ಪುನೀತ್ ರಾಜಕುಮಾರ್ ಎಲೆಮರೆಯ ಕಾಯಿಯಂತೆ ಸಹಾಯ ಹಸ್ತ ಚಾಚಿದರು: ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

 

 

 

 

ಸಜ್ಜನ, ಸಭ್ಯಸ್ತ, ಸೌಜ್ಯನವಂತ, ಸಹೃದಯಿ, ಸಹಕಾರಿ, ಪರೋಪಕಾರಿ, ಸಂಕಷ್ಟಹರ, ವಿದ್ಯಾರ್ಥಿ ಪ್ರೇಮಿ, ಅಬಲರ ಧೀಶಕ್ತಿ, ಯುವಕರಿಗೆ ಐಕಾನ್ ಯುವರತ್ನ, ದೊಡ್ಡಮನೆ ಸುಪುತ್ರ ಪುನೀತ್ ರಾಜಕುಮಾರ್  ದೊಡ್ಡಗುಣ ಇರುವುದಕ್ಕೆ ದೊಡ್ಡವ ಆಗಿದ್ದಾರೆಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

 

 

 

ಮಠದಹಟ್ಟಿ ಗ್ರಾಮಪಂಚಾಯ್ತಿ ಯುವಕರು ಹಮ್ಮಿಕೊಂಡಿದ್ದ ಪುನೀತ್ ರಾಜಕುಮಾರ್ ಅವರ ಶ್ರದ್ಧಾಂಜಲಿ ಸಭೆಯ ಸಾನಿಧ್ಯವಹಿಸಿ ಮಾತನಾಡಿದ ಅವರು ಪುನೀತ್ ರಾಜಕುಮಾರ್ ಎಲೆಮರೆಯ ಕಾಯಿಯಂತೆ ಅನಾಥಶ್ರಮ, ವೃದ್ದಾಶ್ರಮ, ವಿದ್ಯಾರ್ಥಿಗಳಿಗೆ ಆಶ್ರಯದಾತರಾಗಿದ್ದಾರು. ನಟನೆಯ ಅಷ್ಟೇ ಅಲ್ಲದೆ ಸಮಾಜಸೇವೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಹಾಗೂ ವರ್ತನೆಯಲ್ಲಿ ನಾಡನ್ನು ವಶೀಕರಣ ಮಾಡಿಕೊಂಡಿದ್ದ ಅತ್ಯುತ್ತಮ ಯುವರತ್ನ ಆಗಿದ್ದಾರೆ.

ಪುನೀತ್ ರಾಜಕುಮಾರ್ ಪಥದಲ್ಲಿ ಯುವಕರು ಸಾಗುತ್ತಿದ್ದಾರೆ. ಪುನೀತ್ ರಾಜಕುಮಾರ್ ರವರ ನೇತ್ರದಾನ ಪ್ರೇರಣೆಯೊಂದಿಗೆ ಯುವಕರು ನೇತ್ರದಾನಕ್ಕೆ ಮುಂದಾದರು.  ಗ್ರಾಮದ ಸುತ್ತೆಲ್ಲ ಮೇಣದಬತ್ತಿಯ ದೀಪದೊಂದಿಗೆ ಶಾಂತಿ ಮೆರವಣಿಗೆ ನಡೆಯಿತು. ತದನಂತರ ಅನ್ನ ಸಂತರ್ಪಣೆ ನಡೆಸಿದರು.

ಸಮಾರಂಭದಲ್ಲಿ ಯುವ ಮುಖಂಡರಾದ ಅಶೋಕ, ಮನೋಹರ, ಪ್ರದೀಪ್, ರಮೇಶ, ಶ್ರೀನಿವಾಸ, ರಾಕೇಶ, ರಾಜೇಶ್,ಸಂದೀಪ, ಮಂಜುನಾಥ, ತಿಪ್ಪೇಶ, ಕಿರಣಕುಮಾರ, ಅರುಣಕುಮಾರ ಇನ್ನಿತರರು ಉಪಸ್ಥಿತಿಯಿದ್ದರು.

[t4b-ticker]

You May Also Like

More From Author

+ There are no comments

Add yours