ದೇಶದ ಕೋಟ್ಯಾಂತರ ಜನರ ಬದುಕಿಗೆ ಸ್ವಾಭಿಮಾನದ ಬೆಳಕನ್ನು ತುಂಬಿದ ಮಹಾನ್ ವ್ಯಕ್ತಿ ಅಂಬೇಡ್ಕರ್: ರಾಜ್ಯ ಸಂಚಾಲಕ ಎಂ.ಗುರುಮೂರ್ತಿ

 

 

 

 

ಹೊಳಲ್ಕೆರೆ : ಡಾ.ಬಿ.ಆರ್.ಆಂಬೇಡ್ಕರ್ ಪುರೋಹಿತ ಶಾಹಿಯ ಕೌರ್ಯಕ್ಕೆ ಶತಶತಮಾನಗಳಿಂದ ಶರಣಾಗಿ ಗುಲಾಮರಂತೆ ಬದುಕ ಸಾಗಿಸುತ್ತಿದ್ದ ದೇಶದ ಕೋಟ್ಯಾಂತರ ಜನರ ಬದುಕಿಗೆ ಸ್ವಾಭಿಮಾನದ ಬೆಳಕನ್ನು ತುಂಬಿದ ಮಹಾನ್ ವ್ಯಕ್ತಿ ಎಂದು ದ.ಸಂ.ಸ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ತಿಳಿಸಿದ್ದಾರೆ.
ಅವರು ಪಟ್ಟಣದ ವಾಲ್ಮೀಕಿ ಭವನದಲ್ಲಿ ಪ್ರೋ.ಬಿ.ಕೃಷ್ಣಪ್ಪ ಸ್ಥಾಪಿತ ತಾಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹಾನಾಯಕ ಡಾ.ಬಿ.ಆರ್.ಆಂಬೇಡ್ಕರ್ ೬೫ನೇ ಮಹಾ ಪರಿನಿಬ್ಬಾಣ ದಿನ ಹಾಗೂ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅನಾಧಿಕಾಲದಿಂದ ಜನರನ್ನು ಗುಲಾಮರನ್ನಾಗಿ ಶೋಷಿತರನ್ನಾಗಿ, ದಲಿತನನ್ನಾಗಿ ನಿರ್ಲಷ್ಯಿಸಿಸುತ್ತಿದ್ದ ಬ್ರಹ್ಮಣ ಶಾಯಿ ಪದ್ದತಿಯನ್ನು ವಿರೋಧಿಸಿ ಸಂವಿಧಾನ ಮೂಲಕ ದೇಶದ ಪ್ರತಿಯೊಬ್ಬರಿಗೂ ಸಮಾನವಾದ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದ್ದಾರೆ. ಮಹಿಳೆಯರಿಗೆ ಸಮಾನತೆ ನೀಡಿದ್ದು ಡಾ.ಬಿ.ಆರ್.ಅಂಬೇಡ್ಕರ್. ಅದರೆ ಮಹಿಳೆಯರು ಇವರನ್ನು ಮರೆತುಬಿಟ್ಟಿದ್ದಾರೆ. ಸನಾನ ಕಾಲದಲ್ಲಿ ಹಣ್ಣನ್ನು ಶೋಷಣೆ ಮಾಡುತ್ತಿದ್ದ ಬ್ರಹ್ಮಣ ಶಾಹಿಯಿಂದ ಹೆಣ್ಣು ವಿಧವಾದ ಸಂಕೋಲೆಗೆ ಸಿಕ್ಕಿಕೊಂಡಿದ್ದನ್ನು ಬಾಬಾ ಸಾಹೇಬ್ ಮುಕ್ತಿಗೊಳಿಸಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಚಾಲಕರಾದ ಕೆಂಗುAಟೆ ಜಯಣ್ಣ ಮಾತನಾಡಿ, ಜರನ್ನು ಗುಲಾಮಗಿಯಿಂದ ಮುಕ್ತಗೊಳಿಸಲು ಬಾಬಾ ಸಾಹೇಬ್ ಅಂಬೇಡ್ಕರ್ ತಮ್ಮ ಜೀವಮಾನವಿಡಿ ಶ್ರಮಿಸಿದ್ದಾರೆ. ಸಂವಿಧಾನ ಎನ್ನುವ ಅತ್ಯಂತ ಪ್ರಭಲವಾದ ಆಸ್ತçವನ್ನು ದೇಶಕ್ಕೆ ನೀಡಿದ್ದಾರೆ. ಶೋಷಿತ ಜನರ ಕೈಗೆ ಆಧಿಕಾರ ಕೊಟ್ಟಿದ್ದಾರೆ. ಜಾತಿ ಮತ್ತು ವರ್ಣದ ಹೆಸರಿನಲ್ಲಿ ಅಮಾನವೀಯ ತಾರತಮ್ಮಕ್ಕೆ ಒಳಗಾಗಿದ ಜನರ ಪರವಾಗಿ ಹೋರಾಟ ನಡೆಸಿದ್ದಾರೆ. ಅಂದಿನ ಕಾಲದ ಶೋಷಣೆ ವಿರುದ್ದ ಹೋರಾಟ ನಡೆಸಿ ಜನರ ದ್ವನಿಯಾಗಿ, ಸ್ವಾಭಿಮಾನಿ ಭವಿಷ್ಯವನ್ನು ನೀಡಿದ್ದಾರೆ. ಸಾಮಾಜಿಕ ಪರಿವರ್ತನೆ ಮೂಲಕ ಶೋಷಿತರಿಗೆ ಹೊಸ ಬೆಳಕು ನೀಡಿದ್ದಾರೆ. ಅವರ ಮೌಲ್ಯಗಳನ್ನು ನಾವೇಲ್ಲ ಅರಿತುಕೊಳ್ಳಬೇಕು. ಜನರನ್ನು ಧರ್ಮ ಜಾತಿ ಹೆಸರಲ್ಲಿ ವಂಚಿಸುವವರ ವಿರುದ್ದ ಹೋರಾಟ ನಡೆಸಬೇಕೆಂದÀರು.
ಕಾರ್ಯಕ್ರಮದಲ್ಲಿ ತಾಲೂಕು ಸಂಚಾಲಕ ನವೀನ್‌ಮದ್ದೇರು, ಹಿರಿಯ ಮುಖಂಡ ರಾಜಪ್ಪ, ಸಂಚಾಲಕ ರುದ್ರೇಶ್, ಜಿಲ್ಲಾ ಸಂಚಾಲಕ ಪ್ರಸನ್ನಕುಮಾರ್, ಸುಂದರಮೂರ್ತಿ, ಮಂಜುನಾಥ, ಶಿವಣ್ಣ, ಮಂಜುನಾಥ ಆರ್.ಪ್ರಕಾಶ್, ಪ್ರಭಾಕರ್ ಸೇರಿದಂತೆ ಹಲವಾರು ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

 

[t4b-ticker]

You May Also Like

More From Author

+ There are no comments

Add yours