದ ಐದು ವರ್ಷದ ಹಿಂದೆ ಸರ್ಕಾರದಿಂದ ಮೀಸಲಿರಿಸಲಾಗಿತ್ತು. ಆದರೆ ಈ ಜಮೀನನ್ನು ಗ್ರಾಮಸ್ಥರು ಬಳಸದೇ ಇರುವುದರಿಂದ ಅಕ್ಕಪಕ್ಕದ ಇಡುವಳ್ಳಿ ಗಾರರು ಒತ್ತುವರಿ ಮಾಡಿಕೊಂಡು ಸ್ವಾಧೀನ ಹೊಂದಿದ್ದರು. ಮಲ್ಲೂರಹಳ್ಳಿ ಲಂಬಾಣಿಹಟ್ಟಿ ತಾಂಡಾದ ಶಾರದಾಬಾಯಿ ಇವರು ನಿನ್ನೆ ಮೃತಪಟ್ಟಿದ್ದು ಇವರ ಶವ ಸಂಸ್ಕಾರಕ್ಕೆ ಒತ್ತುವರಿದಾರರು ಅಡ್ಡಿಪಡಿಸದ್ದರು. ಇಂದು ಬೆಳಿಗ್ಗೆ ಈ ವಿಚಾರವನ್ನು  ಚಳ್ಳಕೆರೆ  ತಹಶೀಲ್ದಾರ್ ಅವರ ಗಮನಕ್ಕೆ ಸ್ಥಳೀಯ ಸಮಸ್ತೆ ಗಂಭೀರತೆ ಅರಿತು ಸ್ಥಳೀಯ ಕಂದಾಯಾಧಿಕಾರಿಗಳು ಸರ್ವೆಯರ್ ನಾಯಕನಹಟ್ಟಿ ಹೋಲಿಸುವ ನಿರೀಕ್ಷಕರಾದ ಶ್ರೀ ಶಿವರಾಜು ಇವರೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ತದನಂತರ ವಿವಾದಿತ ಸ್ಮಶಾನದ ಜಾಗಕ್ಕೆ ತೆರಳಿ ಸರ್ವೆಯರ್ ಅವರಿಂದ ಅಳತೆ ಮಾಡಿಸಿ ಅಂಗಡಿ ಗುರುತಿಸಿ ಮೃತಳ ಶವಸಂಸ್ಕಾರಕ್ಕೆ ಅನುವು ಮಾಡಿಕೊಟ್ಟರು. ಇದೇ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್   ಸರ್ಕಾರಿ ಸ್ವಾಮ್ಯದ ಸ್ಮಶಾನ ಕೆರೆ ಗೋಮಾಳ, ಕರಾಬು ,ಹಳ್ಳ ಮತ್ತು ಕೊಳ್ಳಗಳನ್ನು ಯಾರು ಸಹ ಒತ್ತುವರಿ ಮಾಡಕೂಡದೆಂದು ಒತ್ತುವರಿ ಮಾಡಿದ್ದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಗ್ರಾಮಸ್ಥರಿಗೆ ಎಚ್ಚರಿಕೆ ನೀಡುವುದರೊಂದಿಗೆ ಇಂತಹ ವಿವಾದಗಳಲ್ಲಿ ಯಾರು ಭಾಗಿಯಾದ ಕೂಡದೆಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಕಾಟ ನಾಯ್ಕ ಮತ್ತು ರಾಜನಾಯ್ಕ ನಾಯಕನಟಿ ಪೊಲೀಸ್ ಉಪನಿರೀಕ್ಷಕ ರಾದ ಶಿವರಾಜ ಸರ್ವೆಯರ್ ಆದ ಪ್ರಸನ್ನಕುಮಾರ್ ರಾಜಸ್ವ ನಿರೀಕ್ಷಕರು ಚೇತನ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು

[t4b-ticker]

You May Also Like

More From Author

+ There are no comments

Add yours