ಪ್ರಧಾನಮಂತ್ರಿ ಆವಾಸ್ ಯೋಜನೆ: ವಂತಿಕೆ ಹಣ ಪಾವತಿಗೆ ಸೂಚನೆ

 

 

 

 

ಚಿತ್ರದುರ್ಗ,ಜನವರಿ25:
ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ)-2022ರ ಸರ್ವರಿಗೂ ಸೂರು (ಎ.ಹೆಚ್.ಪಿ) ಉಪ ಘಟಕದಡಿ ಕೆ.ಎಂ.ಕೊಟ್ಟಿಗೆ ರಿ.ಸ.ನಂ:531ರಲ್ಲಿ ಲಭ್ಯವಿರುವ 8 ಎಕರೆ ಜಮೀನಿನಲ್ಲಿ  ಜಿ+2 ಮಾದರಿಯ (ಬಹುಮಹಡಿ) 624 ಮನೆಗಳನ್ನು ನಿರ್ಮಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುಮೋದನೆಯಾಗಿದ್ದು, ನಗರ ಆಶ್ರಯ ಸಮಿತಿ ಸಭೆಯಲ್ಲಿ ಆಯ್ಕೆಯಾದ ಫಲಾನುಭವಿಗಳು ವಂತಿಕೆ ಮೊತ್ತ ರೂ.63 ಸಾವಿರಗಳನ್ನು ಪಾವತಿಸಬೇಕು ಎಂದು ಹಿರಿಯೂರು ನಗರಸಭೆ ಪೌರಾಯುಕ್ತ ಡಿ.ಉಮೇಶ್ ತಿಳಿಸಿದ್ದಾರೆ.
ಮೊದಲ ಹಂತವಾಗಿ ರೂ.10 ಸಾವಿರ ರೂಪಾಯಿಗಳನ್ನು ಹಿರಿಯೂರು ನಗರಸಭೆ ಪೌರಾಯುಕ್ತರ ಹೆಸರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ ತೆರೆಯಲಾಗಿರುವ ಇSಅಖಔW ಖಾತೆಗೆ ಹಣ ಪಾವತಿಸಲು ಸೂಚಿಸಲಾಗಿದೆ.
ಈ ಯೋಜನೆಯಲ್ಲಿ ಒಂದು ಮನೆಯ ನಿರ್ಮಾಣಕ್ಕೆ ತಗಲುವ ಒಟ್ಟು ವೆಚ್ಚ ರೂ.6.30 ಲಕ್ಷಗಳಾಗಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗದ ಜನಾಂಗಕ್ಕೆ ಕೇಂದ್ರ ಸರ್ಕಾರದಿಂದ ರೂ.1.50ಲಕ್ಷ ಹಾಗೂ ರಾಜ್ಯ ಸರ್ಕಾರದಿಂದ ರೂ.2.00 ಲಕ್ಷ, ಫಲಾನುಭವಿ ವಂತಿಕೆ 63 ಸಾವಿರ ಹಾಗೂ ಬ್ಯಾಂಕ್ ಸಾಲ ರೂ.2.17 ಲಕ್ಷ ಒಟ್ಟು ರೂ.6.30 ಲಕ್ಷ ಮತ್ತು ಇತರೆ ಮತ್ತು ಅಲ್ಪಸಂಖ್ಯಾತರಿಗೆ ಕೇಂದ್ರ ಸರ್ಕಾರದಿಂದ ರೂ.1.50 ಲಕ್ಷ ಹಾಗೂ ರಾಜ್ಯ ಸರ್ಕಾರದಿಂದ ರೂ.1.20 ಲಕ್ಷ, ಫಲಾನುಭವಿ ವಂತಿಕೆ 63 ಸಾವಿರ  ಹಾಗೂ ಬ್ಯಾಂಕ್ ಲೋನ್ 2.97 ಲಕ್ಷ ಒಟ್ಟು ರೂ.6.30 ಲಕ್ಷ ನೀಡಲಾಗುತ್ತಿದೆ.
ಮೂಲಭೂತ ಸೌಕರ್ಯಗಳಿಗೆ ರಸ್ತೆ, ಚರಂಡಿ, ವಿದ್ಯುತ್ ಮತ್ತು ಇತರೆ ಸಂಬಂಧಿಸಿದಂತೆ ಸುಮಾರು 450 ಲಕ್ಷಗಳಷ್ಟು ಅನುದಾನದ ಅವಶ್ಯಕತೆ ಇದ್ದು, ವಿಶೇಷ ಅನುದಾನ ಲಭಿಸದೇ ಇದ್ದ ಪಕ್ಷದಲ್ಲಿ ಫಲಾನುಭವಿಗಳು ಬ್ಯಾಂಕ್ ಸಾಲದ ಮೂಲಕ ಈ ಹಣವನ್ನು ಭರಿಸಬೇಕಾಗಿರುತ್ತದೆ. ಪ್ರತಿ ಫಲಾನುಭವಿ ಸುಮಾರು ರೂ.85 ಸಾವಿರ ಭರಿಸಬೇಕಾಗುತ್ತದೆ.
ಹಿರಿಯೂರು ನಗರಸಭೆ ಕಚೇರಿಯಲ್ಲಿ ಜನವರಿ 28 ರಿಂದ ಫೆಬ್ರವರಿ 27 ರವರೆಗೆ ಹಣ ಪಾವತಿಸಲು ಬ್ಯಾಂಕ್ ಚಲನ್‍ಗಳನ್ನು ಪಡೆಯಬಹುದಾಗಿರುತ್ತದೆ.
ಫೆಬ್ರವರಿ 27 ರಂದು ಸಂಜೆ 5.30ರೊಳಗೆ ಫಲಾನುಭವಿಗಳು ವಂತಿಕೆ ಹಣ ಪಾವತಿಸಿ, ಹಣ ಪಾವತಿಸಿದ ಚೆಲನ್‍ಗಳ ಜೆರಾಕ್ಸ್ ಪ್ರತಿಯನ್ನು ನಗರಸಭೆಗೆ ಸಲ್ಲಿಸುವುದು. ನಿಗಧಿಪಡಿಸಿದ ದಿನಾಂಕದೊಳಗೆ ವಂತಿಕೆ ಹಣ ಪಾವತಿಸದೇ ಇರುವ ಫಲಾನುಭವಿಗಳನ್ನು ಅನರ್ಹರೆಂದು ಪರಿಗಣಿಸಿ ಬೇರೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಫಲಾನುಭವಿಗಳ ಪಟ್ಟಿಯನ್ನು ನಗರಸಭಾ ಕಚೇರಿಯ ನಾಮಫಲಕದಲ್ಲಿ ಬಿತ್ತರಿಸಲಾಗುವುದು ಎಂದು ಹಿರಿಯೂರು ನಗರಸಭೆ ಪೌರಾಯುಕ್ತ ಡಿ.ಉಮೇಶ್ ತಿಳಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours