ಚಿತ್ರದುರ್ಗ, ಫೆಬ್ರವರಿ05:
ಚಿತ್ರದುರ್ಗ ನಗರ ಉಪವಿಭಾಗದ ಘಟಕ-1ರ ವ್ಯಾಪ್ತಿಯಲ್ಲಿ ನಗರಸಭೆ ವತಿಯಿಂದ ಯಂಗಮ್ಮನಕಟ್ಟೆ ಹತ್ತಿರ ಲೇಔಟ್ ಕಾಮಗಾರಿ ಇರುವ ಕಾರಣ ಫೆ.6ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಚಿತ್ರದುರ್ಗ ನಗರದ ಯಂಗಮ್ಮನಕಟ್ಟೆ ಸುತ್ತಮುತ್ತ ಐಯುಡಿಪಿ ಲೇಔಟ್, ಕೆಎಸ್ಆರ್ಟಿಸಿ ಲೇಔಟ್, ಜೋಗಿಮಟ್ಟಿ ರಸ್ತೆ, ಕಂದಾಯಗಿರಿ ನಗರ, ಕೆಹೆಚ್ಬಿ ಕಾಲೋನಿ, ಗಾಂಧಿನಗರ, ಸಾಧಿಕ್ ನಗರ, ಅಮೃತ ಆಯುರ್ವೇದಿಕ್ ಕಾಲೇಜು ಸುತ್ತಮುತ್ತ, ಟೀಚರ್ಸ್ ಕಾಲೋನಿ, ಸ್ಟೇಡಿಯಂ ರಸ್ತೆ, ಜಿಲ್ಲಾ ಪಂಚಾಯಿತಿ ಕಚೇರಿ, ಅಂಬೇಡ್ಕರ್ ಕಲ್ಯಾಣ ಮಂಟಪ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯವಾಗಲಿದೆ.
ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯವಾಹಕ ಇಂಜಿನಿಯರ್ ಹೆಚ್.ತಿಮ್ಮಣ್ಣ ತಿಳಿಸಿದ್ದಾರೆ.
[t4b-ticker]
+ There are no comments
Add yours