ನೀರು ಸಿಗದೆ ಇದ್ದ ಉದ್ಯೋಗವನ್ನು ಬಿಟ್ಟು ಊರು ಸೇರಿದ ವಿದ್ಯಾವಂತ ಯುವಕರ ಬದುಕು ಹಸನು ಮಾಡಿದ ಯಶೋಗಾದೆ.

 

 

 

 

ಚಳ್ಳಕೆರೆ ವೀರೇಶ್.
ಕೊರೋನಾ ಎಂಬ ಮಹಾಮಾರಿ ಹೊಡೆತಕ್ಕೆ ಅನ್ನ, ನೀರು ಸಿಗದೆ ಇದ್ದ ಉದ್ಯೋಗವನ್ನು ಬಿಟ್ಟು ಊರು ಸೇರಿದ ವಿದ್ಯಾವಂತ ಯುವಕರ ಬದುಕು ಹಸನು ಮಾಡಿದ ಯಶೋಗಾದೆ.

 

 


ಅದೇ ರೀತಿ ದೊಡ್ಡ ಉಳ್ಳಾರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಉಳ್ಳಾರ್ತಿ ಗ್ರಾಮದಲ್ಲಿ ನರೇಗಾ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕೈಗೊಂಡ ಸುಮಾರು 60 ಲಕ್ಷ ಮೌಲ್ಯದ ಗ್ರಾಮದ ಬೋರೇದೇವರ ದೇವಸ್ಥಾನದ ಸುತ್ತಲು ಕಾಂಟೂರ್ ಬಂಡಿಂಗ್ ನಿರ್ಮಾಣ ಕಾರ್ಯ ಅಚ್ಚುಕಟ್ಟಾಗಿ ಮೂಡಿಬಂದಿದೆಯಲ್ಲದೆ, ಸುತ್ತಮುತ್ತಲ ಸುಮಾರು ಬಡ ಕೂಲಿಕಾರ್ಮಿಕರಿಗೆ ಒಟ್ಟು 20 ಸಾವಿರ ಮಾನವ ದಿನಗಳನ್ನು ಗುರುತಿಸಿಕೊಳ್ಳುವ ಮೂಲಕ ಎಲ್ಲರಿಗೂ ಕೂಲಿ ಹಣ ಪಾವತಿಯಾಗುವಂತೆ ಮಾಡುವಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಯಶಸ್ವಿಯಾಗಿದೆ. ಗ್ರಾಮದ ಬೋರೇದೇವರ ದೇವಸ್ಥಾನದ ಸುತ್ತಮುತ್ತಲ ಗುಡ್ಡದ ಸುಮಾರು 12 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ಕಾಂಟೂರ್ ಬಂಡಿಂಗ್ ಕಾಮಗಾರಿ ಕೈಗೊಳ್ಳುವ ಮೂಲಕ ಹಲವಾರು ವಿವಿಧ ಜಾತಿಯ ಗಿಡಮರಗಳನ್ನು ಬೆಳೆಸುವುದಲ್ಲದೆ, ಯಾವುದೇ ಕಾರಣಕ್ಕೂ ನೀರಿಲ್ಲದೆ ಬತ್ತ ಬಾಡಿ ಹೋಗದಂತೆ ಚಾಣಾಕ್ಷತದಿಂದ ಕಾಮಗಾರಿಯನ್ನೂ ರೂಪಿಸಲಾಗಿದ್ದು, ಸದರಿ ಕಾಮಗಾರಿಯನ್ನು ವೀಕ್ಷಿಸಲು ಸುತ್ತಮುತ್ತಲ ಗ್ರಾಮಸ್ಥರು ಆಗಮಿಸಿ ನಮ್ಮ ಊರಿನಲ್ಲೇ ಇಂತಹ ಉತ್ತಮ ಬಂಡಿಂಗ್ ಕಾಮಗಾರಿ ಕೈಗೊಳ್ಳುವ ಮೂಲಕ ನೈಸರ್ಗಿಕ ಸಂಪತ್ತು ಮತ್ತು ಜಲ ಸಂಪತ್ತು ಸಂರಕ್ಷಿಸಲು ಕೈಗೊಂಡ ಕಾರ್ಯದ ಬಗ್ಗೆ ಎಲ್ಲರ ಮೆಚ್ಚುಗೆ ವ್ಯಕ್ತವಾಗಿದೆ.
ಗ್ರಾಮ ಪಂಚಾಯಿತಿಯ ಇಂಜಿನಿಯರ್ ಹಾಗೂ ತಾಂತ್ರಿಕ ಸಲಹೆಗಾರ ಆರ್.ಎನ್.ರಮೇಶ್, ಕೊರೋನಾ ಹಿನ್ನೆಲೆಯಲ್ಲಿ ಬೆಂಗಳೂರಿಗೆ ವಲಸೆ ಹೋಗಿ ಗ್ರಾಮಕ್ಕೆ ಹಿಂತಿರುಗಿದ ಗ್ರಾಮದ ಕೂಲಿಕಾರರಿಗೆ ಕಾಮಗಾರಿ ಒದಗಿಸುವ ನಿಟ್ಟಿನಲ್ಲಿ ಹಾಗೂ ಸುತ್ತಮುತ್ತಲ ಗ್ರಾಮದ ಜನರಿಗೂ ಸಹ ನರೇಗಾ ಯೋಜನೆಯಡಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಈ ಕಾಮಗಾರಿಯನ್ನು ಅನುಷ್ಠಾನಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಬೆಂಗಳೂರಿಗೆ ವಲಸೆ ಹೋಗಿದ್ದ ಗ್ರಾಮದ 20ಕ್ಕೂ ಹೆಚ್ಚು ಯುವಕರು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ನಂದಿನಿದೇವಿ ಮಾರ್ಗದರ್ಶನದಲ್ಲಿ ಇಂಜಿನಿಯರ್ ಆರ್.ಎನ್.ರಮೇಶ್‍ರವರ ಉದ್ದೇಶಿತ ಕಾಂಟೂರ್ ಬಂಡಿಂಗ್ ಕಾಮಗಾರಿ ಯೋಜನೆಯನ್ನು ಸಹಕಾರಗೊಳಿಸಲು ಪ್ರೇರಣಾ ಶಕ್ತರಾಗಿದ್ದು, ಸುತ್ತಮುತ್ತಲಿನ ಜನರೂ ಸಹ ಈ ಯೋಜನೆಗೆ ಕೈಜೋಡಿಸಿದ್ದಾರೆ.
ಬೆಂಗಳೂರಿನಿಂದ ಬಂದ 20 ಯುವಕರಿಂದ ಪ್ರಾರಂಭವಾದ ಕಾಮಗಾರಿ ಈಗ 200 ರಿಂದ 250 ಜನ ಕೂಲಿಕಾರ್ಮಿಕರಿಂದ ಕೆಲಸ ನಡೆಯುತ್ತಿದೆ, ಸದರಿ ಕಾಮಗಾರಿ ಕಳೆದ ವರ್ಷ ನ. 9ರÀಂದು ಪ್ರಾರಂಭವಾಗಿದ್ದು ಒಟ್ಟು 18 ಭಾಗಗಳಾಗಿ ಕಾಮಗಾರಿಯನ್ನು ವಿಂಗಡಿಸಿ 60 ಲಕ್ಷ ವೆಚ್ಚವನ್ನು ಕಾಯ್ದಿರಿಸಿದ್ದು, ಒಟ್ಟು ಈಗಾಗಲೇ 11.40ಲಕ್ಷ ಕಾಮಗಾರಿ ಪೂರ್ಣಗೊಂಡಿದೆ. ಪ್ರಸ್ತುತ 12 ಎಕರೆ ಪ್ರದೇಶದಲ್ಲಿ 6260 ವಿವಿಧ ಬಗೆಯ ಸಸಿಗಳನ್ನು ನೆಡಲಾಗಿದೆ. ಪ್ರತಿ ಸಸಿಗೂ ಅಂತರವನ್ನು ನಿಗದಿಗೊಳಿಸಿದ್ದು, ಮಳೆ ನೀರು ಬಂದಲ್ಲಿ ಗಿಡದ ಬುಡದಲ್ಲೇ ಕೆಲವು ದಿನಗಳ ಕಾಲ ನಿಲ್ಲುವಂತೆ ಜಾಗೃತೆ ವಹಿಸಲಾಗಿದೆ. ಇಂದಿರಿಂದ ಗಿಡಗಳ ಬೇರಿಕೆ ಯಾವಾಗಲು ತೇವಾಂಶ ಶಾಶ್ವತವಾಗಿರುತ್ತಿದ್ದು, ಗಿಡ ನಾಶವಾಗದಂತೆ ಬೆಳೆಯಲು ಸಹಕಾರಿಯಾತ್ತದೆ ಎಂಬ ಉದ್ದೇಶದಿಂದ ಈ ಕಾರ್ಯವನ್ನು ಮಾಡಲಾಗಿದೆ.
ತಾಲ್ಲೂಕಿನಾದ್ಯಂತ ಯಾವ ಭಾಗದಲ್ಲೂ ಸಹ ಸಸಿಗಳ ಸಂರಕ್ಷಣಗೆ ಈ ರೀತಿಯ ಕಾಂಟೂರ್ ಬಂಡಿಂಗ್ ನಿರ್ಮಾಣ ಎಲ್ಲೂ ಕೈಗೊಂಡಿಲ್ಲ. ಈ ಪ್ರದೇಶದಲ್ಲಿ 2073 ಬೇವು, 300 ರೇನ್, 40 ಆಲದ, 400 ಹೊಂಗೆ, 280 ಅರಳಿ, 100 ಹುಣಸೆ, 200 ಶವನಿ ಗಿಡಗಳನ್ನು ನೆಡಸಲಾಗಿದೆ. 8350 ಮಳೆ ನೀರು ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ.

[t4b-ticker]

You May Also Like

More From Author

+ There are no comments

Add yours