ಧರ್ಮ ಜಾತಿಯನ್ನು ಮೀರಿದ್ದು ಸ್ನೇಹ: ತಹಶೀಲ್ದರ್ ಎನ್.ರಘುಮೂರ್ತಿ

 

 

 

 

ನಾಯಕನಹಟ್ಟಿ:  ಧರ್ಮ ಮತ್ತು ಜಾತಿಯನ್ನು ಮೀರಿದ ಶಕ್ತಿ , ಪ್ರೀತಿ , ವಾತ್ಸಲ್ಯ ಮತ್ತು ಸಹೋದರತ್ವಕ್ಕಿದೆ ಎಂದು ತಹಶೀಲ್ದಾರ್ ಎನ್.ರಘಮೂರ್ತಿ  ಹೇಳಿದರು.

 

 

ನಾಯಕನಹಟ್ಟಿಯಲ್ಲಿ  ಜಮಾತಾ ಇಸ್ಲಾಂ ಸಂಸ್ಥೆಯವರು, ಅತಿವೃಷ್ಟಿಯಿಂದ ಉತ್ತರ ಕರ್ನಾಟಕ ದ ಗೋಕಾಕ್ ಮತ್ತು ಮಹಾರಾಷ್ಟ್ರದ ನಿರಾಶ್ರಿತ ರಿಗೆ ಆಹಾರ ಕಿಟ್ ಹಾಗೂ ಬಟ್ಟೆಗಳನ್ನು ಎರಡು ಲೋಡ್ ಗಳಲ್ಲಿ ಕಳುಹಿಸುತ್ತಿರುವುದು ಹನ್ನೆರಡನೆ ಶತಮಾನದಲ್ಲಿ ಬಸವಣ್ಣನವರು ಅಂದೇ ಹೇಳಿದ್ದರು. ಹೊನ್ನಿನೊಳಗೊಂದರೆಯ ನೂಲಿನೊಳಗೊಂದರೆಯ , ಅನ್ನದೊಳಗೊಂಡದಗುಳ, ಇಂದಿರಿಗೆ, ನಾಳಿಗೆ ಬೇಕೆಂದೆಡೆ ಮೆಚ್ಚನಾ ಕೂಡಲ ಸಂಗಮದೇವ ಎಂದರು.
ಅದರನುಸಾರ ಈ ಭಾಗದ ಮುಸ್ಲಿಂ ಭಾಂದವರು ಆರ್ಥಿಕವಾಗಿ ಅಷ್ಟೇನೂ ಪ್ರಬಲವಾಗಿಲ್ಲದಿದ್ದರು ಕಷ್ಟದಲ್ಲಿ ಇರುವ ನಿರಾಶ್ರಿತರ ಸಹಾಯಕ್ಕೆ ಸಹಕಾರ ಮಾಡುತ್ತಿರುವುದು ಅನುಕರಣೀಯ ಸರ್ಕಾರಗಳು  ಇಲಾಖೆಯವರು ಮಾಡಬೇಕಾದ ಈ ಕೆಲಸವನ್ನು ಸಂಸ್ಥೆಯವರು ಮಾಡುತ್ತಿರುವುದು ಶ್ಲಾಘನೀಯ ಎಂದರು.


ಸಮಾರಂಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಅನ್ವರ್, ಪುರಸಭೆ ಮುಖ್ಯಾಧಿಕಾರಿ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ಮುಸ್ಲಿಂ ಭಾಂಧವರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours