ಮಡಿವಾಳ ಗುರುಪೀಠದಲ್ಲಿ ಅಂಬೇಡ್ಕರ್ ಜಯಂತಿ

 

 

 

 

 

ಸಮಾನತೆಯ ಹಾಗೂ ಸಮಸಮಾಜದ ಹರಿಕಾರ ಡಾ.ಬಿ.ಆರ್.ಅಂಬೇಡ್ಕರ್  ಎಂದು ಬಸವ ಮಾಚಿದೇವ ಸ್ವಾಮೀಜಿ ಹೇಳಿದರು.

 

 

ನಗರದ ಹೊರವಲಯದಲ್ಲಿರುವ ಮಡಿವಾಳ ಗುರುಪೀಠದಲ್ಲಿ ಅಂಬೇಡ್ಕರ್ ಜಯಂತಿ ಉದ್ದೇಶಿಸಿ ಮಾತನಾಡಿದ ಅವರು,
“ಭಾರತ ಸ್ವತಂತ್ರವಾದರಷ್ಟೇ ಸಾಲದು; ಧಾರ್ಮಿಕ, ರಾಜಕೀಯ, ಸಾಮಾಜಿಕ, ಆರ್ಥಿಕ ವಿಷಯಗಳಲ್ಲಿ ಭರತಖಂಡದಲ್ಲಿ ಜನಿಸಿದವರೆಲ್ಲ ಸಮಾನ ಹಕ್ಕುಳ್ಳವರಾಗಬೇಕು” ಎಂಬ ದೃಢಸಂಕಲ್ಪದಿಂದ ಕುರುಡನಿಗೆ ಕಣ್ಣಿನಂತೆ ಮೂಕನಿಗೆ ದನಿಯಂತೆ ಅಬಲರಿಗೆ ಪ್ರಬಲ ಅಸ್ತ್ರದಂತೆ ಶಕ್ತಿಯಾದವರು ಭಾರತರತ್ನ ಡಾ.ಬಿ.ಆರ್ ಅಂಬೇಡ್ಕರ್ ರವರು.

ತಮ್ಮ ಅದ್ಭುತ ಪರಿಪೂರ್ಣ ಜ್ಞಾನ ಸಂಸ್ಕಾರ ವೀವೇಕದಿಂದ ತಮ್ಮ ಕಾಲಮಾನವನ್ನು ಮೆಟ್ಟಿನಿಂತು ಗೋಪುರೋಪಮವಾಗಿ ಬೆಳೆದುನಿಂತ ಮಹಾಮಾನವರಲ್ಲಿ ಒಬ್ಬರು ರಾಷ್ಟ್ರೀಯತಾವಾದಿಯಾಗಿ, ಕಾನೂನು ತಜ್ಞರಿಂದ, ರಾಜಕೀಯ ನೇತಾರರಾಗಿ, ಕ್ರಿಯಾಶೀಲ ಸಾಮಾಜಿಕ ಕಾರ್ಯಕರ್ತರಾಗಿ, ಶ್ರೇಷ್ಠ ಇತಿಹಾಸಕಾರರಾಗಿ, ಮಹಾದಾರ್ಶನಿಕರಾಗಿ, ಅಪ್ರತಿಮ ಚಿಂತಕರಾಗಿ, ಮಾನವಶಾಸ್ತ್ರಜ್ಞರಾಗಿ, ಖ್ಯಾತ ಅರ್ಥಶಾಸ್ತ್ರಜ್ಞರಾಗಿ, ಸಮೃದ್ಧ ಬರಹಗಾರರಾಗಿ, ಕ್ರಾಂತಿಕಾರಿಯಾಗಿ, ಅಸಾಮಾನ್ಯ ವಾಕ್ಪಟುವಾಗಿ, ಭಾರತೀಯ ಸಂವಿಧಾನದ ಪ್ರಮುಖ ಶಿಲ್ಪಿಯ ಆಧುನಿಕ ಭಾರತ ಬಹುಮುಖ ಪ್ರತಿಭೆಯಾಗಿ ಸರ್ವೋತ್ತಮರಲ್ಲಿ ಸರ್ವೋತ್ಕೃಷ್ಟರು ಬಾಬಾಸಾಹೇಬ್ ಅಂಬೇಡ್ಕರ್ ಆಗಿದ್ದಾರೆ.

ನೊಂದವರ ಪ್ರತಿನಿಧಿಯಾಗಿ ನೊಂದವರಿಗೆ ನಲಿವಿನ ಭವಿಷ್ಯವನ್ನು ಹುಡುಕುತ್ತ……
ಬಡತನವನ್ನು ಸಹಿಸಬಹುದು. ಆದರೆ, ಸ್ವಾಭಿಮಾನವನ್ನೇ ಕೆಣಕುವ ಅಸ್ಪೃಶ್ಯತಾ ಪದ್ಧತಿಯನ್ನು ಸಹಿಸಲಾಗದು.
ಶೋಷಿತ ವರ್ಗಗಳಲ್ಲಿ ಅರಿವು ಹಾಗೂ ಆತ್ಮವಿಶ್ವಾಸ ಮೂಡಿಸಲು ವಿದ್ಯೆ ಹಾಗೂ ಸ್ವಾವಲಂಬನೆಯ ಅಗತ್ಯೆತೆಯನ್ನು ಪ್ರತಿಪಾದಿಸುತ್ತ
ಗಾಳಿ ಬೆಳಕು ನೀರು ಅನ್ನಕ್ಕೆ ಜಾತಿ ಇಲ್ಲ. ಅಂತೆಯೇ, ಪ್ರತಿಭೆಗೂ ಜಾತಿ ಇಲ್ಲ. ಸಾಮಾಜಿಕ ತಾರತಮ್ಯ ನಿವಾರಣೆಗೆ ಶಿಕ್ಷಣವೇ ಉತ್ತರ ಎಂಬುದು ಡಾ. ಅಂಬೇಡ್ಕರ್‌ ಅವರ ವಾದವಾಗಿತ್ತು ಎಂದು ತಿಳಿಸಿದರು.

[t4b-ticker]

You May Also Like

More From Author

+ There are no comments

Add yours