ಮಕ್ಕಳ ಆರೋಗ್ಯದತ್ತ ಚಿತ್ತ ಹರಿಸಿ ಡಾ .ನಾಗರಾಜ್

 

 

 

 

 

 

 

ಹಿರಿಯೂರು:   ವಾಯುಮಾಲಿನ್ಯ ಹವಾಮಾನ ವೈಪರೀತ್ಯ ಸರಿಯಾದ ಕ್ರಮವಲ್ಲ ಆಹಾರ ಶೈಲಿಯಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತಿದ್ದು ಇದರ ಬಗ್ಗೆ ಪೋಷಕರು ಎಚ್ಚರ ವಹಿಸುವಂತೆ ವೈದ್ಯಾಧಿಕಾರಿ ಡಾ.ನಾಗರಾಜ್ ಹೇಳಿದರು.
ಅವರು ಗುರುವಾರ ಆದಿವಾಲ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಪಿಸಿಬಿ ಲಸಿಕಾ ಅಭಿಯಾನ ಜಾಗೃತಿ ಸಭೆಯಲ್ಲಿ ಮಾತನಾಡಿದರು
ಚಳಿಗಾಲದಲ್ಲಿ ಅತಿಹೆಚ್ಚಿನ ಮುತುವರ್ಜಿ ಮಕ್ಕಳ ಮೇಲೆ ವಹಿಸಬೇಕು, ಶೀತ ಜ್ವರ ಕೆಮ್ಮು ಕೀವಿಕೆರೆತ ರೋಗಗಳು ಬಾದಿಸುವುದು ಹೆಚ್ಚು ಹುಟ್ಟಿನ ಮಕ್ಕಳಿಂದ ಹದಿನಾರು ವರ್ಷದ ವರೆಗೂ ಸರ್ಕಾರ ವಿವಿಧ ಹಂತಗಳಲ್ಲಿ ರೋಗ ನಿರೋಧಕ ಶಕ್ತಿಯುಳ್ಳ ಚುಚ್ಚುಮದ್ದುಗಳನ್ನ ಉಚಿತವಾಗಿ ಎಲ್ಲಾ ಮಕ್ಕಳಿಗೂ ನೀಡುತ್ತಿದೆ ಅದರಂತೆ ವರ್ಷದೊಳಗಿನ ಮಕ್ಕಳಿಗೆ ಪಿಸಿಬಿ ಎಂಬ ನಿಮೋನಿಯ ಕಾಯಿಲೆಯಿಂದ ರಕ್ಷಿಸಬಲ್ಲ ಚುಚ್ಚುಮದ್ದನ್ನ ಪ್ರಸ್ತುತ ಸಾಲಿನಿಂದ ಚುಚ್ಚುಮದ್ದು ನೀಡಲು ಸರ್ಕಾರ ವ್ಯವಸ್ಥೆ ಮಾಡಿದೆ. ಇದರ ಪ್ರಯೋಜನ ಪಡೆಯಲು ತಾಯಂದಿರು ತಮ್ಮ ಮಕ್ಕಳ ಆರೋಗ್ಯಯುತ ಸ್ವಾಸ್ಥ್ಯಕ್ಕಾಗಿ ಚುಚ್ಚುಮದ್ದುಗಳನ್ನು ಹಾಕಿಸುವುದು ಒಳಿತು ಎಂದರು .
ಲಸಿಕಾ ಅಭಿಯಾನದ ಮುಖ್ಯಸ್ಥೆ ಡಾ .ಸಂಧ್ಯಾ
ಮಾತನಾಡಿ ಮಾರಕ ಕಾಯಿಲೆಗಳು ಮಕ್ಕಳ ಮೇಲೆ ಗಾಢವಾದ ಪರಿಣಾನ ಬೀರಿ ಜೀವ ಹಾನಿಯ ಸಾಕಷ್ಟು ಪ್ರಕರಣಗಳು ವರದಿಯಾಗಿದೆ ಅಸಡ್ಡೆ ನಿರ್ಲಕ್ಷ ತೋರದೆ ಎಲ್ಲ ಮಕ್ಕಳು ಲಸಿಕೆ ಹಾಕಿಸಿಕೊಳ್ಳ ಬೇಕು ಎಂದರು
ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್. ರಘುನಾಯ್ಕ ಮಾತನಾಡಿ ಶುಚಿತ್ವ ಆರೋಗ್ಯಯುತ ಕ್ರಮಗಳ ಮೂಲಕ ವೈದ್ಯರು ಆರೋಗ್ಯ ಸಹಾಯಕಿಯರು ಆಶಾ ಕಾರ್ಯಕರ್ತರ ಬಳಿ ಮಾಹಿತಿ ಗಳನ್ನ ಸಮಾಲೋಚಿಸಿ ಮಕ್ಕಳ ಸುರಕ್ಷತೆಗೆ ತಾಯಿಂದಿರು ಅತಿ ಹೆಚ್ಚು ಗಮನ ಹರಿಸಬೇಕು ಎಂದರು‌
ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರಶೇಖರ್, ಸಾಕಮ್ಮ ಕಾರ್ಯದರ್ಶಿ ನಾಗೇಂದ್ರಪ್ಪ, ಕರವಸುಲಿಗಾರ ಫೈರೋಜ್ ,ಆರೋಗ್ಯ ನಿರೀಕ್ಷಕ ಯಶೋಧರ ಆರೋಗ್ಯ ಕಾರ್ಯಕರ್ತೆ ಮಂಜುಳ ,ಆಶಾಕಾರ್ಯಕರ್ತರು ಇನ್ನೂ ಮುಂತಾದವರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours