ಧಾರ್ಮಿಕ‌ ಕಾರ್ಯಗಳಿಂದ ನಾಡಿನಲ್ಲಿ ಶಾಂತಿ ಸುವ್ಯವಸ್ಥೆಯಿಂದ ಕೂಡಿದೆ: ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಚಳ್ಳಕೆರೆ:  ಧಾರ್ಮಿಕ ಪರಂಪರೆಯ ಭವ್ಯ ರಾಷ್ಟ್ರವಾದ ಭಾರತದಲ್ಲಿ ಇಂದು ಭಕ್ತಿಯ ಪರಾಕಾಷ್ಠೆ ಮನಮನಗಳಲ್ಲಿ ಮತ್ತು ಮನೆಮನೆಗಳಲ್ಲಿ ತುಂಬಿಕೊಂಡಿದ್ದು ಈ ಕಾರಣದಿಂದಾಗಿ ನಮ್ಮ ದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಬೇರೂರಿದೆ  ಎಂದು  ತಹಸೀಲ್ದಾರ್ ಎನ್. ರಘುಮೂರ್ತಿ ಹೇಳಿದರು.

 

 

ಚಳ್ಳಕೆರೆ ತಾಲೂಕಿನ ಟಿ. ಎನ್. ಕೋಟೆಯ ಓಬಳಾಪುರದಲ್ಲಿ ಆಂಧ್ರಪ್ರದೇಶದ ದಿಂದ ಓಬಳಾಪುರ ಆಗಮಿಸಿದ ಶ್ರೀ ಕ್ಷೇತ್ರ ಶ್ರೀಶೈಲ ಬ್ರಹ್ಮರಂಬ ಮಲ್ಲಿಕಾರ್ಜುನ ಸ್ವಾಮಿಯ ಕಲ್ಯಾಣೋತ್ಸವ ಕಾರ್ಯಕ್ರಮಕ್ಕೆ ಪಾಲ್ಗೊಂಡು ಶ್ರೀಶೈಲ ಭ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿ ಅವರ ದೇವಸ್ಥಾನದ ಬಂದಂತಹ ರಥಕ್ಕೆ ಜೆಸಿಪಿ ಮುಖಾಂತರ ಪುಷ್ಪಾರ್ಚನೆ ಮಾಡುವ ಮೂಲಕ ಗ್ರಾಮಕ್ಕೆ ಭಕ್ತಿ ಪೂರ್ವಕವಾಗಿ ನಮನ ಸಲ್ಲಿಸಿ ಮಾತನಾಡಿ ನಮ್ಮಲ್ಲಿ ದೇವಸ್ಥಾನಗಳು ನೆಲಸಿರುವುದರಿಂದ ಭಯ ಭಕ್ತಿ ಮತ್ತು ಶ್ರದ್ದೆ ಮನೆ ಮಾಡಿದ್ದೂ ಇವುಗಳು ಮನ ಪರಿವರ್ತನೆ ಮಾಡುವ ಕೇಂದ್ರಗಳಾಗಿ ಕೆಲಸ ಮಾಡುತ್ತಿವೆ ನಮ್ಮಲ್ಲಿರುವಂತಹ ನಕಾರಾತ್ಮಕವಾದ ಆಲೋಚನೆಗಳನ್ನು ಕೈಬಿಟ್ಟು ಸಕಾರಾತ್ಮಕವಾಗಿ ನಮ್ಮಗಳ ಚಿಂತನೆಗಳು ಮತ್ತು ದೃಷ್ಟಿಕೋನಗಳು ಇದ್ದಲ್ಲಿ ನಮ್ಮ ಬದುಕಿನಲ್ಲಿ ಯಶಸ್ಸುಗಳಿಸಲು ಯುವ ಸಹಕಾರಿಯಾಗುತ್ತದೆ ಓಬಳಾಪುರ ಗ್ರಾಮಸ್ಥರು ಈ ಒಂದು ಸತ್ಕಾರ್ಯದಲ್ಲಿ ತೊಡಗಿರುವುದು ಇಡೀ ತಾಲೂಕಿನ ಜನತೆಗೆ ಒಂದು ದೈವಿಕ ಶಕ್ತಿ ನೀಡಿದಂತಾಗಿದೆ ಸತ್ಕಾರ್ಯದ ಮುಖಾಂತರ ಸಮಸ್ತ ತಾಲೂಕಿನಲ್ಲಿ ಈ ವರ್ಷ ಮಳೆ ಬೆಳೆ ಮತ್ತು ಎಲ್ಲರ ಆರೋಗ್ಯ ವೃದ್ಧಿಸಲಿ ಶಾಂತಿ ಮತ್ತು ನೆಮ್ಮದಿಯು ಎಲ್ಲರಲ್ಲಿ ಮನೆ ಮಾಡಲಿ ಎಂದು ಶುಭ ಕೋರಿದರು ಈ ಸಂದರ್ಭದಲ್ಲಿ ಓಬಳಾಪುರ ಗ್ರಾಮದ ವಾಣಿಜ್ಯೋದ್ಯಮಿ ಜಯಣ್ಣ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು

[t4b-ticker]

You May Also Like

More From Author

+ There are no comments

Add yours